عن أبي مسعود رضي الله عنه قال: قال النبي صلى الله عليه وسلم:
«مَنْ قَرَأَ بِالْآيَتَيْنِ مِنْ آخِرِ سُورَةِ الْبَقَرَةِ فِي لَيْلَةٍ كَفَتَاهُ».
[صحيح] - [متفق عليه] - [صحيح البخاري: 5009]
المزيــد ...
ಅಬೂ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ರಾತ್ರಿಯಲ್ಲಿ ಸೂರ ಬಕರದ ಕೊನೆಯ ಎರಡು ಶ್ಲೋಕಗಳನ್ನು ಪಠಿಸುತ್ತಾರೋ, ಅವರಿಗೆ ಅವೆರಡು ಸಾಕು."
[صحيح] - [متفق عليه] - [صحيح البخاري - 5009]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ರಾತ್ರಿಯಲ್ಲಿ ಸೂರ ಬಕರದ ಕೊನೆಯ ಎರಡು ಶ್ಲೋಕಗಳನ್ನು ಪಠಿಸುತ್ತಾರೋ, ಅವರಿಗೆ ಎಲ್ಲಾ ಕೆಡುಕು ಮತ್ತು ತೊಂದರೆಗಳಿಂದ ರಕ್ಷಣೆ ಪಡೆಯಲು ಅಲ್ಲಾಹು ಆ ಎರಡು ಶ್ಲೋಕಗಳು ಸಾಕಾಗುವಂತೆ ಮಾಡುತ್ತಾನೆ. ಅವರಿಗೆ ಆ ರಾತ್ರಿಯಲ್ಲಿ ಪೂರ್ಣವಾಗಿ ನಮಾಝ್ ನಿರ್ವಹಿಸುವುದಕ್ಕೆ ಬದಲು ಈ ಎರಡು ಶ್ಲೋಕಗಳನ್ನು ಪಠಿಸಿದರೆ ಸಾಕು ಎಂದು ಕೆಲವು ವಿದ್ವಾಂಸರು ಅರ್ಥ ಹೇಳಿದ್ದಾರೆ. ರಾತ್ರಿಯಲ್ಲಿ ಹೇಳುವ ಎಲ್ಲಾ ದಿಕ್ರ್‌ಗಳಿಗೆ ಬದಲು ಈ ಎರಡು ಶ್ಲೋಕಗಳನ್ನು ಪಠಿಸಿದರೆ ಸಾಕು ಎಂದು ಬೇರೆ ಕೆಲವು ವಿದ್ವಾಂಸರು ಅರ್ಥ ಹೇಳಿದ್ದಾರೆ. ರಾತ್ರಿ ನಮಾಝಿನಲ್ಲಿ ದೀರ್ಘವಾಗಿ ಕುರ್‌ಆನ್ ಪಠಿಸುವುದಕ್ಕೆ ಬದಲು ಈ ಎರಡು ಶ್ಲೋಕಗಳನ್ನು ಪಠಿಸಿದರೆ ಸಾಕು ಎಂದು ಇತರ ಕೆಲವು ವಿದ್ವಾಂಸರು ಅರ್ಥ ಹೇಳಿದ್ದಾರೆ. ವಿದ್ವಾಂಸರಿಂದ ಬೇರೆ ಅಭಿಪ್ರಾಯಗಳೂ ವರದಿಯಾಗಿವೆ. ಬಹುಶಃ ಈ ಎಲ್ಲಾ ಅಭಿಪ್ರಾಯಗಳು ಸರಿಯಾಗಿದ್ದು ಎಲ್ಲವನ್ನೂ ಈ ಹದೀಸ್ ಒಳಗೊಳ್ಳಬಹುದು.