عَنِ الأَسْوَدِ بنِ يَزِيدَ قَالَ:
سَأَلْتُ عَائِشَةَ مَا كَانَ النَّبِيُّ صَلَّى اللهُ عَلَيْهِ وَسَلَّمَ يَصْنَعُ فِي بَيْتِهِ؟ قَالَتْ: كَانَ يَكُونُ فِي مِهْنَةِ أَهْلِهِ -تَعْنِي خِدْمَةَ أَهْلِهِ-، فَإِذَا حَضَرَتِ الصَّلاَةُ خَرَجَ إِلَى الصَّلاَةِ.
[صحيح] - [رواه البخاري] - [صحيح البخاري: 676]
المزيــد ...
ಅಲ್-ಅಸ್ವದ್ ಇಬ್ನ್ ಯಝೀದ್ ರಿಂದ ವರದಿ: ಅವರು ಹೇಳಿದರು:
ನಾನು ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಲ್ಲಿ ಕೇಳಿದೆ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮನೆಯಲ್ಲಿ ಏನು ಮಾಡುತ್ತಿದ್ದರು?" ಅವರು (ಆಯಿಷಾ) ಹೇಳಿದರು: "ಅವರು ತಮ್ಮ ಕುಟುಂಬದ ಕೆಲಸಕಾರ್ಯಗಳಲ್ಲಿ ತೊಡಗಿರುತ್ತಿದ್ದರು - ಅಂದರೆ, ತಮ್ಮ ಕುಟುಂಬದ ಸೇವೆಯಲ್ಲಿ - ನಂತರ ನಮಾಝ್‌ನ ಸಮಯವಾದಾಗ, ಅವರು ನಮಾಝ್‌ಗಾಗಿ ಹೊರಡುತ್ತಿದ್ದರು".
[صحيح] - [رواه البخاري] - [صحيح البخاري - 676]
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಲ್ಲಿ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಯಲ್ಲಿನ ಅವರ ಸ್ಥಿತಿ ಮತ್ತು ಅವರು ಹೇಗೆ ವರ್ತಿಸುತ್ತಿದ್ದರು ಎಂದು ಕೇಳಲಾಯಿತು. ಆಗ ಅವರು ಹೇಳಿದರು: ಅವರು (ಪ್ರವಾದಿ) ಒಬ್ಬ ಮನುಷ್ಯರಾಗಿದ್ದರು, ಮತ್ತು ಪುರುಷರು ತಮ್ಮ ಮನೆಗಳಲ್ಲಿ ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದರು. ಅವರು ತಮ್ಮ ಮತ್ತು ತಮ್ಮ ಕುಟುಂಬದ ಸೇವೆ ಮಾಡುತ್ತಿದ್ದರು. ತಮ್ಮ ಆಡಿನ ಹಾಲು ಕರೆಯುತ್ತಿದ್ದರು, ತಮ್ಮ ವಸ್ತ್ರಕ್ಕೆ ತೇಪೆ ಹಾಕುತ್ತಿದ್ದರು, ತಮ್ಮ ಪಾದರಕ್ಷೆಯನ್ನು ಸರಿಪಡಿಸುತ್ತಿದ್ದರು, ಮತ್ತು ತಮ್ಮ (ನೀರಿನ) ಚೀಲವನ್ನು ಸರಿಪಡಿಸುತ್ತಿದ್ದರು. ನಮಾಝ್‌ಗೆ ಇಖಾಮತ್ ನೀಡಿದಾಗ, ಅವರು ತಡ ಮಾಡದೆ ಮಸೀದಿಗೆ ಹೊರಡುತ್ತಿದ್ದರು.