+ -

عَنِ ‌ابْنِ عُمَرَ رضي الله عنهما:
أَنَّ رَسُولَ اللهِ صَلَّى اللهُ عَلَيْهِ وَسَلَّمَ خَطَبَ النَّاسَ يَوْمَ فَتْحِ مَكَّةَ، فَقَالَ: «يَا أَيُّهَا النَّاسُ، إِنَّ اللهَ قَدْ أَذْهَبَ عَنْكُمْ عُبِّيَّةَ الْجَاهِلِيَّةِ وَتَعَاظُمَهَا بِآبَائِهَا، فَالنَّاسُ رَجُلَانِ: بَرٌّ تَقِيٌّ كَرِيمٌ عَلَى اللهِ، وَفَاجِرٌ شَقِيٌّ هَيِّنٌ عَلَى اللهِ، وَالنَّاسُ بَنُو آدَمَ، وَخَلَقَ اللهُ آدَمَ مِنْ تُرَابٍ، قَالَ اللهُ: {يَا أَيُّهَا النَّاسُ إِنَّا خَلَقْنَاكُمْ مِنْ ذَكَرٍ وَأُنْثَى وَجَعَلْنَاكُمْ شُعُوبًا وَقَبَائِلَ لِتَعَارَفُوا إِنَّ أَكْرَمَكُمْ عِنْدَ اللهِ أَتْقَاكُمْ إِنَّ اللهَ عَلِيمٌ خَبِيرٌ} [الحجرات: 13]».

[صحيح] - [رواه الترمذي وابن حبان] - [سنن الترمذي: 3270]
المزيــد ...

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
"ಮಕ್ಕಾ ವಿಜಯದ ದಿನದಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಚನ ನೀಡುತ್ತಾ ಹೇಳಿದರು: "ಓ ಜನರೇ! ಅಲ್ಲಾಹು ನಿಮ್ಮಿಂದ ಅಜ್ಞಾನಕಾಲದ ದರ್ಪ ಮತ್ತು ಪೂರ್ವಜರ ಹೆಸರಿನಲ್ಲಿ ಜಂಭಕೊಚ್ಚುವುದನ್ನು ತೆಗೆದುಹಾಕಿದ್ದಾನೆ. ಜನರಲ್ಲಿ ಎರಡು ವಿಧಗಳಿವೆ: ಅಲ್ಲಾಹನ ಗೌರವಕ್ಕೆ ಪಾತ್ರರಾದ ಧರ್ಮನಿಷ್ಠ, ನೀತಿವಂತ ಜನರು ಮತ್ತು ಅಲ್ಲಾಹು ತುಚ್ಛವಾಗಿ ಪರಿಗಣಿಸುವ ಕೆಟ್ಟ, ನತದೃಷ್ಟ ಜನರು. ಮನುಷ್ಯರೆಲ್ಲರೂ ಆದಮರ ಮಕ್ಕಳು. ಅಲ್ಲಾಹು ಆದಮರನ್ನು ಮಣ್ಣಿನಿಂದ ಸೃಷ್ಟಿಸಿದನು. ಅಲ್ಲಾಹು ಹೇಳುತ್ತಾನೆ: "ಜನರೇ! ನಿಶ್ಚಯವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿದ್ದೇವೆ. ನೀವು ಪರಸ್ಪರ ಗುರುತಿಸುವುದಕ್ಕಾಗಿ ನಾವು ನಿಮ್ಮನ್ನು ವಿಭಿನ್ನ ಜನಾಂಗ ಮತ್ತು ಗೋತ್ರಗಳನ್ನಾಗಿ ಮಾಡಿದೆವು. ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯಧಿಕ ದೇವಭಯವುಳ್ಳವನು ಯಾರೋ ಅವನೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ಗೌರವಾನ್ವಿತನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸೂಕ್ಷ್ಮ ಜ್ಞಾನಿಯಾಗಿದ್ದಾನೆ." [ಹುಜುರಾತ್ 13]."

[صحيح] - [رواه الترمذي وابن حبان] - [سنن الترمذي - 3270]

ವಿವರಣೆ

ಮಕ್ಕಾ ವಿಜಯದ ದಿನದಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಚನ ನೀಡುತ್ತಾ ಹೇಳಿದರು: ಓ ಜನರೇ! ನಿಶ್ಚಯವಾಗಿಯೂ ಅಲ್ಲಾಹು ನಿಮ್ಮಿಂದ ಅಜ್ಞಾನಕಾಲದ ಅಹಂಕಾರ ಮತ್ತು ಪೂರ್ವಜರ ಹೆಸರು ಹೇಳಿ ಜಂಭಕೊಚ್ಚುವುದನ್ನು ತೆಗೆದುಹಾಕಿದ್ದಾನೆ. ಜನರಲ್ಲಿ ಎರಡು ವಿಧಗಳಿವೆ:
ಒಂದೋ ಅವರು ಸತ್ಯವಿಶ್ವಾಸಿಗಳು, ಧರ್ಮನಿಷ್ಠರು ಮತ್ತು ಅಲ್ಲಾಹನನ್ನು ಆರಾಧಿಸುವವರಾಗಿದ್ದಾರೆ. ಇಂತಹ ಜನರು ಅಲ್ಲಾಹನ ಗೌರವಕ್ಕೆ ಪಾತ್ರರಾದವರು. ಅವರಿಗೆ ಯಾವುದೇ ಕುಲಮಹಿಮೆ ಅಥವಾ ಸ್ಥಾನಮಾನವಿಲ್ಲದಿದ್ದರೂ ಸಹ.
ಅಥವಾ ಅವರು ಸತ್ಯನಿಷೇಧಿಗಳು, ದುಷ್ಟರು ಮತ್ತು ನತದೃಷ್ಟರಾಗಿದ್ದಾರೆ. ಇವರು ಅಲ್ಲಾಹನ ದೃಷ್ಟಿಯಲ್ಲಿ ನೀಚರು ಮತ್ತು ತುಚ್ಛರು. ಅವರಿಗೆ ಕುಲಮಹಿಮೆ ಅಥವಾ ಸ್ಥಾನಮಾನಗಳಿದ್ದರೂ ಸಹ.
ಮನುಷ್ಯರೆಲ್ಲರೂ ಆದಮರ ಮಕ್ಕಳು. ಅಲ್ಲಾಹು ಆದಮರನ್ನು ಮಣ್ಣಿನಿಂದ ಸೃಷ್ಟಿಸಿದನು. ಯಾರ ಮೂಲವು ಮಣ್ಣಿನಿಂದಾಗಿದೆಯೋ ಅವರಿಗೆ ಅಹಂಕಾರಪಡುವುದು, ಜಂಭಕೊಚ್ಚುವುದು ಯೋಗ್ಯವಲ್ಲ. ಅಲ್ಲಾಹನ ಈ ವಚನ ಈ ವಿಷಯವನ್ನು ದೃಢೀಕರಿಸುತ್ತದೆ: "ಜನರೇ! ನಿಶ್ಚಯವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿದ್ದೇವೆ. ನೀವು ಪರಸ್ಪರ ಗುರುತಿಸುವುದಕ್ಕಾಗಿ ನಾವು ನಿಮ್ಮನ್ನು ವಿಭಿನ್ನ ಜನಾಂಗ ಮತ್ತು ಗೋತ್ರಗಳನ್ನಾಗಿ ಮಾಡಿದೆವು. ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯಧಿಕ ದೇವಭಯವುಳ್ಳವನು ಯಾರೋ ಅವನೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ಗೌರವಾನ್ವಿತನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸೂಕ್ಷ್ಮ ಜ್ಞಾನಿಯಾಗಿದ್ದಾನೆ." [ಕುರ್‌ಆನ್ 49:13]

ಅನುವಾದ: ಆಂಗ್ಲ ಉರ್ದು ಇಂಡೋನೇಷಿಯನ್ ಉಯ್ಘರ್ ಬಂಗಾಳಿ ತುರ್ಕಿ ಬೊಸ್ನಿಯನ್ ಸಿಂಹಳೀಯ ಹಿಂದಿ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية المالاجاشية الإيطالية الأورومو الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ವಂಶ ಮತ್ತು ಅಂತಸ್ತಿನ ಹೆಸರಿನಲ್ಲಿ ಜಂಭಪಡುವುದನ್ನು ವಿರೋಧಿಸಲಾಗಿದೆ.
ಇನ್ನಷ್ಟು