+ -

عَنْ عَائِشَةَ رضي الله عنها قَالَتْ:
فَقَدْتُ رَسُولَ اللهِ صَلَّى اللهُ عَلَيْهِ وَسَلَّمَ لَيْلَةً مِنَ الْفِرَاشِ فَالْتَمَسْتُهُ فَوَقَعَتْ يَدِي عَلَى بَطْنِ قَدَمَيْهِ وَهُوَ فِي الْمَسْجِدِ وَهُمَا مَنْصُوبَتَانِ، وَهُوَ يَقُولُ: «اللهُمَّ أَعُوذُ بِرِضَاكَ مِنْ سَخَطِكَ، وَبِمُعَافَاتِكَ مِنْ عُقُوبَتِكَ، وَأَعُوذُ بِكَ مِنْكَ لَا أُحْصِي ثَنَاءً عَلَيْكَ أَنْتَ كَمَا أَثْنَيْتَ عَلَى نَفْسِكَ».

[صحيح] - [رواه مسلم] - [صحيح مسلم: 486]
المزيــد ...

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳುತ್ತಾರೆ:
ಒಂದು ರಾತ್ರಿ ನಾನು ಅಲ್ಲಾಹನ ಸಂದೇಶವಾಹಕರನ್ನು ಹಾಸಿಗೆಯಲ್ಲಿ ಕಾಣದೆ ಹೋದಾಗ ಅವರನ್ನು ಹುಡುಕಿದೆ. ನನ್ನ ಕೈ ಅವರ ಪಾದಗಳ ನಡುಭಾಗಕ್ಕೆ ತಾಗಿತು. ಅವರು ಮಸೀದಿಯಲ್ಲಿ ನಮಾಝ್ ಮಾಡುತ್ತಿದ್ದರು ಮತ್ತು ಅವರ ಪಾದಗಳು ನೆಟ್ಟಗಿದ್ದವು (ಅವರು ಸಾಷ್ಟಾಂಗ ಮಾಡುತ್ತಿದ್ದರು). ಅವರು ಹೇಳುತ್ತಿದ್ದರು: "ಓ ಅಲ್ಲಾಹ್! ನಿನ್ನ ಕೋಪದಿಂದ ನಿನ್ನ ತೃಪ್ತಿಯಲ್ಲಿ ಮತ್ತು ನಿನ್ನ ಶಿಕ್ಷೆಯಿಂದ ನಿನ್ನ ಕ್ಷೇಮದಲ್ಲಿ ನಾನು ರಕ್ಷಣೆಯನ್ನು ಬೇಡುತ್ತೇನೆ. ನಿನಗೆ ವಿರುದ್ಧವಾಗಿ ನಿನ್ನಲ್ಲೇ ನಾನು ಆಶ್ರಯವನ್ನು ಬೇಡುತ್ತೇನೆ. ನೀನು ನಿನ್ನನ್ನು ಪ್ರಶಂಸಿಸಿದಂತೆ ನನಗೆ ನಿನ್ನ ಪ್ರಶಂಸೆಯನ್ನು ಎಣಿಸಲು ಸಾಧ್ಯವಿಲ್ಲ."

[صحيح] - [رواه مسلم] - [صحيح مسلم - 486]

ವಿವರಣೆ

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಕ್ಕದಲ್ಲಿ ಮಲಗಿದ್ದೆ. ರಾತ್ರಿಯಲ್ಲಿ ಅವರನ್ನು ಕಾಣದಾದಾಗ, ನಾನು ನನ್ನ ಕೈಯಿಂದ ಅವರು ಕೋಣೆಯಲ್ಲಿ ನಮಾಝ್ ಮಾಡುತ್ತಿದ್ದ ಜಾಗವನ್ನು ತಡಕಾಡಿದೆ. ಅವರು ಸಾಷ್ಟಾಂಗ ಮಾಡುತ್ತಿದ್ದರು ಮತ್ತು ಅವರ ಪಾದಗಳು ನೆಟ್ಟಗಿದ್ದವು. ಅವರು ಹೇಳುತ್ತಿದ್ದರು:
"ನಾನು ರಕ್ಷಣೆಯನ್ನು ಬೇಡುತ್ತೇನೆ" ಅಂದರೆ ನಾನು ತವಸ್ಸುಲ್ ಮಾಡುತ್ತೇನೆ. "ನಿನ್ನ ಕೋಪದಿಂದ ನಿನ್ನ ತೃಪ್ತಿಯಲ್ಲಿ" ಅಂದರೆ, ನನ್ನ ಮೇಲೆ ಅಥವಾ ನನ್ನ ಸಮುದಾಯದ ಮೇಲೆ ನಿನಗಿರುವ ಕೋಪದಿಂದ. "ಮತ್ತು" ನಾನು ರಕ್ಷಣೆ ಪಡೆಯುತ್ತೇನೆ "ನಿನ್ನ ಕ್ಷೇಮದಲ್ಲಿ" ಮತ್ತು ನಿನ್ನ ಅಪಾರ ಕ್ಷಮೆಯಲ್ಲಿ "ನಿನ್ನ ಶಿಕ್ಷೆಯಿಂದ". "ನಿನಗೆ ವಿರುದ್ಧವಾಗಿ ನಿನ್ನಲ್ಲೇ ನಾನು ಆಶ್ರಯವನ್ನು ಬೇಡುತ್ತೇನೆ" ಮತ್ತು ನಿನ್ನ ಮಹಿಮೆಯ ಗುಣಗಳಲ್ಲಿ ಸೇರಿದ ನಿನ್ನ ಸುಂದರವಾದ ಗುಣಗಳಲ್ಲಿ ಆಶ್ರಯವನ್ನು ಬೇಡುತ್ತೇನೆ. ಏಕೆಂದರೆ ನಿನ್ನ ವಿರುದ್ಧ ನಿನ್ನ ಹೊರತು ಬೇರೆ ಯಾರೂ ರಕ್ಷಿಸುವುದಿಲ್ಲ. ಅಲ್ಲಾಹನಿಗೆ ವಿರುದ್ಧವಾಗಿ ಅವನ ಹೊರತು ರಕ್ಷಣೆ ಅಥವಾ ಆಶ್ರಯ ನೀಡುವವರು ಯಾರೂ ಇಲ್ಲ. "ನನಗೆ ನಿನ್ನ ಪ್ರಶಂಸೆಯನ್ನು ಎಣಿಸಲು ಸಾಧ್ಯವಿಲ್ಲ" ಅಂದರೆ, ನಿನಗೆ ಅರ್ಹವಾಗುವಂತೆ ನಿನ್ನ ಅನುಗ್ರಹ ಮತ್ತು ದಯೆಯನ್ನು ಎಣಿಸಲು ಮತ್ತು ಸಂಖ್ಯೆಯಲ್ಲಿ ಹೇಳಲು ನಾನು ಅಶಕ್ತನಾಗಿದ್ದೇನೆ. ನಾನು ಅದಕ್ಕಾಗಿ ಪ್ರಯತ್ನಿಸಿದರೂ ಸಹ. "ನೀನು ನಿನ್ನನ್ನು ಪ್ರಶಂಸಿಸಿದಂತೆ" ಅಂದರೆ, ನಿನ್ನ ಘನತೆಗೆ ಹೊಂದಿಕೆಯಾಗುವ ರೀತಿಯಲ್ಲಿ ನಿನ್ನ ಸಾರವನ್ನು ಪ್ರಶಂಸಿಸಲು ನಿನಗೆ ಮಾತ್ರ ಸಾಧ್ಯ. ನಿನ್ನ ಪ್ರಶಂಸೆಯ ಹಕ್ಕನ್ನು ಪೂರೈಸಲು ಯಾರಿಗೆ ತಾನೇ ಸಾಧ್ಯವಿದೆ?!

ಹದೀಸಿನ ಪ್ರಯೋಜನಗಳು

  1. ಈ ಪ್ರಾರ್ಥನೆಗಳನ್ನು ಸಾಷ್ಟಾಂಗದಲ್ಲಿ ಪಠಿಸುವುದು ಶ್ರೇಷ್ಠವಾಗಿದೆ.
  2. ಮೀರ್ಕ್ ಹೇಳಿದರು: ನಸಾಈಯವರ ಒಂದು ವರದಿಯಲ್ಲಿ ಹೀಗಿದೆ: ಅವರು ಈ ಪ್ರಾರ್ಥನೆಯನ್ನು ರಾತ್ರಿ ನಮಾಝ್ ಮುಗಿಸಿ ಹಾಸಿಗೆಗೆ ಹೋದಾಗ ಹೇಳುತ್ತಿದ್ದರು.
  3. ಕುರ್‌ಆನ್ ಮತ್ತು ಸುನ್ನತ್ತಿನಲ್ಲಿ ಸಾಬೀತಾಗಿರುವ ಅಲ್ಲಾಹನ ಗುಣಗಳು ಮತ್ತು ಹೆಸರುಗಳಿಂದ ಅವನನ್ನು ಪ್ರಶಂಸಿಸುವುದು ಮತ್ತು ಪ್ರಾರ್ಥಿಸುವುದು ಶ್ರೇಷ್ಠವಾಗಿದೆ.
  4. ರುಕೂ ಮತ್ತು ಸಜ್ದಾದಲ್ಲಿ ಸೃಷ್ಟಿಕರ್ತನನ್ನು ಮಹಿಮೆಪಡಿಸಬೇಕೆಂದು ತಿಳಿಸಲಾಗಿದೆ.
  5. ಅಲ್ಲಾಹನ ಸಾರದಿಂದ ರಕ್ಷಣೆ ಪಡೆಯುವುದು ಸಮ್ಮತವಾಗಿರುವಂತೆಯೇ ಅಲ್ಲಾಹನ ಗುಣಗಳಿಂದ ರಕ್ಷಣೆ ಪಡೆಯುವುದು ಕೂಡ ಸಮ್ಮತವಾಗಿದೆ.
  6. ಖತ್ತಾಬಿ ಹೇಳಿದರು: ಈ ಮಾತಿನಲ್ಲಿ ಒಂದು ಸೂಕ್ಷ್ಮ ಅರ್ಥವಿದೆ. ಅದೇನೆಂದರೆ, ಇಲ್ಲಿ ಅಲ್ಲಾಹನ ಕೋಪದಿಂದ ಅವನ ತೃಪ್ತಿಯಲ್ಲಿ ಮತ್ತು ಅವನ ಶಿಕ್ಷೆಯಿಂದ ಅವನ ಕ್ಷೇಮದಲ್ಲಿ ರಕ್ಷಣೆಯನ್ನು ಬೇಡಲಾಗಿದೆ. ತೃಪ್ತಿ ಮತ್ತು ಕೋಪ ಇವು ವಿರುದ್ಧಪದಗಳು. ಅದೇ ರೀತಿ ಕ್ಷೇಮ ಮತ್ತು ಶಿಕ್ಷಿಸುವುದು ಕೂಡ. ಆದರೆ ಯಾವುದೇ ವಿರುದ್ಧ ಪದವಿಲ್ಲದ ಅಲ್ಲಾಹನ ಬಗ್ಗೆ ಹೇಳಿದಾಗ, ಅವನ ವಿರುದ್ಧ ಅವನಲ್ಲೇ ರಕ್ಷಣೆ ಬೇಡಲಾಗಿದೆ. ಇದರ ಅರ್ಥವೇನೆಂದರೆ, ಅಲ್ಲಾಹನ ಆರಾಧನೆಯ ಹಕ್ಕಿನಲ್ಲಿ ಮತ್ತು ಅವನನ್ನು ಹೊಗಳುವುದರಲ್ಲಿ ಆವಶ್ಯಕವಾಗಿರುವುದನ್ನು ತಲುಪುವಲ್ಲಿನ ಕೊರತೆಯಿಂದ ಕ್ಷಮೆಯನ್ನು ಯಾಚಿಸುವುದು. "ನಿನ್ನ ಪ್ರಶಂಸೆಯನ್ನು ಎಣಿಸಲು ಸಾಧ್ಯವಿಲ್ಲ" ಎಂಬ ಮಾತಿನ ಅರ್ಥವೇನೆಂದರೆ, ಅದನ್ನು ಮಾಡಲು ಮತ್ತು ಅದನ್ನು ತಲುಪಲು ನನಗೆ ಸಾಧ್ಯವಿಲ್ಲ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الهولندية الغوجاراتية النيبالية المجرية الجورجية المقدونية
ಅನುವಾದಗಳನ್ನು ತೋರಿಸಿ
ಇನ್ನಷ್ಟು