عن أبي هريرة رضي الله عنه قال: قال رسول الله صلى الله عليه وسلم:
«لَأَنْ أَقُولَ: سُبْحَانَ اللهِ، وَالْحَمْدُ لِلهِ، وَلَا إِلَهَ إِلَّا اللهُ، وَاللهُ أَكْبَرُ، أَحَبُّ إِلَيَّ مِمَّا طَلَعَتْ عَلَيْهِ الشَّمْسُ».
[صحيح] - [رواه مسلم] - [صحيح مسلم: 2695]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸುಬ್‌ಹಾನಲ್ಲಾಹಿ, ವಲ್‌ಹಂದುಲಿಲ್ಲಾಹಿ, ವಲಾಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್ ಎಂದು ಹೇಳುವುದು ಸೂರ್ಯ ಬೆಳಗಿದ ಎಲ್ಲ ವಸ್ತುಗಳಿಗಿಂತಲೂ ನನಗೆ ಹೆಚ್ಚು ಇಷ್ಟವಾಗಿದೆ."
[صحيح] - [رواه مسلم] - [صحيح مسلم - 2695]
ಈ ಮಹಾನ್ ವಚನಗಳ ಮೂಲಕ ಅಲ್ಲಾಹನನ್ನು ಸ್ಮರಿಸುವುದು ಇಹಲೋಕ ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳಿಗಿಂತಲೂ ಶ್ರೇಷ್ಠವಾಗಿದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುತ್ತಾರೆ.
ಸುಬ್‌ಹಾನಲ್ಲಾಹ್ ಎಂದರೆ ಅಲ್ಲಾಹನನ್ನು ಎಲ್ಲಾ ರೀತಿಯ ಅಪರಿಪೂರ್ಣತೆಗಳಿಂದ ಪರಿಶುದ್ಧಗೊಳಿಸುವುದು.
ಅಲ್-ಹಮ್ದುಲಿಲ್ಲಾಹ್ ಎಂದರೆ ಅಲ್ಲಾಹನನ್ನು ಪ್ರೀತಿಸುವುದು ಮತ್ತು ಅತಿಯಾಗಿ ಗೌರವಿಸುವುದರ ಜೊತೆಗೆ ಅವನನ್ನು ಸಂಪೂರ್ಣತೆಯ ಗುಣಗಳಿಂದ ಪ್ರಶಂಸಿಸುವುದು.
ಲಾ ಇಲಾಹ ಇಲ್ಲಲ್ಲಾಹ್ ಎಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ.
ಅಲ್ಲಾಹು ಅಕ್ಬರ್ ಅಂದರೆ ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ಪರಮೋಚ್ಛನು ಮತ್ತು ಮಹಾಮಹಿಮನು.