عَنْ أُبَيِّ بْنِ كَعْبٍ رَضيَ اللهُ عنه قَالَ:
كَانَ رَجُلٌ لَا أَعْلَمُ رَجُلًا أَبْعَدَ مِنَ الْمَسْجِدِ مِنْهُ، وَكَانَ لَا تُخْطِئُهُ صَلَاةٌ، قَالَ: فَقِيلَ لَهُ: أَوْ قُلْتُ لَهُ: لَوْ اشْتَرَيْتَ حِمَارًا تَرْكَبُهُ فِي الظَّلْمَاءِ، وَفِي الرَّمْضَاءِ، قَالَ: مَا يَسُرُّنِي أَنَّ مَنْزِلِي إِلَى جَنْبِ الْمَسْجِدِ، إِنِّي أُرِيدُ أَنْ يُكْتَبَ لِي مَمْشَايَ إِلَى الْمَسْجِدِ، وَرُجُوعِي إِذَا رَجَعْتُ إِلَى أَهْلِي، فَقَالَ رَسُولُ اللهِ صَلَّى اللهُ عَلَيْهِ وَسَلَّمَ: «قَدْ جَمَعَ اللهُ لَكَ ذَلِكَ كُلَّهُ».
[صحيح] - [رواه مسلم] - [صحيح مسلم: 663]
المزيــد ...
ಉಬೈ ಇಬ್ನ್ ಕಅಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ಒಬ್ಬ ವ್ಯಕ್ತಿಯಿದ್ದನು. ಅವನ ಮನೆಗಿಂತ ಮಸೀದಿಯಿಂದ ಹೆಚ್ಚು ದೂರವಿದ್ದ ಬೇರೊಬ್ಬ ವ್ಯಕ್ತಿಯನ್ನು ನಾನು ತಿಳಿದಿಲ್ಲ. ಅವನು ಯಾವುದೇ ನಮಾಝ್ ಅನ್ನು ತಪ್ಪಿಸುತ್ತಿರಲಿಲ್ಲ. (ಉಬೈ) ಹೇಳಿದರು: ಆಗ ಅವನಿಗೆ ಹೇಳಲಾಯಿತು: (ಅಥವಾ ನಾನು ಅವನಿಗೆ ಹೇಳಿದೆನು:) 'ನೀನು ಒಂದು ಕತ್ತೆಯನ್ನು ಖರೀದಿಸಿದ್ದರೆ (ಎಷ್ಟು ಚೆನ್ನಾಗಿತ್ತು). ಅದರ ಮೇಲೆ ನೀನು ಕತ್ತಲೆಯಲ್ಲಿ ಮತ್ತು ಬಿಸಿಲ ಬೇಗೆಯಲ್ಲಿ (ಕಾದ ನೆಲದಲ್ಲಿ) ಸವಾರಿ ಮಾಡಬಹುದಿತ್ತು'. ಅವನು ಹೇಳಿದನು: 'ನನ್ನ ಮನೆಯು ಮಸೀದಿಯ ಪಕ್ಕದಲ್ಲಿರುವುದು ನನಗೆ ಸಂತೋಷ ನೀಡುವುದಿಲ್ಲ. ಖಂಡಿತವಾಗಿಯೂ ಮಸೀದಿಯ ಕಡೆಗಿರುವ ನನ್ನ ನಡಿಗೆಗೂ, ಮತ್ತು ನಾನು ನನ್ನ ಕುಟುಂಬದ ಬಳಿಗೆ ಹಿಂತಿರುಗಿದಾಗ ನನ್ನ ಹಿಂತಿರುಗುವಿಕೆಗೂ ಪ್ರತಿಫಲ ಬರೆಯಲ್ಪಡಬೇಕೆಂದು ನಾನು ಬಯಸುತ್ತೇನೆ'. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಅಲ್ಲಾಹು ನಿನಗಾಗಿ ಅದೆಲ್ಲವನ್ನೂ ಒಟ್ಟುಗೂಡಿಸಿದ್ದಾನೆ".
[صحيح] - [رواه مسلم] - [صحيح مسلم - 663]
ಉಬೈ ಇಬ್ನ್ ಕ'ಅಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ; ಅನ್ಸಾರ್‌ಗಳಲ್ಲಿದ್ದ ಒಬ್ಬ ವ್ಯಕ್ತಿ, ಪ್ರವಾದಿಯವರ ಮಸೀದಿಯಿಂದ ಅತ್ಯಂತ ದೂರದಲ್ಲಿ ಮನೆಯನ್ನು ಹೊಂದಿದ್ದನು. ಅವನು ಯಾವುದೇ ನಮಾಝ್ ಅನ್ನು ತಪ್ಪಿಸುತ್ತಿರಲಿಲ್ಲ. ಬದಲಿಗೆ ಪ್ರತಿಯೊಂದು ನಮಾಝ್‌ಗೂ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗೆ ಹಾಜರಾಗುತ್ತಿದ್ದನು. ಆಗ ಅವನಿಗೆ ಹೇಳಲಾಯಿತು: ನೀನು ಒಂದು ಕತ್ತೆಯನ್ನು ಖರೀದಿಸಿದ್ದರೆ, ಅದರ ಮೇಲೆ ನೀನು ರಾತ್ರಿಯ ಕತ್ತಲೆಯಲ್ಲಿ ಮತ್ತು ಹಗಲಿನ ನೆಲದ ಬಿಸಿಯಲ್ಲಿ ಸವಾರಿ ಮಾಡಬಹುದಿತ್ತು. ಅವನು ಹೇಳಿದನು: ನನ್ನ ಮನೆಯು ಮಸೀದಿಯ ಪಕ್ಕದಲ್ಲಿರುವುದು ನನಗೆ ಸಂತೋಷ ನೀಡುವುದಿಲ್ಲ. ಖಂಡಿತವಾಗಿಯೂ ಮಸೀದಿಯಲ್ಲಿನ ನಮಾಝ್‌ಗಾಗಿ ನನ್ನ ನಡಿಗೆಗೂ, ಮತ್ತು ನಾನು ನನ್ನ ಕುಟುಂಬದ ಬಳಿಗೆ ಹಿಂತಿರುಗಿದಾಗ ನನ್ನ ಹಿಂತಿರುಗುವಿಕೆಗೂ ಅಲ್ಲಾಹು ಪ್ರತಿಫಲ ದಾಖಲಿಸಬೇಕೆಂದು ನಾನು ಬಯಸುತ್ತೇನೆ. ಅವನ ಮಾತು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಲುಪಿತು, ಆಗ ಅವರು ಹೇಳಿದರು: "ಖಂಡಿತವಾಗಿಯೂ ಅಲ್ಲಾಹು ನಿನಗಾಗಿ ಅದೆಲ್ಲವನ್ನೂ ಒಟ್ಟುಗೂಡಿಸಿದ್ದಾನೆ".