عَنْ أَبِي هُرَيْرَةَ رضي الله عنه أَنَّ رَسُولَ اللهِ صلَّى الله عليه وسلم قال:
«ما مِنْ أحَدٍ يُسلِّمُ علي إلا ردَّ اللهُ عليَّ رُوحي حتى أردَّ عليه السَّلامَ».
[إسناده حسن] - [رواه أبو داود وأحمد] - [سنن أبي داود: 2041]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾವುದೇ ಒಬ್ಬ ವ್ಯಕ್ತಿ ನನಗೆ ಸಲಾಂ ಹೇಳಿದರೂ, ನಾನು ಅವರ ಸಲಾಂಗೆ ಉತ್ತರಿಸುವ ತನಕ ಅಲ್ಲಾಹು ನನ್ನ ಆತ್ಮವನ್ನು ನನಗೆ ಮರಳಿಕೊಡದೇ ಇರಲಾರ."
[إسناده حسن] - [رواه أبو داود وأحمد] - [سنن أبي داود - 2041]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅವರಿಗೆ ಸಲಾಂ ಹೇಳುವ ಎಲ್ಲಾ ಮುಸಲ್ಮಾನರ ಸಲಾಂಗೆ ಉತ್ತರಿಸುವುದಕ್ಕಾಗಿ ಅಲ್ಲಾಹು ಅವರಿಗೆ ಅವರ ಆತ್ಮವನ್ನು ಮರಳಿಕೊಡುತ್ತಾನೆ. ಅವರು ಹತ್ತಿರದಲ್ಲಿದ್ದರೂ ದೂರದಲ್ಲಿದ್ದರೂ ಸಹ. ಬರ್ಝಕ್ ಮತ್ತು ಸಮಾಧಿಯ ಜೀವನವು ಅದೃಶ್ಯ ವಿಷಯಗಳಲ್ಲಿ ಒಳಪಟ್ಟದ್ದಾಗಿದ್ದು, ಅವುಗಳ ನಿಜಸ್ಥಿತಿಯನ್ನು ಅಲ್ಲಾಹನ ಹೊರತು ಯಾರೂ ತಿಳಿದಿಲ್ಲ. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.