عن أبي موسى الأشعري رضي الله عنه قال: قال رسول الله صلى الله عليه وسلم:
«إِذَا مَرِضَ الْعَبْدُ أَوْ سَافَرَ كُتِبَ لَهُ مِثْلُ مَا كَانَ يَعْمَلُ مُقِيمًا صَحِيحًا».
[صحيح] - [رواه البخاري] - [صحيح البخاري: 2996]
المزيــد ...
ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಒಬ್ಬ ದಾಸ ಅನಾರೋಗ್ಯ ಪೀಡಿತನಾದರೆ ಅಥವಾ ಪ್ರಯಾಣದಲ್ಲಿದ್ದರೆ, ಅವನು ನಿವಾಸಿಯಾಗಿದ್ದಾಗ ಮತ್ತು ಆರೋಗ್ಯವಂತನಾಗಿದ್ದಾಗ ಏನೆಲ್ಲಾ ಕರ್ಮಗಳನ್ನು ಮಾಡುತ್ತಿದ್ದನೋ ಅವೆಲ್ಲವನ್ನೂ ಅವನ ಹೆಸರಿಗೆ ದಾಖಲಿಸಲಾಗುತ್ತದೆ.”
[صحيح] - [رواه البخاري] - [صحيح البخاري - 2996]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ಅಲ್ಲಾಹನ ಅನುಗ್ರಹ ಮತ್ತು ಕರುಣೆಯ ಬಗ್ಗೆ ತಿಳಿಸುತ್ತಿದ್ದಾರೆ ಒಬ್ಬ ಮುಸಲ್ಮಾನನು ಆರೋಗ್ಯವಂತನಾಗಿರುವಾಗ ಅಥವಾ ಊರಿನಲ್ಲಿರುವಾಗ ರೂಢಿಯಾಗಿ ಕೆಲವು ಸತ್ಕರ್ಮಗಳನ್ನು ಮಾಡುತ್ತಿದ್ದು, ಅನಾರೋಗ್ಯ ಪೀಡಿತನಾದಾಗ, ಅಥವಾ ಪ್ರಯಾಣದಲ್ಲಿರುವಾಗ, ಅಥವಾ ಇತರ ಯಾವುದೇ ಕಾರಣದಿಂದ ಅವನಿಗೆ ಅವುಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಅವನು ಆರೋಗ್ಯವಂತನಾಗಿದ್ದಾಗ ಮತ್ತು ಊರಿನಲ್ಲಿದ್ದಾಗ ಅವುಗಳನ್ನು ಮಾಡಿದರೆ ಅವನಿಗೆ ಎಷ್ಟು ಪ್ರತಿಪಲ ದಾಖಲಾಗುತ್ತಿತ್ತೋ ಅಷ್ಟೇ ಪ್ರತಿಫಲವನ್ನು ಪೂರ್ಣವಾಗಿ ದಾಖಲಿಸಲಾಗುವುದು.