عن سالم بن أبي الجَعْدِ قال: قال رجل: ليتني صَلَّيتُ فاسترحْتُ، فكأنّهم عابُوا ذلك عليه، فقال: سمعتُ رسولَ الله صلى الله عليه وسلم يقول:
«يا بلالُ، أقِمِ الصَّلاةَ، أرِحْنا بها».
[صحيح] - [رواه أبو داود] - [سنن أبي داود: 4985]
المزيــد ...
ಸಾಲಿಮ್ ಬಿನ್ ಅಬುಲ್-ಜಅದ್ ರಿಂದ ವರದಿ. ಅವರು ಹೇಳಿದರು: ಒಬ್ಬ ವ್ಯಕ್ತಿ ಹೇಳಿದರು: "ನಾನು ನಮಾಝ್ ನಿರ್ವಹಿಸಿ ನಿರಾಳನಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು!" ಆಗ ಜನರು ಅವನನ್ನು ತರಾಟೆಗೆ ಎತ್ತಿಕೊಂಡರೆಂದು ತೋರುತ್ತದೆ. ಆಗ ಆ ವ್ಯಕ್ತಿ ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಓ ಬಿಲಾಲ್! ನಮಾಝ್‌ಗಾಗಿ ಇಕಾಮತ್ ನೀಡು ಮತ್ತು ಅದರ ಮೂಲಕ ನಮ್ಮನ್ನು ನಿರಾಳಗೊಳಿಸು."
[صحيح] - [رواه أبو داود] - [سنن أبي داود - 4985]
ಸಹಾಬಿಗಳಲ್ಲಿ ಸೇರಿದ ಒಬ್ಬ ವ್ಯಕ್ತಿ ಹೇಳಿದರು: "ನಾನು ನಮಾಝ್ ನಿರ್ವಹಿಸಿ ನಿರಾಳನಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು!" ಆಗ ಅವರ ಸುತ್ತಲಿದ್ದ ಜನರು ಅವರನ್ನು ತರಾಟೆಗೆ ಎತ್ತಿಕೊಂಡರೆಂದು ತೋರುತ್ತದೆ. ಆಗ ಆ ವ್ಯಕ್ತಿ ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: ಓ ಬಿಲಾಲ್! ನಮಾಝ್‌ಗೆ ಅಝಾನ್ ಮತ್ತು ಇಕಾಮತ್ ನೀಡು. ನಾವು ನಮಾಝ್ ನಿರ್ವಹಿಸಿ ನಿರಾಳರಾಗುತ್ತೇವೆ. ಏಕೆಂದರೆ ನಮಾಝ್‌ನಲ್ಲಿ ಅಲ್ಲಾಹನೊಂದಿಗೆ ಗುಪ್ತ ಸಂಭಾಷಣೆಯಿದೆ ಮತ್ತು ಅದರಿಂದ ಆತ್ಮ ಹಾಗೂ ಹೃದಯಕ್ಕೆ ನಿರಾಳತೆ ಉಂಟಾಗುತ್ತದೆ.