عَنْ أبي سَعيدٍ الخُدريَّ رضي الله عنه قال: قال رسولُ الله صلَّى الله عليه وسلم ِ:
«إزْرَةُ المُسْلمِ إلى نصفِ السَّاق، وَلَا حَرَجَ -أو لا جُنَاحَ- فيما بينَهُ وبينَ الكعبينِ، وما كان أسفلَ منَ الكعبين فهو في النار، مَن جرَّ إزارَهُ بطرًا لم يَنْظُرِ اللهُ إليه».
[صحيح] - [رواه أبو داود وابن ماجه وأحمد] - [سنن أبي داود: 4093]
المزيــد ...
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಮುಸ್ಲಿಮನ ಕೆಳಭಾಗದ ಉಡುಪು (ಲುಂಗಿ, ಪ್ಯಾಂಟು) ಕಣಕಾಲಿನ ಅರ್ಧದವರೆಗೆ ಇರಬೇಕು. ಅದು (ಕಣಕಾಲಿನ) ಮಧ್ಯದಿಂದ ಹರಡುಗಂಟುಗಳವರೆಗೆ ಇದ್ದರೆ ಯಾವುದೇ ತೊಂದರೆಯಿಲ್ಲ - ಅಥವಾ ಯಾವುದೇ ದೋಷವಿಲ್ಲ. ಆದರೆ ಹರಡುಗಂಟುಗಳಿಗಿಂತ ಕೆಳಗಿರುವ ಭಾಗವು ನರಕದಲ್ಲಿರುತ್ತದೆ. ಯಾರು ತಮ್ಮ ಕೆಳಭಾಗದ ಉಡುಪನ್ನು ಅಹಂಕಾರದಿಂದ ಎಳೆದೊಯ್ಯುತ್ತಾರೋ ಅವರನ್ನು ಅಲ್ಲಾಹು ಕಣ್ಣೆತ್ತಿ ನೋಡಲಾರನು."
[صحيح] - [رواه أبو داود وابن ماجه وأحمد] - [سنن أبي داود - 4093]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮುಸ್ಲಿಂ ಪುರುಷರ ಕೆಳಭಾಗದ ಉಡುಪಿಗೆ, (ಪುರುಷರ ಕೆಳಭಾಗವನ್ನು ಮುಚ್ಚುವ ಎಲ್ಲವೂ ಇದರಲ್ಲಿ ಒಳಪಡುತ್ತದೆ) ಮೂರು ಸ್ಥಿತಿಗಳನ್ನು ವಿವರಿಸಿದ್ದಾರೆ: ಮೊದಲನೆಯದು: ಅಪೇಕ್ಷಣೀಯ ಸ್ಥಿತಿ. ಅದು ಕಣಕಾಲಿನ ಅರ್ಧದವರೆಗೆ ಇರುವುದು. ಎರಡನೆಯದು: ಯಾವುದೇ ಅಸಹ್ಯತೆ (ಕರಾಹತ್) ಇಲ್ಲದೆ ಅನುಮತಿಸಲಾದ ಸ್ಥಿತಿ. ಅದು ಕಣಕಾಲುಗಳ ಮಧ್ಯದಿಂದ ಹರಡುಗಂಟುಗಳವೆರೆಗೆ ಇರುವುದು. ಹರಡುಗಂಟುಗಳು ಎಂದರೆ ಕಣಕಾಲು ಮತ್ತು ಪಾದವನ್ನು ಜೋಡಿಸುವ ಎರಡು ಉಬ್ಬಿದ ಮೂಳೆಗಳು. ಮೂರನೆಯದು: ನಿಷಿದ್ಧವಾದ ಸ್ಥಿತಿ. ಅದು ಹರಡುಗಂಟುಗಳಿಗಿಂತ ಕೆಳಗಿರುವುದು. ಇವರು ನರಕಾಗ್ನಿಗೆ ಆಹುತಿಯಾಗಬಹುದಾದ ಭಯವಿದೆ. ಅದು ಅಹಂಕಾರ, ಜಂಭ ಮತ್ತು ಅತಿರೇಕದ ಕಾರಣದಿಂದಾಗಿದ್ದರೆ, ಅಲ್ಲಾಹು ಅವರನ್ನು ಕಣ್ಣೆತ್ತಿಯೂ ನೋಡಲಾರ.