+ -

عَنْ ‌أَبِي الزُّبَيْرِ قَالَ:
كَانَ ‌ابْنُ الزُّبَيْرِ يَقُولُ فِي دُبُرِ كُلِّ صَلَاةٍ حِينَ يُسَلِّمُ: «لَا إِلَهَ إِلَّا اللهُ وَحْدَهُ لَا شَرِيكَ لَهُ، لَهُ الْمُلْكُ وَلَهُ الْحَمْدُ وَهُوَ عَلَى كُلِّ شَيْءٍ قَدِيرٌ، لَا حَوْلَ وَلَا قُوَّةَ إِلَّا بِاللهِ، لَا إِلَهَ إِلَّا اللهُ، ‌وَلَا ‌نَعْبُدُ ‌إِلَّا إِيَّاهُ، لَهُ النِّعْمَةُ وَلَهُ الْفَضْلُ وَلَهُ الثَّنَاءُ الْحَسَنُ، لَا إِلَهَ إِلَّا اللهُ مُخْلِصِينَ لَهُ الدِّينَ وَلَوْ كَرِهَ الْكَافِرُونَ» وَقَالَ: «كَانَ رَسُولُ اللهِ صَلَّى اللهُ عَلَيْهِ وَسَلَّمَ يُهَلِّلُ بِهِنَّ دُبُرَ كُلِّ صَلَاةٍ».

[صحيح] - [رواه مسلم] - [صحيح مسلم: 594]
المزيــد ...

ಅಬೂ ಝುಬೈರ್ ರಿಂದ ವರದಿ. ಅವರು ಹೇಳಿದರು:
ಇಬ್ನ್ ಝುಬೈರ್ ಪ್ರತಿಯೊಂದು ನಮಾಝ್‌ನಲ್ಲೂ ಸಲಾಂ ಹೇಳಿದ ನಂತರ ಇದನ್ನು ಪಠಿಸುತ್ತಿದ್ದರು: "ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್. ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್. ಲಾ ಇಲಾಹ ಇಲ್ಲಲ್ಲಾಹು, ವಲಾ ನಅ್‌ಬುದು ಇಲ್ಲಾ ಇಯ್ಯಾಹು, ಲಹು ನ್ನಿಅ್‌‌ಮತು ವಲಹುಲ್ ಫದ್ಲು, ವಲಹು ಸ್ಸನಾಉಲ್ ಹಸನು, ಲಾ ಇಲಾಹ ಇಲ್ಲಲ್ಲಾಹು ಮುಖ್ಲಿಸೀನ ಲಹು ದ್ದೀನ ವಲವ್ ಕರಿಹಲ್ ಕಾಫಿರೂನ್." (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಆಧಿಪತ್ಯವು ಅವನದ್ದು ಮತ್ತು ಸ್ತುತಿಯು ಅವನಿಗೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ಅಲ್ಲಾಹನ ಹೊರತು ಶಕ್ತಿಯಾಗಲಿ ಸಾಮರ್ಥ್ಯವಾಗಲಿ ಇಲ್ಲ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ನಾವು ಅವನನ್ನಲ್ಲದೆ ಇನ್ನಾರನ್ನೂ ಆರಾಧಿಸುವುದಿಲ್ಲ. ಅನುಗ್ರಹವು ಅವನದ್ದು, ಔದಾರ್ಯವು ಅವನದ್ದು ಮತ್ತು ಉತ್ತಮವಾದ ಪ್ರಶಂಸೆಯು ಅವನಿಗೆ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ ನಾವು ಧರ್ಮವನ್ನು ಅವನಿಗೆ ನಿಷ್ಕಳಂಕಗೊಳಿಸುತ್ತೇವೆ). ನಂತರ ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ನಮಾಝ್‌ಗಳ ನಂತರ ಇವುಗಳ ಮೂಲಕ ತಹ್ಲೀಲ್ (ಲಾಇಲಾಹ ಇಲ್ಲಲ್ಲಾಹ್) ಪಠಿಸುತ್ತಿದ್ದರು."

[صحيح] - [رواه مسلم] - [صحيح مسلم - 594]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಕಡ್ಡಾಯ ನಮಾಝ್‌ಗಳ ನಂತರ ಈ ಮಹಾ ದಿಕ್ರ್‌ಗಳ ಮೂಲಕ ತಹ್ಲೀಲ್ (ಲಾಇಲಾಹ ಇಲ್ಲಲ್ಲಾಹ್) ಪಠಿಸುತ್ತಿದ್ದರು. ಇವುಗಳ ಅರ್ಥ ಹೀಗಿದೆ:
ಲಾ ಇಲಾಹ ಇಲ್ಲಲ್ಲಾಹ್: ಅಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ.
ವಹ್ದಹೂ ಲಾ ಶರೀಕ ಲಹೂ: ಅವನಿಗೆ ಅವನ ದೈವಿಕತೆಯಲ್ಲಿ, ಪ್ರಭುತ್ವದಲ್ಲಿ ಮತ್ತು ಅವನ ಹೆಸರು ಮತ್ತು ಗುಣಲಕ್ಷಣಗಳಲ್ಲಿ ಯಾವುದೇ ಸಹಭಾಗಿಗಳಿಲ್ಲ.
ಲಹುಲ್ ಮುಲ್ಕ್: ಭೂಮ್ಯಾಕಾಶಗಳ ಹಾಗೂ ಅವುಗಳ ನಡುವೆಯಿರುವ ಎಲ್ಲದರ (ಸಂಪೂರ್ಣ ಬ್ರಹ್ಮಾಂಡದ) ನಿರುಪಾಧಿಕ, ಸಂಪೂರ್ಣ, ಸಮಗ್ರ ಮತ್ತು ವಿಶಾಲವಾದ ಆಧಿಪತ್ಯವು ಅಲ್ಲಾಹನಿಗೆ ಮಾತ್ರ ಸೇರಿದ್ದು.
ವಲಹುಲ್ ಹಮ್ದ್: ಅವನು ನಿರುಪಾಧಿಕವಾದ ಸಂಪೂರ್ಣತೆಯಿಂದ ವರ್ಣಿಸಲ್ಪಟ್ಟವನು ಮತ್ತು ಸುಖ-ದುಃಖ ಮುಂತಾದ ಎಲ್ಲಾ ಸ್ಥಿತಿಗಳಲ್ಲೂ ಪ್ರೀತಿಯಿಂದ ಮತ್ತು ಗೌರವದಿಂದ ಸಂಪೂರ್ಣತೆಯೊಂದಿಗೆ ಸ್ತುತಿಸಲ್ಪಡುವವನು.
ವಹುವ ಅಲಾ ಕುಲ್ಲಿ ಶೈಇನ್ ಕದೀರ್: ಅವನ ಸಾಮರ್ಥ್ಯವು ಎಲ್ಲಾ ವಿಧಗಳಲ್ಲೂ ಸಂಪೂರ್ಣ ಮತ್ತು ಪರಿಪೂರ್ಣವಾಗಿದೆ. ಅವನನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ಅವನ ಆಜ್ಞೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ.
ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್: ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಚಲಿಸುವ ಶಕ್ತಿ, ಅಲ್ಲಾಹನ ಅವಿಧೇಯತೆಯಿಂದ ವಿಧೇಯತೆಗೆ ಚಲಿಸುವ ಶಕ್ತಿ ಯಾರಿಗೂ ಇಲ್ಲ. ಅಲ್ಲಾಹನಿಂದಲ್ಲದೆ ಯಾವುದೇ ಶಕ್ತಿ ಸಾಮರ್ಥ್ಯವಿಲ್ಲ. ಅವನು ಸಹಾಯ ಮಾಡುವವನಾಗಿದ್ದು ಅವನ ಮೇಲೆಯೇ ಭರವಸೆಯಿಡಬೇಕಾಗಿದೆ.
ಲಾ ಇಲಾಹ ಇಲ್ಲಲ್ಲಾಹು, ವಲಾ ನಅ್‌ಬುದು ಇಲ್ಲಾ ಇಯ್ಯಾಹ್: ಅಲ್ಲಾಹನ ಆರಾಧನಾರ್ಹತೆಗೆ ಮತ್ತು ಶಿರ್ಕ್‌ನ (ಬಹುದೇವಾರಾಧನೆಯ) ನಿಷೇಧಕ್ಕೆ ಇದು ಒತ್ತುಕೊಡುತ್ತದೆ. ಅಲ್ಲಾಹನ ಹೊರತು ಯಾರೂ ಆರಾಧನೆಗೆ ಅರ್ಹರಲ್ಲ.
ಲಹು ನ್ನಿಅ್‌‌ಮತು ವಲಹುಲ್ ಫದ್ಲ್: ಅವನು ಅನುಗ್ರಹವನ್ನು ಸೃಷ್ಟಿಸಿ ಅದನ್ನು ತನ್ನ ಒಡೆತನದಲ್ಲಿಡುತ್ತಾನೆ. ತನ್ನ ದಾಸರಲ್ಲಿ ಅವನು ಬಯಸಿದವರಿಗೆ ಅದನ್ನು ನೀಡಿ ಅನುಗ್ರಹಿಸುತ್ತಾನೆ.
ವಲಹು ಸ್ಸನಾಉಲ್ ಹಸನ್: ಅವನ ಸಾರ, ಗುಣಲಕ್ಷಣಗಳು, ಕ್ರಿಯೆಗಳು ಮತ್ತು ಅನುಗ್ರಹಗಳು ಎಲ್ಲಾ ಸ್ಥಿತಿಗಳಲ್ಲೂ ಪ್ರಶಂಸನೀಯವಾಗಿವೆ.
ಲಾ ಇಲಾಹ ಇಲ್ಲಲ್ಲಾಹು ಮುಖ್ಲಿಸೀನ ಲಹು ದ್ದೀನ್: ನಾವು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೇವೆ. ನಾವು ತೋರಿಕೆಗಾಗಿ ಅಥವಾ ಕೀರ್ತಿಗಾಗಿ ಅವನನ್ನು ಅನುಸರಿಸುವುದಿಲ್ಲ.
ವಲವ್ ಕರಿಹಲ್ ಕಾಫಿರೂನ್: ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ ನಾವು ಏಕದೇವತ್ವದಲ್ಲಿ ಮತ್ತು ಅಲ್ಲಾಹನ ಅರಾಧನೆಯಲ್ಲಿ ಅಚಂಚಲವಾಗಿ ಮುಂದುವರಿಯುತ್ತೇವೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية المجرية التشيكية المالاجاشية الإيطالية الأذربيجانية الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಎಲ್ಲಾ ಕಡ್ಡಾಯ ನಮಾಝ್‌ಗಳ ನಂತರ ಈ ದಿಕ್ರ್‌ಗಳನ್ನು ಪಠಿಸುವುದನ್ನು ರೂಢಿ ಮಾಡಿಕೊಳ್ಳಬೇಕೆಂದು ಈ ಹದೀಸ್ ತಿಳಿಸುತ್ತದೆ.
  2. ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ ಮುಸಲ್ಮಾನನು ತಮ್ಮ ಧರ್ಮದ ಬಗ್ಗೆ ಹೆಮ್ಮೆ ಪಡಬೇಕು ಮತ್ತು ಅದರ ಚಿಹ್ನೆಗಳನ್ನು ಪ್ರಕಟಿಸಬೇಕೆಂದು ಈ ಹದೀಸ್ ತಿಳಿಸುತ್ತದೆ.
  3. ಹದೀಸ್‌ನಲ್ಲಿ "ದುಬುರು ಸ್ಸಲಾತ್" ಎಂಬ ಪದವನ್ನು ಉಲ್ಲೇಖಿಸಲಾಗಿದ್ದು ಅದರಲ್ಲಿ ದಿಕ್ರ್ ವರದಿಯಾಗಿದ್ದರೆ ಅದರ ಅರ್ಥ ನಮಾಝ್‌ನ ನಂತರವಾಗಿದೆ. ಆದರೆ ಅದರಲ್ಲಿ ಪ್ರಾರ್ಥನೆ (ದುಆ) ವರದಿಯಾಗಿದ್ದರೆ ಅದರ ಅರ್ಥ ಸಲಾಂ ಹೇಳುವುದಕ್ಕೆ ಮುಂಚೆಯಾಗಿದೆ.
ಇನ್ನಷ್ಟು