عَنْ عَبْدِ اللهِ بْنِ مُغَفَّلٍ رضي الله عنه قَالَ: قَالَ النَّبِيُّ صلى الله عليه وسلم:
«بَيْنَ كُلِّ أَذَانَيْنِ صَلَاةٌ، بَيْنَ كُلِّ أَذَانَيْنِ صَلَاةٌ» ثُمَّ قَالَ فِي الثَّالِثَةِ: «لِمَنْ شَاءَ».
[صحيح] - [متفق عليه] - [صحيح البخاري: 627]
المزيــد ...
ಅಬ್ದುಲ್ಲಾ ಬಿನ್ ಮುಗಫ್ಫಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಎಲ್ಲಾ ಎರಡು ಅಝಾನ್‌ಗಳ ನಡುವೆ ಒಂದು ನಮಾಝ್ ಇದೆ. ಎಲ್ಲಾ ಎರಡು ಅಝಾನ್‌ಗಳ ನಡುವೆ ಒಂದು ನಮಾಝ್ ಇದೆ." ನಂತರ ಮೂರನೆಯದಾಗಿ ಹೇಳಿದರು: "ಇಚ್ಛಿಸುವವರಿಗೆ ಮಾತ್ರ."
[صحيح] - [متفق عليه] - [صحيح البخاري - 627]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಎಲ್ಲಾ ಅಝಾನ್ ಮತ್ತು ಇಕಾಮತ್‌ಗಳ ನಡುವೆ ಒಂದು ಐಚ್ಛಿಕ ನಮಾಝ್ ಇದೆ. ಅವರು ಇದನ್ನು ಮೂರು ಬಾರಿ ಹೇಳಿ, ಮೂರನೆಯದರಲ್ಲಿ, ಅದು ಅಪೇಕ್ಷಣೀಯವಾಗಿದ್ದು ನಿರ್ವಹಿಸಲು ಬಯಸುವವರು ನಿರ್ವಹಿಸಬಹುದು ಎಂದು ಸೇರಿಸಿ ಹೇಳಿದರು.