ಉಪವರ್ಗಗಳು

ಹದೀಸ್‌ಗಳ ಪಟ್ಟಿ

ಇಶಾ ನಮಾಝ್ ಮತ್ತು ಫಜ್ರ್ ನಮಾಝ್ ಕಪಟವಿಶ್ವಾಸಿಗಳಿಗೆ ಅತ್ಯಂತ ಭಾರವಾದ ನಮಾಝ್‌ಗಳಾಗಿವೆ. ಆ ಎರಡು ನಮಾಝ್‌ಗಳಲ್ಲಿರುವ (ಪ್ರತಿಫಲವನ್ನು) ಅವರು ತಿಳಿದಿದ್ದರೆ, ಅವರು ಅದಕ್ಕಾಗಿ ಅಂಬೆಗಾಲಿಟ್ಟುಕೊಂಡಾದರೂ ಬರುತ್ತಿದ್ದರು
عربي ಆಂಗ್ಲ ಉರ್ದು
“ಐದು ವೇಳೆಯ ನಮಾಝ್‌ಗಳು, ಒಂದು ಜುಮುಅದಿಂದ ಇನ್ನೊಂದು ಜುಮುಅ, ಒಂದು ರಮದಾನ್‌ನಿಂದ ಇನ್ನೊಂದು ರಮದಾನ್, ಅವುಗಳ ನಡುವಿನ ಪಾಪಗಳಿಗೆ ಪರಿಹಾರವಾಗಿದೆ; ಮಹಾಪಾಪಗಳಿಂದ ದೂರವಿದ್ದರೆ.”
عربي ಆಂಗ್ಲ ಉರ್ದು
ಫಜ್ರ್ ನಮಾಝ್ ಮಾಡುವವನು ಅಲ್ಲಾಹನ ರಕ್ಷಣೆಯಲ್ಲಿದ್ದಾನೆ
عربي ಆಂಗ್ಲ ಉರ್ದು
ನಾನು ಐದು ವೇಳೆಯ ಕಡ್ಡಾಯ ನಮಾಝ್‌ಗಳನ್ನು ನಿರ್ವಹಿಸಿದರೆ, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸಿದರೆ, ಧರ್ಮಸಮ್ಮತವಾಗಿರುವುದನ್ನು ಧರ್ಮಸಮ್ಮತವೆಂದು ಮತ್ತು ಧರ್ಮನಿಷಿದ್ಧವಾಗಿರುವುದನ್ನು ಧರ್ಮನಿಷಿದ್ಧವೆಂದು ಪರಿಗಣಿಸಿದರೆ
عربي ಆಂಗ್ಲ ಉರ್ದು
“ಶುದ್ಧೀಕರಣವು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ‘ಅಲ್-ಹಮ್ದುಲಿಲ್ಲಾಹ್’ ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ. ‘ಸುಬ್‌ಹಾನಲ್ಲಾಹ್ ವಲ್-ಹಮ್ದುಲಿಲ್ಲಾಹ್’ ಎಂಬ ವಚನಗಳು ತಕ್ಕಡಿಯನ್ನು ತುಂಬುತ್ತವೆ, ಅಥವಾ ಭೂಮ್ಯಾಕಾಶಗಳ ನಡುವಿನ ಭಾಗವನ್ನು ತುಂಬುತ್ತವೆ
عربي ಆಂಗ್ಲ ಉರ್ದು
ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮ ಯಾವುದು?” ಅವರು ಉತ್ತರಿಸಿದರು: “ನಮಾಝನ್ನು ಅದರ ಸಮಯದಲ್ಲಿ ನಿರ್ವಹಿಸುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ನಂತರ ಮಾತಾಪಿತರಿಗೆ ಒಳಿತು ಮಾಡುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದು
عربي ಆಂಗ್ಲ ಉರ್ದು
ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುತ್ತೇನೆ, ನಮಾಝ್ ಸಂಸ್ಥಾಪಿಸುತ್ತೇನೆ, ಝಕಾತ್ ನೀಡುತ್ತೇನೆ, ಕೇಳುತ್ತೇನೆ ಮತ್ತು ಅನುಸರಿಸುತ್ತೇನೆ ಹಾಗೂ ಎಲ್ಲಾ ಮುಸ್ಲಿಮರ ಹಿತಚಿಂತಕನಾಗಿರುತ್ತೇನೆ ಎಂದು ನಾನು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷ್ಠೆಯ ಪ್ರತಿಜ್ಞೆ ಮಾಡಿದೆ
عربي ಆಂಗ್ಲ ಉರ್ದು
ಅಲ್ಲಾಹನಿಗೆ ಅತ್ಯಧಿಕವಾಗಿ ಸುಜೂದ್ ಮಾಡಿರಿ. ಏಕೆಂದರೆ ನೀವು ಅಲ್ಲಾಹನಿಗಾಗಿ ಒಂದು ಸುಜೂದ್ ಮಾಡಿದರೆ, ಅಲ್ಲಾಹು ಅದರಿಂದ ನಿಮಗೆ ಒಂದುಸ್ಥಾನಯನ್ನು ಏರಿಸುವನು ಮತ್ತು ನಿಮ್ಮಿಂದ ಒಂದು ಪಾಪವನ್ನು ಅಳಿಸುವನು
عربي ಆಂಗ್ಲ ಉರ್ದು
ಯಾರು ಎರಡು ಬರದ್ (ತಂಪು) ನಮಾಝ್‌ಗಳನ್ನು ನಿರ್ವಹಿಸುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ
عربي ಆಂಗ್ಲ ಉರ್ದು
ನೀವು ಆಲೋಚಿಸಿ ನೋಡಿದ್ದೀರಾ! ನಿಮ್ಮಲ್ಲೊಬ್ಬನ ಮನೆಯ ಬಾಗಿಲಿನ ಬಳಿ ಒಂದು ನದಿ ಹರಿಯುತ್ತಿದ್ದು, ಅವನು ಅದರಲ್ಲಿ ಪ್ರತಿ ದಿನ ಐದು ಬಾರಿ ಸ್ನಾನ ಮಾಡುತ್ತಿದ್ದರೆ, ಅವನಲ್ಲಿ ಏನಾದರೂ ಕೊಳೆ ಉಳಿಯಬಹುದೇ?
عربي ಆಂಗ್ಲ ಉರ್ದು
ಒಬ್ಬ ಮುಸಲ್ಮಾನನು ಕಡ್ಡಾಯ ನಮಾಝ್‌ನ ಸಮಯವಾದಾಗ ಸರಿಯಾಗಿ ವುದೂ ನಿರ್ವಹಿಸಿ, ಪೂರ್ಣ ಭಕ್ತಿಯಿಂದ ಮತ್ತು ರುಕೂ (ಬಾಗುವುದು) ಅನ್ನು ಸರಿಯಾಗಿ ಪೂರ್ಣಗೊಳಿಸುತ್ತಾ ನಮಾಝ್ ನಿರ್ವಹಿಸಿದರೆ, ಅದು ಅವನ ಗತ ಪಾಪಗಳಿಗೆ ಪ್ರಾಯಶ್ಚಿತ್ತವಾಗುತ್ತದೆ—ಅವು ಮಹಾಪಾಪಗಳಲ್ಲದಿದ್ದರೆ. ಇದು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ.";
عربي ಆಂಗ್ಲ ಉರ್ದು
ಓ ಬಿಲಾಲ್! ನಮಾಝ್‌ಗಾಗಿ ಇಕಾಮತ್ ನೀಡು ಮತ್ತು ಅದರ ಮೂಲಕ ನಮ್ಮನ್ನು ನಿರಾಳಗೊಳಿಸು
عربي ಆಂಗ್ಲ ಉರ್ದು