عَنْ عُثْمَانَ رضي الله عنه قَالَ: سَمِعْتُ رَسُولَ اللهِ صَلَّى اللهُ عَلَيْهِ وَسَلَّمَ يَقُولُ:
«مَا مِنَ امْرِئٍ مُسْلِمٍ تَحْضُرُهُ صَلَاةٌ مَكْتُوبَةٌ فَيُحْسِنُ وُضُوءَهَا وَخُشُوعَهَا وَرُكُوعَهَا، إِلَّا كَانَتْ كَفَّارَةً لِمَا قَبْلَهَا مِنَ الذُّنُوبِ، مَا لَمْ يُؤْتِ كَبِيرَةً، وَذَلِكَ الدَّهْرَ كُلَّهُ».
[صحيح] - [رواه مسلم] - [صحيح مسلم: 228]
المزيــد ...
ಉಸ್ಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಒಬ್ಬ ಮುಸಲ್ಮಾನನು ಕಡ್ಡಾಯ ನಮಾಝ್‌ನ ಸಮಯವಾದಾಗ ಸರಿಯಾಗಿ ವುದೂ ನಿರ್ವಹಿಸಿ, ಪೂರ್ಣ ಭಕ್ತಿಯಿಂದ ಮತ್ತು ರುಕೂ (ಬಾಗುವುದು) ಅನ್ನು ಸರಿಯಾಗಿ ಪೂರ್ಣಗೊಳಿಸುತ್ತಾ ನಮಾಝ್ ನಿರ್ವಹಿಸಿದರೆ, ಅದು ಅವನ ಗತ ಪಾಪಗಳಿಗೆ ಪ್ರಾಯಶ್ಚಿತ್ತವಾಗುತ್ತದೆ—ಅವು ಮಹಾಪಾಪಗಳಲ್ಲದಿದ್ದರೆ. ಇದು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ.";
[صحيح] - [رواه مسلم] - [صحيح مسلم - 228]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಒಬ್ಬ ಮುಸಲ್ಮಾನನು ಕಡ್ಡಾಯ ನಮಾಝ್‌ನ ಸಮಯವಾದಾಗ, ಅತ್ಯುತ್ತಮ ರೂಪದಲ್ಲಿ ಪೂರ್ಣವಾಗಿ ವುದೂ ನಿರ್ವಹಿಸಿ, ತನ್ನ ಹೃದಯ ಮತ್ತು ಅಂಗಗಳು ಅಲ್ಲಾಹನನ್ನು ಮಾತ್ರ ನೆನಪಿಸಿಕೊಳ್ಳುವ ರೀತಿಯಲ್ಲಿ ಭಯ-ಭಕ್ತಿಯಿಂದ, ನಮಾಝ್‌ನ ಕ್ರಿಯೆಗಳಾದ ಬಾಗುವುದು, ಸಾಷ್ಟಾಂಗ ಮಾಡುವುದು ಮುಂತಾದವುಗಳನ್ನು ಪೂರ್ಣ ರೂಪದಲ್ಲಿ ನಿರ್ವಹಿಸಿದರೆ, ಈ ನಮಾಝ್ ಅವನು ಇದಕ್ಕೆ ಮೊದಲು ಎಸಗಿದ ಸಣ್ಣ ಪಾಪಗಳಿಗೆ ಪರಿಹಾರವಾಗುತ್ತದೆ. ಅವನು ಮಹಾಪಾಪಗಳಲ್ಲಿ ಯಾವುದಾದರೂ ಒಂದನ್ನು ಎಸಗಿರದಿದ್ದರೆ. ಈ ಶ್ರೇಷ್ಠತೆಯು ಎಲ್ಲಾ ಕಾಲಗಳಿಗೂ ಮತ್ತು ಎಲ್ಲಾ ನಮಾಝ್‌ಗಳಿಗೂ ಅನ್ವಯಿಸುತ್ತದೆ.