عن أبي هريرة رضي الله عنه: أن رسول الله صلى الله عليه وسلم قال:
«لَا تَجْعَلُوا بُيُوتَكُمْ مَقَابِرَ، إِنَّ الشَّيْطَانَ يَنْفِرُ مِنَ الْبَيْتِ الَّذِي تُقْرَأُ فِيهِ سُورَةُ الْبَقَرَةِ».
[صحيح] - [رواه مسلم] - [صحيح مسلم: 780]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮ ಮನೆಗಳನ್ನು ಸಮಾಧಿಗಳನ್ನಾಗಿ ಮಾಡಬೇಡಿ. ನಿಶ್ಚಯವಾಗಿಯೂ ಸೂರ ಬಕರ ಪಠಿಸಲಾಗುವ ಮನೆಯಿಂದ ಶೈತಾನನು ಓಡಿ ಹೋಗುತ್ತಾನೆ."
[صحيح] - [رواه مسلم] - [صحيح مسلم - 780]
ಮನೆಗಳಲ್ಲಿ ನಮಾಝ್ ಮಾಡದಿರುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ವಿರೋಧಿಸುತ್ತಾರೆ. ಏಕೆಂದರೆ ಇದರಿಂದ ಮನೆಗಳು ಸಮಾಧಿಸ್ಥಳವಾಗಿ ಮಾರ್ಪಡುತ್ತದೆ. ಸಮಾಧಿಸ್ಥಳವು ನಮಾಝ್ ಮಾಡುವ ಸ್ಥಳವಲ್ಲ.
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೂರ ಬಕರ ಪಠಿಸಲಾಗುವ ಮನೆಯಿಂದ ಶೈತಾನನು ಓಡಿ ಹೋಗುತ್ತಾನೆ ಎಂದು ತಿಳಿಸುತ್ತಾರೆ.