ಉಪವರ್ಗಗಳು

ಹದೀಸ್‌ಗಳ ಪಟ್ಟಿ

"ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ ನಿಮ್ಮಲ್ಲೊಬ್ಬರು ಹೃದಯಾಂತರಾಳದಿಂದ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ*, ಮುಅಝ್ಝಿನ್ 'ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳುವಾಗ 'ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್' ಎಂದು ಹೇಳುವಾಗ 'ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಹಯ್ಯ ಅಲಸ್ಸಲಾಹ್' ಎಂದು ಹೇಳುವಾಗ 'ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಹಯ್ಯ ಅಲಲ್ ಫಲಾಹ್' ಎಂದು ಹೇಳುವಾಗ 'ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ, ಮುಅಝ್ಝಿನ್ 'ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳುವಾಗ 'ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳಿದರೆ, ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ."
عربي ಆಂಗ್ಲ ಉರ್ದು
"ನೀವು ಅಝಾನ್ ಕೇಳಿದರೆ ಮುಅಝ್ಝಿನ್ ಹೇಳುವಂತೆಯೇ ಹೇಳಿರಿ."
عربي ಆಂಗ್ಲ ಉರ್ದು
"ಮುಅಝ್ಝಿನ್ (ಅಝಾನ್ ಕರೆ ನೀಡುವವನು) ಕರೆ ನೀಡುವುದನ್ನು ಕೇಳಿದಾಗ, ಯಾರು "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷ್ಯ ವಹಿಸುತ್ತೇನೆ, ಪರಿಪಾಲಕನಾಗಿ ಅಲ್ಲಾಹನಲ್ಲಿ, ಸಂದೇಶವಾಹಕರಾಗಿ ಮುಹಮ್ಮದ್‌ರಲ್ಲಿ ಮತ್ತು ಧರ್ಮವಾಗಿ ಇಸ್ಲಾಂನಲ್ಲಿ ನನಗೆ ತೃಪ್ತಿಯಿದೆ ಎಂದು ಹೇಳುತ್ತಾನೋ, ಅವನಿಗೆ ಅವನ ಪಾಪಗಳನ್ನು ಕ್ಷಮಿಸಲಾಗುತ್ತದೆ."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
"ಓ ಬಿಲಾಲ್! ನಮಾಝ್‌ಗಾಗಿ ಇಕಾಮತ್ ನೀಡು ಮತ್ತು ಅದರ ಮೂಲಕ ನಮ್ಮನ್ನು ನಿರಾಳಗೊಳಿಸು."
عربي ಆಂಗ್ಲ ಉರ್ದು