ಹದೀಸ್‌ಗಳ ಪಟ್ಟಿ

“ಒಬ್ಬ ದಾಸ ಅನಾರೋಗ್ಯ ಪೀಡಿತನಾದರೆ ಅಥವಾ ಪ್ರಯಾಣದಲ್ಲಿದ್ದರೆ, ಅವನು ನಿವಾಸಿಯಾಗಿದ್ದಾಗ ಮತ್ತು ಆರೋಗ್ಯವಂತನಾಗಿದ್ದಾಗ ಏನೆಲ್ಲಾ ಕರ್ಮಗಳನ್ನು ಮಾಡುತ್ತಿದ್ದನೋ ಅವೆಲ್ಲವನ್ನೂ ಅವನ ಹೆಸರಿಗೆ ದಾಖಲಿಸಲಾಗುತ್ತದೆ.”
عربي ಆಂಗ್ಲ ಉರ್ದು
“ನನ್ನಿಂದ ಒಂದೇ ಒಂದು ವಚನವನ್ನಾದರೂ ತಲುಪಿಸಿ. ಬನೂ ಇಸ್ರಾಯೀಲರಿಂದ ಉಲ್ಲೇಖಿಸಿ, ಅದರಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ಯಾರು ನನ್ನ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಾನೋ ಅವನು ನರಕದಲ್ಲಿ ತನ್ನ ಆಸನವನ್ನು ಸಿದ್ಧಪಡಿಸಿಕೊಳ್ಳಲಿ.”
عربي ಆಂಗ್ಲ ಉರ್ದು
ಓ ದೊಡ್ಡಪ್ಪಾ! ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಿರಿ. ಅಲ್ಲಾಹನ ಬಳಿ ಅದರ ಮೂಲಕ ನಾನು ನಿಮಗಾಗಿ ವಾದಿಸುತ್ತೇನೆ
عربي ಆಂಗ್ಲ ಉರ್ದು
ಸೂರ್ಯ ಉದಯವಾಗುವ ಎಲ್ಲಾ ದಿನಗಳಲ್ಲೂ ಮನುಷ್ಯನ ದೇಹದ ಎಲ್ಲಾ ಸಂಧಿಗಳಿಗೂ ದಾನ ನೀಡಬೇಕಾಗಿದೆ
عربي ಆಂಗ್ಲ ಉರ್ದು
ನಿಶ್ಚಯವಾಗಿಯೂ ಧರ್ಮವು ಸರಳವಾಗಿದೆ. ಯಾರಾದರೂ ಧರ್ಮವನ್ನು ಕಠಿಣಗೊಳಿಸಲು ಪ್ರಯತ್ನಿಸಿದರೆ ಅದು ಅವನನ್ನು ಸೋಲಿಸದೆ ಬಿಡುವುದಿಲ್ಲ. ಆದ್ದರಿಂದ ಸರಿಯಾದುದನ್ನು ಅರಸಿರಿ, ಸಾಧ್ಯವಾದಷ್ಟು ಹತ್ತಿರವಾಗಿರಿ
عربي ಆಂಗ್ಲ ಉರ್ದು
ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಮರ್ಯಮರ ಪುತ್ರ (ಈಸಾ) ಶೀಘ್ರದಲ್ಲೇ ನಿಮ್ಮ ನಡುವೆ ನ್ಯಾಯಯುತ ಆಡಳಿತಗಾರನಾಗಿ ಇಳಿದು ಬರುವರು. ಅವರು ಶಿಲುಬೆಯನ್ನು ಒಡೆಯುವರು, ಹಂದಿಯನ್ನು ಕೊಲ್ಲುವರು ಮತ್ತು ಜಿಝ್ಯವನ್ನು (ಮುಸ್ಲಿಮೇತರರ ಮೇಲಿನ ತೆರಿಗೆ) ರದ್ದುಗೊಳಿಸುವರು. ಆಗ ಸಂಪತ್ತು ಎಷ್ಟರ ಮಟ್ಟಿಗೆ ಹೇರಳವಾಗುತ್ತದೆಯೆಂದರೆ ಅದನ್ನು ಸ್ವೀಕರಿಸಲು ಯಾರೂ ಮುಂದೆ ಬರುವುದಿಲ್ಲ
عربي ಆಂಗ್ಲ ಉರ್ದು
ನಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ
عربي ಆಂಗ್ಲ ಉರ್ದು
ಓ ಜನರೇ! ಅಲ್ಲಾಹು ನಿಮ್ಮಿಂದ ಅಜ್ಞಾನಕಾಲದ ದರ್ಪ ಮತ್ತು ಪೂರ್ವಜರ ಹೆಸರಿನಲ್ಲಿ ಜಂಭಕೊಚ್ಚುವುದನ್ನು ತೆಗೆದುಹಾಕಿದ್ದಾನೆ
عربي ಆಂಗ್ಲ ಉರ್ದು