عن مَعقِلِ بن يَسار المُزَنِيّ رضي الله عنه قال: إني سمعت رسول الله صلى الله عليه وسلم يقول:
«مَا مِنْ عَبْدٍ يَسْتَرْعِيهِ اللهُ رَعِيَّةً، يَمُوتُ يَوْمَ يَمُوتُ وَهُوَ غَاشٌّ لِرَعِيَّتِهِ، إِلَّا حَرَّمَ اللهُ عَلَيْهِ الْجَنَّةَ».
[صحيح] - [متفق عليه] - [صحيح مسلم: 142]
المزيــد ...
ಮಅಕಿಲ್ ಬಿನ್ ಯಸಾರ್ ಮುಝನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
“ಅಲ್ಲಾಹು ಒಬ್ಬನಿಗೆ ಆಡಳಿತದ ಅಧಿಕಾರವನ್ನು ನೀಡಿ, ಅವನು ಇಹಲೋಕ ತ್ಯಜಿಸುವಾಗ ತನ್ನ ಪ್ರಜೆಗಳಿಗೆ ವಂಚನೆ ಮಾಡಿದ ಸ್ಥಿತಿಯಲ್ಲಿ ಇಹಲೋಕ ತ್ಯಜಿಸಿದರೆ ಅಲ್ಲಾಹು ಅವನಿಗೆ ಸ್ವರ್ಗವನ್ನು ನಿಷೇಧಿಸದೇ ಇರಲಾರ.”
[صحيح] - [متفق عليه] - [صحيح مسلم - 142]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರನ್ನೆಲ್ಲಾ ಅಲ್ಲಾಹು ಜನರ ಮೇಲೆ ಆಡಳಿತಗಾರರನ್ನಾಗಿ ಅಥವಾ ಹೊಣೆಗಾರರನ್ನಾಗಿ ಮಾಡುತ್ತಾನೋ, ಅದು ಆಡಳಿತಗಾರರು ನಡೆಸುವ ಸಾರ್ವಜನಿಕ ಆಡಳಿತವಾಗಿದ್ದರೂ, ಅಥವಾ ಪುರುಷನು ಅಥವಾ ಮಹಿಳೆಯು ನಡೆಸುವ ಮನೆಯೊಳಗಿನ ಆಡಳಿತವಾಗಿದ್ದರೂ, ಅವರು ತಮ್ಮ ಅಧೀನದಲ್ಲಿರುವವರ ಹಕ್ಕುಗಳಲ್ಲಿ ಏನಾದರೂ ಚ್ಯುತಿ ಮಾಡುವುದು, ಅವರಿಗೆ ಮೋಸ ಮಾಡುವುದು, ಅಥವಾ ಅವರೊಡನೆ ಪ್ರಾಮಾಣಿಕತೆ ತೋರದಿರುವುದು ಮುಂತಾದ ಅವರ ಧಾರ್ಮಿಕ ಮತ್ತು ಭೌತಿಕ ಹಕ್ಕುಗಳನ್ನು ನೆರವೇರಿಸದಿದ್ದರೆ ಅವನು ಈ ಕಠೋರ ಶಿಕ್ಷೆಗೆ ಅರ್ಹನಾಗುತ್ತಾನೆ.