+ -

عَنْ ‌أَنَسِ بْنِ مَالِكٍ رَضِيَ اللهُ عَنْهُ:
أَنَّ النَّبِيَّ صَلَّى اللهُ عَلَيْهِ وَسَلَّمَ افْتَقَدَ ثَابِتَ بْنَ قَيْسٍ، فَقَالَ رَجُلٌ: يَا رَسُولَ اللهِ، أَنَا أَعْلَمُ لَكَ عِلْمَهُ، فَأَتَاهُ فَوَجَدَهُ جَالِسًا فِي بَيْتِهِ، مُنَكِّسًا رَأْسَهُ، فَقَالَ: مَا شَأْنُكَ؟ فَقَالَ شَرٌّ، كَانَ يَرْفَعُ صَوْتَهُ فَوْقَ صَوْتِ النَّبِيِّ صَلَّى اللهُ عَلَيْهِ وَسَلَّمَ، فَقَدْ حَبِطَ عَمَلُهُ، وَهُوَ مِنْ أَهْلِ النَّارِ، فَأَتَى الرَّجُلُ فَأَخْبَرَهُ أَنَّهُ قَالَ كَذَا وَكَذَا، فَرَجَعَ الْمَرَّةَ الْآخِرَةَ بِبِشَارَةٍ عَظِيمَةٍ، فَقَالَ: «اذْهَبْ إِلَيْهِ فَقُلْ لَهُ: إِنَّكَ لَسْتَ مِنْ أَهْلِ النَّارِ، وَلَكِنْ مِنْ أَهْلِ الْجَنَّةِ».

[صحيح] - [متفق عليه] - [صحيح البخاري: 3613]
المزيــد ...

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
"ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಬಿತ್ ಬಿನ್ ಕೈಸ್‌ರನ್ನು ತುಂಬಾ ದಿನ ಕಾಣಲಿಲ್ಲ. ಆಗ ಒಬ್ಬ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಅವರ ಬಗ್ಗೆ ಮಾಹಿತಿ ತರುತ್ತೇನೆ." ಆ ವ್ಯಕ್ತಿ ಸಾಬಿತ್‌ರ ಮನೆಗೆ ಹೋದಾಗ ಅವರು ಅಲ್ಲಿ ತಲೆ ತಗ್ಗಿಸಿ ಕುಳಿತಿದ್ದರು. ಅವರು ಕೇಳಿದರು: "ಏನಾಯಿತು?" ಸಾಬಿತ್ ಉತ್ತರಿಸಿದರು: "ಬಹಳ ಕೆಟ್ಟದ್ದು. ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಧ್ವನಿಗಿಂತಲೂ ಎತ್ತರದ ಧ್ವನಿಯಲ್ಲಿ ಮಾತನಾಡುತ್ತೇನೆ. ಆದ್ದರಿಂದ ನನ್ನ ಕರ್ಮಗಳೆಲ್ಲವೂ ನಿಷ್ಫಲವಾಗಿವೆ. ನಾನು ನರಕವಾಸಿಗಳಲ್ಲಿ ಸೇರಿದ್ದೇನೆ." ಆ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ವಿಷಯವನ್ನು ತಿಳಿಸಿದರು. ನಂತರ ಅವರು ಪುನಃ ಸಾಬಿತ್‌ರ ಬಳಿಗೆ ಹೋಗಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ ಈ ಶುಭಸುದ್ದಿಯನ್ನು ತಿಳಿಸಿದರು: "ಹೋಗು! ಸಾಬಿತ್‌ರೊಂದಿಗೆ ಹೇಳು: ನೀವು ನರಕವಾಸಿಯಲ್ಲ, ಬದಲಿಗೆ ನೀವು ಸ್ವರ್ಗವಾಸಿಯಾಗಿದ್ದೀರಿ."

[صحيح] - [متفق عليه]

ವಿವರಣೆ

ಒಮ್ಮೆ ಸಾಬಿತ್ ಬಿನ್ ಕೈಸ್ ನಾಪತ್ತೆಯಾದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಬಗ್ಗೆ ವಿಚಾರಿಸಿದರು. ಆಗ ಒಬ್ಬ ವ್ಯಕ್ತಿ ಹೇಳಿದರು: "ಅವರು ನಾಪತ್ತೆಯಾದ ಕಾರಣವನ್ನು ನಾನು ಕಂಡುಹಿಡಿಯುತ್ತೇನೆ." ಹೀಗೆ ಆ ವ್ಯಕ್ತಿ ಸಾಬಿತ್‌ರ ಮನೆಗೆ ಹೋದಾಗ, ಅವರು ದುಃಖದಿಂದ ತಲೆ ತಗ್ಗಿಸಿ ಕುಳಿತಿದ್ದರು. ಅವರು ಕೇಳಿದರು: "ಏನಾಯಿತು?" ಸಾಬಿತ್ ಉತ್ತರಿಸಿದರು: "ನನಗೆ ತುಂಬಾ ಕೆಟ್ಟದ್ದು ಸಂಭವಿಸಿದೆ. ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಧ್ವನಿಗಿಂತಲೂ ಎತ್ತರದ ಧ್ವನಿಯಲ್ಲಿ ಮಾತನಾಡುತ್ತೇನೆ. ಆದರೆ ಹೀಗೆ ಮಾತನಾಡುವವರಿಗೆ ಅಲ್ಲಾಹು ಅವರ ಕರ್ಮಗಳನ್ನು ನಿಷ್ಫಲಗೊಳಿಸುತ್ತೇನೆಂದು ಮತ್ತು ಅವನು ನರಕವಾಸಿಯಾಗುತ್ತಾನೆಂದುಎಚ್ಚರಿಕೆ ನೀಡಿದ್ದಾನೆ."
ಆ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ನಡೆದ ಸಂಗತಿಯನ್ನು ತಿಳಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರೊಂದಿಗೆ ಸಾಬಿತ್ ಬಿನ್ ಕೈಸ್‌ರ ಬಳಿಗೆ ಹೋಗಿ, ಅವರು ನರಕವಾಸಿಯಲ್ಲ, ಬದಲಿಗೆ ಅವರು ಸ್ವರ್ಗವಾಸಿಯಾಗಿದ್ದಾರೆ, ಅವರ ಧ್ವನಿಯು ಎತ್ತರವಾಗಿರುವುದು ಹುಟ್ಟಿನಿಂದಲೇ ಬಂದದ್ದಾಗಿದೆ ಎಂದು ಅವರಿಗೆ ಶುಭಸುದ್ದಿ ತಿಳಿಸಲು ಹೇಳಿದರು. ಸಾಬಿತ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಮದೀನಾ ನಿವಾಸಿಗಳ ಭಾಷಣಕಾರರಾಗಿದ್ದರು.

ಅನುವಾದ: ಆಂಗ್ಲ ಉರ್ದು ಇಂಡೋನೇಷಿಯನ್ ಉಯ್ಘರ್ ಬಂಗಾಳಿ ತುರ್ಕಿ ಬೊಸ್ನಿಯನ್ ಸಿಂಹಳೀಯ ಹಿಂದಿ ವಿಯೆಟ್ನಾಮೀಸ್ ಕುರ್ದಿಷ್ ಹೌಸಾ ಮಲಯಾಳಂ ತೆಲುಗು ಸ್ವಾಹಿಲಿ ಬರ್ಮೀ ಥಾಯ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية الإيطالية الأورومو الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಸಾಬಿತ್ ಬಿನ್ ಕೈಸ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ರ ಶ್ರೇಷ್ಠತೆಯನ್ನು ಮತ್ತು ಅವರು ಸ್ವರ್ಗವಾಸಿಯೆಂದು ತಿಳಿಸಲಾಗಿದೆ.
  2. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಚರರ ಬಗ್ಗೆ ಕಾಳಜಿಯನ್ನು ಹೊಂದಿದ್ದರು ಮತ್ತು ಅವರು ಕಾಣದೇ ಹೋದರೆ ಅನ್ವೇಷಿಸುತ್ತಿದ್ದರು.
  3. ಕರ್ಮಗಳು ನಿಷ್ಫಲವಾಗುವುದರ ಬಗ್ಗೆ ಸಹಾಬಿಗಳು ಹೊಂದಿದ್ದ ಆತಂಕ ಮತ್ತು ಭಯವನ್ನು ತಿಳಿಸಲಾಗಿದೆ.
  4. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೀವಂತವಿರುವಾಗ ಅವರಿಗೆ ಗೌರವ ಕೊಡುವುದು ಮತ್ತು ಅವರೊಂದಿಗೆ ಮಾತನಾಡುವಾಗ ಧ್ವನಿಯನ್ನು ತಗ್ಗಿಸುವುದು, ಹಾಗೂ ಅವರು ನಿಧನರಾದ ಬಳಿಕ ಅವರ ಸುನ್ನತ್‌ಗೆ ಕಿವಿಗೊಡುವಾಗ ಮೌನವಾಗಿರುವುದು ಕಡ್ಡಾಯವಾಗಿದೆ.
ಇನ್ನಷ್ಟು