+ -

عن ابن عباس رضي الله عنهما:
كان النبي صلى الله عليه وسلم يقول بين السجدتين: «اللَّهمَّ اغْفِرْ لي، وارْحَمْنِي، وعافِني، واهْدِني، وارزقْنِي».

[حسن بشواهده] - [رواه أبو داود والترمذي وابن ماجه وأحمد] - [سنن أبي داود: 850]
المزيــد ...

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ಅಲ್ಲಾಹುಮ್ಮಗ್ಫಿರ್ ಲೀ, ವರ್‌ಹಮ್‌ನೀ, ವಆಫಿನೀ, ವಹ್ದಿನೀ, ವರ್‌ಝುಕ್‌ನೀ" (ಓ ಅಲ್ಲಾಹ್! ನನ್ನನ್ನು ಕ್ಷಮಿಸು, ನನಗೆ ದಯೆತೋರು, ನನಗೆ ಸೌಖ್ಯವನ್ನು ನೀಡು, ನನಗೆ ಸನ್ಮಾರ್ಗವನ್ನು ತೋರಿಸು ಮತ್ತು ನನಗೆ ಜೀವನೋಪಾಯವನ್ನು ದಯಪಾಲಿಸು) ಎಂದು ಹೇಳುತ್ತಿದ್ದರು.

[حسن بشواهده] - [رواه أبو داود والترمذي وابن ماجه وأحمد] - [سنن أبي داود - 850]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್‌ನಲ್ಲಿ ಎರಡು ಸುಜೂದ್‌ಗಳ ಮಧ್ಯೆ ಮುಸಲ್ಮಾನನಿಗೆ ಅತ್ಯಂತ ಅಗತ್ಯವಿರುವ ಮತ್ತು ಇಹಲೋಕ ಹಾಗೂ ಪರಲೋಕದ ಎಲ್ಲಾ ಒಳಿತುಗಳನ್ನು ಒಳಗೊಂಡಿರುವ ಈ ಐದು ಪ್ರಾರ್ಥನೆಗಳನ್ನು ಪ್ರಾರ್ಥಿಸುತ್ತಿದರು. ಈ ಪ್ರಾರ್ಥನೆಯು ಕ್ಷಮೆಯಾಚನೆ, ಪಾಪಗಳನ್ನು ಮನ್ನಿಸುವುದು, ದಯೆ ತೋರುವುದು, ಸಂಶಯಗಳು, ಮೋಹಗಳು, ಕಾಯಿಲೆಗಳು ಮತ್ತು ರೋಗಗಳಿಂದ ಸೌಖ್ಯವನ್ನು ಪಡೆಯುವುದು, ಸನ್ಮಾರ್ಗ ಮತ್ತು ಸತ್ಯ ಮಾರ್ಗವನ್ನು ತೋರಿಸಿಕೊಡಲು ಪ್ರಾರ್ಥಿಸುವುದು ಮತ್ತು ಆ ಮಾರ್ಗದಲ್ಲಿ ದೃಢವಾಗಿ ನಿಲ್ಲುವುದು, ಸತ್ಯವಿಶ್ವಾಸ, ಜ್ಞಾನ, ಸತ್ಕರ್ಮ ಮತ್ತು ಧರ್ಮಸಮ್ಮತ ಹಾಗೂ ಶುದ್ಧವಾದ ರೀತಿಯಲ್ಲಿ ಹಣವನ್ನು ಸಂಪಾದಿಸುವುದು ಮುಂತಾದ ಎಲ್ಲವನ್ನೂ ಒಳಗೊಂಡಿದೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية المجرية التشيكية المالاجاشية الإيطالية الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಎರಡು ಸುಜೂದ್‌ಗಳ ಮಧ್ಯೆ ಕುಳಿತುಕೊಳ್ಳುವಾಗ ಈ ಪ್ರಾರ್ಥನೆಯನ್ನು ಪ್ರಾರ್ಥಿಸಬೇಕೆಂದು ಈ ಹದೀಸ್ ತಿಳಿಸುತ್ತದೆ.
  2. ಇಹಲೋಕ ಹಾಗೂ ಪರಲೋಕದ ಎಲ್ಲಾ ಒಳಿತುಗಳನ್ನು ಒಳಗೊಂಡಿರುವ ಈ ಪ್ರಾರ್ಥನೆಗಳ ಶ್ರೇಷ್ಠತೆಯನ್ನು ಈ ಹದೀಸ್ ವಿವರಿಸುತ್ತದೆ.
ಇನ್ನಷ್ಟು