+ -

عَنْ أَبِي ذَرٍّ رَضيَ اللهُ عنهُ قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«يَا أَبَا ذَرٍّ إِذَا طَبَخْتَ مَرَقَةً فَأَكْثِرْ مَاءَهَا، وَتَعَاهَدْ جِيرَانَكَ».

[صحيح] - [رواه مسلم] - [صحيح مسلم: 2625]
المزيــد ...

ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಓ ಅಬೂ ದರ್! ನೀನು ಸಾರು ತಯಾರಿಸಿದರೆ, ಅದರ ನೀರನ್ನು ಹೆಚ್ಚಿಸು, ಮತ್ತು ನಿನ್ನ ನೆರೆಯವರನ್ನು ಪರಿಗಣಿಸು (ಅವರಿಗೂ ಅದರಿಂದ ಸ್ವಲ್ಪ ಕೊಡು)".

[صحيح] - [رواه مسلم] - [صحيح مسلم - 2625]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬೂ ದರ್ ಅಲ್-ಗಿಫಾರೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ, ಅವರೇನಾದರೂ ಸಾರು ತಯಾರಿಸಿದರೆ, ಅದಕ್ಕೆ ನೀರು ಸೇರಿಸಿ ಸಾರನ್ನು ಹೆಚ್ಚಿಸಲು, ಮತ್ತು ತಮ್ಮ ನೆರೆಯವರನ್ನು ಪರಿಗಣಿಸಲು (ಅವರಿಗೂ ಸ್ವಲ್ಪ ನೀಡಲು) ಪ್ರೋತ್ಸಾಹಿಸಿದರು.

ಹದೀಸಿನ ಪ್ರಯೋಜನಗಳು

  1. ನೆರೆಯವರೊಂದಿಗೆ ಉತ್ತಮವಾಗಿ ವರ್ತಿಸಲು ಪ್ರೋತ್ಸಾಹಿಸಲಾಗಿದೆ.
  2. ನೆರೆಯವರ ನಡುವೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಅಪೇಕ್ಷಿತವಾಗಿದೆ. ಏಕೆಂದರೆ ಅದು ಪ್ರೀತಿಯನ್ನು ಹುಟ್ಟುಹಾಕುತ್ತದೆ ಮತ್ತು ಸ್ನೇಹವನ್ನು ಹೆಚ್ಚಿಸುತ್ತದೆ. ಆಹಾರಕ್ಕೆ (ಒಳ್ಳೆಯ) ಸುವಾಸನೆಯಿದ್ದರೆ ಮತ್ತು ನೆರೆಯವರ ಬಡತನವನ್ನು ತಿಳಿದಿದ್ದರೆ, ಈ ಉಡುಗೊರೆ ವಿನಿಮಯಗೆ ಇನ್ನಷ್ಟು ಪುಷ್ಠಿ ದೊರೆಯುತ್ತದೆ.
  3. ಒಳಿತನ್ನು ಮಾಡಲು ಮತ್ತು ಸಾಧ್ಯವಾದಷ್ಟನ್ನು, ಅದು ಸ್ವಲ್ಪವೇ ಆಗಿದ್ದರೂ, ನೀಡಲು ಹಾಗೂ ಮುಸ್ಲಿಮರಿಗೆ ಸಂತೋಷವನ್ನು ಹಂಚಲು ಪ್ರೋತ್ಸಾಹಿಸಲಾಗಿದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية الأمهرية الهولندية الغوجاراتية الدرية الرومانية المجرية الموري الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ