عَنِ أبي زُهير عُمَارَةَ بْنِ رُؤَيْبَةَ رضي الله عنه قَالَ: قَالَ رَسُولُ اللهِ صلى الله عليه وسلم:
«لَنْ يَلِجَ النَّارَ أَحَدٌ صَلَّى قَبْلَ طُلُوعِ الشَّمْسِ وَقَبْلَ غُرُوبِهَا»
[صحيح] - [رواه مسلم] - [صحيح مسلم: 634]
المزيــد ...
ಅಬೂ ಝುಹೈರ್ ಉಮಾರ ಬಿನ್ ರುಐಬ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತಕ್ಕೆ ಮೊದಲು ನಮಾಝ್ ಮಾಡಿದವರು ಎಂದಿಗೂ ನರಕವನ್ನು ಪ್ರವೇಶಿಸುವುದಿಲ್ಲ."
[صحيح] - [رواه مسلم] - [صحيح مسلم - 634]
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಫಜ್ರ್ ನಮಾಝ್ ಮತ್ತು ಅಸರ್ ನಮಾಝನ್ನು ತಪ್ಪದೆ ನಿರ್ವಹಿಸುವವರು ನರಕವನ್ನು ಪ್ರವೇಶಿಸುವುದಿಲ್ಲ. ಇಲ್ಲಿ ಈ ಎರಡು ನಮಾಝ್‌ಗಳನ್ನು ವಿಶೇಷವಾಗಿ ಉಲ್ಲೇಖಿಸಿದ್ದೇಕೆಂದರೆ, ಇವೆರಡು ಅತ್ಯಂತ ಭಾರವಾದ ನಮಾಝ್‌ಗಳಾಗಿವೆ. ಬೆಳಗ್ಗಿನ ಸಮಯವು ಸವಿ ನಿದ್ರೆಯ ಸಮಯವಾಗಿದೆ ಮತ್ತು ಅಸರ್‌ನ ಸಮಯವು ದೈನಂದಿನ ಕೆಲಸ-ಕಾರ್ಯಗಳ ಹಾಗೂ ವ್ಯಾಪಾರದ ಸಮಯವಾಗಿದೆ.ಅತ್ಯಂತ ಕಷ್ಟದಿಂದ ನಿರ್ವಹಿಸಲಾಗುವ ಈ ಎರಡು ನಮಾಝ್‌ಗಳಿಗೆ ಕಾಳಜಿ ನೀಡುವವರು ಉಳಿದ ನಮಾಝ್‌ಗಳಿಗೂ ಕಾಳಜಿ ನೀಡುತ್ತಾರೆ.