عن سَعِيدِ بْنِ الْمُسَيَّبِ، عَنْ أَبِيهِ قَالَ:
لَمَّا حَضَرَتْ أَبَا طَالِبٍ الْوَفَاةُ، جَاءَهُ رَسُولُ اللهِ صلى الله عليه وسلم فَوَجَدَ عِنْدَهُ أَبَا جَهْلٍ وَعَبْدَ اللهِ بْنَ أَبِي أُمَيَّةَ بْنِ الْمُغِيرَةِ، فَقَالَ: «أَيْ عَمِّ، قُلْ: لَا إِلَهَ إِلَّا اللهُ، كَلِمَةً أُحَاجُّ لَكَ بِهَا عِنْدَ اللهِ»، فَقَالَ أَبُو جَهْلٍ وَعَبْدُ اللهِ بْنُ أَبِي أُمَيَّةَ: أَتَرْغَبُ عَنْ مِلَّةِ عَبْدِ الْمُطَّلِبِ، فَلَمْ يَزَلْ رَسُولُ اللهِ صلى الله عليه وسلم يَعْرِضُهَا عَلَيْهِ، وَيُعِيدَانِهِ بِتِلْكَ الْمَقَالَةِ، حَتَّى قَالَ أَبُو طَالِبٍ آخِرَ مَا كَلَّمَهُمْ: عَلَى مِلَّةِ عَبْدِ الْمُطَّلِبِ، وَأَبَى أَنْ يَقُولَ: لَا إِلَهَ إِلَّا اللهُ، قَالَ: قَالَ رَسُولُ اللهِ صلى الله عليه وسلم: «وَاللهِ لَأَسْتَغْفِرَنَّ لَكَ مَا لَمْ أُنْهَ عَنْكَ»، فَأَنْزَلَ اللهُ: {مَا كَانَ لِلنَّبِيِّ وَالَّذِينَ آمَنُوا أَنْ يَسْتَغْفِرُوا لِلْمُشْرِكِينَ} [التوبة: 113]، وَأَنْزَلَ اللهُ فِي أَبِي طَالِبٍ، فَقَالَ لِرَسُولِ اللهِ صلى الله عليه وسلم: {إِنَّكَ لا تَهْدِي مَنْ أَحْبَبْتَ وَلَكِنَّ اللهَ يَهْدِي مَنْ يَشَاءُ} [القصص: 56].
[صحيح] - [متفق عليه] - [صحيح البخاري: 4772]
المزيــد ...
ಸಈದ್ ಬಿನ್ ಮುಸಯ್ಯಬ್‌ರಿಂದ, ಅವರ ತಮ್ಮ ತಂದೆಯಿಂದ ವರದಿ. ಅವರು ಹೇಳುತ್ತಾರೆ:
ಅಬೂ ತಾಲಿಬ್ ಮರಣಾಸನ್ನರಾಗಿದ್ದ ಸಂದರ್ಭ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಬಳಿಗೆ ಬಂದರು. ಅಲ್ಲಿ ಅವರ ಬಳಿ ಅಬೂ ಜಹಲ್ ಮತ್ತು ಅಬ್ದುಲ್ಲಾ ಬಿನ್ ಅಬೂ ಉಮಯ್ಯ ಬಿನ್ ಮುಗೀರ ಕುಳಿತಿರುವುದನ್ನು ಕಂಡರು. ಪ್ರವಾದಿಯವರು ಹೇಳಿದರು: "ಓ ದೊಡ್ಡಪ್ಪಾ! ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಿರಿ. ಅಲ್ಲಾಹನ ಬಳಿ ಅದರ ಮೂಲಕ ನಾನು ನಿಮಗಾಗಿ ವಾದಿಸುತ್ತೇನೆ." ಆಗ ಅಬೂ ಜಹಲ್ ಮತ್ತು ಅಬ್ದುಲ್ಲಾ ಬಿನ್ ಅಬೂ ಉಮಯ್ಯ ಹೇಳಿದರು: "ನೀನು ಅಬ್ದುಲ್ ಮುತ್ತಲಿಬ್‌ರ ಧರ್ಮದಿಂದ ಹಿಮ್ಮೆಟ್ಟುವೆಯಾ?" ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು (ಲಾಇಲಾಹ ಇಲ್ಲಲ್ಲಾಹ್) ಅವರ ಮುಂದಿಡುತ್ತಲೇ ಇದ್ದರು ಮತ್ತು ಅವರಿಬ್ಬರು ಅವರ ಮಾತನ್ನು ಪುನರುಚ್ಛರಿಸುತ್ತಲೇ ಇದ್ದರು. ಎಲ್ಲಿಯವರೆಗೆಂದರೆ, ಅಬೂ ತಾಲಿಬ್ ತಮ್ಮ ಕೊನೆಯ ಮಾತನ್ನು ಹೀಗೆ ಹೇಳಿದರು: "ಅಬ್ದುಲ್ ಮುತ್ತಲಿಬ್‌ರ ಧರ್ಮದಲ್ಲಿ." ಅವರು "ಲಾಇಲಾಹ ಇಲ್ಲಲ್ಲಾಹ್" ಹೇಳಲು ನಿರಾಕರಿಸಿದರು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನಾಣೆ! ನಾನು ತಮಗಾಗಿ ಅಲ್ಲಾಹನಲ್ಲಿ ಖಂಡಿತ ಕ್ಷಮೆಯಾಚಿಸುತ್ತೇನೆ. ಅದನ್ನು ನನಗೆ ನಿಷೇಧಿಸದಿರುವ ತನಕ." ಆಗ ಅಲ್ಲಾಹು ಅವತೀರ್ಣಗೊಳಿಸಿದನು: "ಬಹುದೇವವಿಶ್ವಾಸಿಗಳಿಗಾಗಿ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಲು ಪ್ರವಾದಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಅನುಮತಿಯಿಲ್ಲ." [ತೌಬ: 113]. ಮತ್ತು ಅಬೂ ತಾಲಿಬರ ವಿಷಯದಲ್ಲಿ ಕುರ್‌ಆನ್ ವಚನವನ್ನು ಅವತೀರ್ಣಗೊಳಿಸುತ್ತಾ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದನು: "ನಿಶ್ಚಯವಾಗಿಯೂ ನಿಮಗೆ ಇಷ್ಟವಿರುವವರನ್ನು ಸನ್ಮಾರ್ಗಕ್ಕೆ ಸೇರಿಸಲು ನಿಮ್ಮಿಂದ ಸಾಧ್ಯವಿಲ್ಲ. ಆದರೆ ಅಲ್ಲಾಹು ಅವನು ಇಚ್ಛಿಸುವವರನ್ನು ಸನ್ಮಾರ್ಗಕ್ಕೆ ಸೇರಿಸುತ್ತಾನೆ." [ಕಸಸ್ 56].
[صحيح] - [متفق عليه] - [صحيح البخاري - 4772]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾವಿನ ಅಂಚಿನಲ್ಲಿದ್ದ ಅವರ ದೊಡ್ಡಪ್ಪ ಅಬೂ ತಾಲಿಬ್‌ರ ಬಳಿಗೆ ಬಂದರು. ನಂತರ ಹೇಳಿದರು: ಓ ದೊಡ್ಡಪ್ಪಾ! "ಲಾಇಲಾಹ ಇಲ್ಲಲ್ಲಾಹ್" (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಿರಿ. ಆ ವಚನದ ಮೂಲಕ ನಾನು ಅಲ್ಲಾಹನ ಬಳಿ ತಮಗಾಗಿ ಸಾಕ್ಷ್ಯ ವಹಿಸುವೆನು. ಆಗ ಅಬೂ ಜಹಲ್ ಮತ್ತು ಅಬ್ದುಲ್ಲಾ ಬಿನ್ ಅಬೂ ಉಮಯ್ಯ ಹೇಳಿದರು: ಓ ಅಬೂ ತಾಲಿಬ್! ನೀನು ನಿನ್ನ ತಂದೆ ಅಬ್ದುಲ್ ಮುತ್ತಲಿಬ್‌ರ ಧರ್ಮವನ್ನು ತೊರೆಯುತ್ತೀಯಾ!? ಅದು ವಿಗ್ರಹಾರಾಧನೆಯ ಧರ್ಮವಾಗಿತ್ತು. ಅವರಿಬ್ಬರೂ ಅವರೊಡನೆ ಅದನ್ನು ಹೇಳುತ್ತಲೇ ಇದ್ದರು. ಎಲ್ಲಿಯವರೆಗೆಂದರೆ, ಅವರು (ಅಬೂತಾಲಿಬ್) ತಮ್ಮ ಕೊನೆಯ ಮಾತನ್ನು ಹೀಗೆ ಹೇಳಿದರು: ಅಬ್ದುಲ್ ಮುತ್ತಲಿಬ್‌ರ ಧರ್ಮದಲ್ಲಿ, ಬಹುದೇವಾರಾಧನೆ ಮತ್ತು ವಿಗ್ರಹಾರಾಧನೆಯ ಧರ್ಮದಲ್ಲಿ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಾನು ನಿಮ್ಮ ಕ್ಷಮೆಗಾಗಿ ಪ್ರಾರ್ಥಿಸುವೆನು, ನನ್ನ ಪರಿಪಾಲಕ (ಅಲ್ಲಾಹು) ಅದನ್ನು ನನಗೆ ನಿಷೇಧಿಸದಿರುವ ತನಕ. ಆಗ ಅಲ್ಲಾಹನ ಈ ವಚನ ಅವತೀರ್ಣವಾಯಿತು: "ಬಹುದೇವವಿಶ್ವಾಸಿಗಳು ನರಕವಾಸಿಗಳೆಂದು ಸ್ಪಷ್ಟವಾದ ಬಳಿಕ ಅವರಿಗೋಸ್ಕರ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಲು ಪ್ರವಾದಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಅನುಮತಿಯಿಲ್ಲ. ಅವರು ಆಪ್ತ ಸಂಬಂಧಿಕರಾಗಿದ್ದರೂ ಸಹ." [ತೌಬ: 113]. ಮತ್ತು ಅಬೂ ತಾಲಿಬ್‌ರ ವಿಷಯದಲ್ಲಿ ಅಲ್ಲಾಹನ ಈ ವಚನ ಅವತೀರ್ಣವಾಯಿತು: "ನಿಮಗೆ ಇಷ್ಟವಿರುವವರನ್ನು ಸನ್ಮಾರ್ಗಕ್ಕೆ ಸೇರಿಸಲು ನಿಮ್ಮಿಂದ ಸಾಧ್ಯವಿಲ್ಲ. ಆದರೆ ಅಲ್ಲಾಹು ಅವನು ಇಚ್ಛಿಸುವವರನ್ನು ಸನ್ಮಾರ್ಗಕ್ಕೆ ಸೇರಿಸುತ್ತಾನೆ. ಸನ್ಮಾರ್ಗದಲ್ಲಿರುವವರ ಬಗ್ಗೆ ಅವನು ಬಹಳ ಚೆನ್ನಾಗಿ ತಿಳಿದಿದ್ದಾನೆ." [ಕಸಸ್: 56].، ನಿಮಗೆ ಇಷ್ಟವಿರುವವರಿಗೆ ಸನ್ಮಾರ್ಗ ನೀಡಲು ನಿಮಗೆ ಸಾಧ್ಯವಿಲ್ಲ. ನಿಮ್ಮ ಕರ್ತವ್ಯ ತಲುಪಿಸಿಕೊಡುವುದು ಮಾತ್ರ. ಅಲ್ಲಾಹು ಅವನು ಇಚ್ಛಿಸುವವರನ್ನು ಸನ್ಮಾರ್ಗಕ್ಕೆ ಸೇರಿಸುತ್ತಾನೆ.