عن ابن عمر رضي الله عنهما قال: قال رسول الله صلى الله عليه وسلم:
«مَا زَالَ يُوصِينِي جِبْرِيلُ بِالْجَارِ، حَتَّى ظَنَنْتُ أَنَّهُ سَيُوَرِّثُهُ».
[صحيح] - [متفق عليه] - [صحيح البخاري: 6014]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ನನಗೆ ನನ್ನ ನೆರೆಹೊರೆಯವರ ಬಗ್ಗೆ ನಿರಂತರ ಉಪದೇಶ ಮಾಡುತ್ತಲೇ ಇದ್ದರು. ಎಲ್ಲಿಯವರೆಗೆಂದರೆ ಅವರು ನನ್ನ ನೆರೆಯವನನ್ನು ನನ್ನ ಆಸ್ತಿಯಲ್ಲಿ ಹಕ್ಕುದಾರನನ್ನಾಗಿ ಮಾಡುತ್ತಾರೋ ಎಂದು ನಾನು ಭಾವಿಸತೊಡಗಿದೆ."
[صحيح] - [متفق عليه] - [صحيح البخاري - 6014]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ನೆರೆಹೊರೆಯವರ ಬಗ್ಗೆ ಕಾಳಜಿ ವಹಿಸಬೇಕೆಂದು ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಅವರಿಗೆ ಪದೇ ಪದೇ ಆದೇಶಿಸುತ್ತಿದ್ದರು. ನೆರೆಹೊರೆಯವರು ಎಂದರೆ ಮನೆಯ ಸಮೀಪದಲ್ಲಿ ವಾಸಿಸುವವರು. ಅವರು ಮುಸ್ಲಿಮರಾಗಿದ್ದರೂ ಅಲ್ಲದಿದ್ದರೂ, ಸಂಬಂಧಿಕರಾಗಿದ್ದರೂ ಅಲ್ಲದಿದ್ದರೂ ಅವರು ನೆರೆಹೊರೆಯವರಾಗಿದ್ದಾನೆ. ಅವರ ಹಕ್ಕುಗಳನ್ನು ಸಂರಕ್ಷಿಸಬೇಕು ಮತ್ತು ಅವರಿಗೆ ತೊಂದರೆ ಕೊಡಬಾರದು. ಅವರಿಗೆ ಒಳಿತು ಮಾಡಬೇಕು ಮತ್ತು ಅವರು ತೊಂದರೆ ಕೊಟ್ಟರೆ ತಾಳ್ಮೆಯಿಂದಿರಬೇಕು. ಒಬ್ಬ ವ್ಯಕ್ತಿ ನಿಧನನಾದರೆ ಅವನ ನೆರೆಹೊರೆಯವರಿಗೂ ಅವನ ಆಸ್ತಿಯಲ್ಲಿ ಹಕ್ಕಿದೆ ಎಂಬ ಕುರ್‌ಆನ್ ವಚನ ಅವತೀರ್ಣವಾಗಬಹುದೋ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಭಾವಿಸುವಷ್ಟರ ಮಟ್ಟಿಗೆ ಈ ರೀತಿ ನೆರೆಹೊರೆಯವರ ಹಕ್ಕುಗಳನ್ನು ಗೌರವಿಸುವುದರ ಬಗ್ಗೆ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ನಿರಂತರ ಉಪದೇಶಿಸುತ್ತಿದ್ದರು.