ಹದೀಸ್‌ಗಳ ಪಟ್ಟಿ

"ಆಹಾರವು ಸಿದ್ಧವಾಗಿರುವಾಗ ಮತ್ತು ಮಲಮೂತ್ರಗಳನ್ನು ಅದುಮಿಕೊಂಡು ನಮಾಝ್ ನಿರ್ವಹಿಸಬಾರದು."
عربي ಆಂಗ್ಲ ಉರ್ದು
"ಶುಕ್ರವಾರ ಇಮಾಮರು ಪ್ರವಚನ ನಿರ್ವಹಿಸುತ್ತಿರುವಾಗ, ನೀನು ನಿನ್ನ ಬಳಿಯಿರುವವನಿಗೆ "ಮೌನವಾಗಿರು" ಎಂದು ಹೇಳಿದರೆ ನೀನು ಅನಗತ್ಯವಾದುದನ್ನು ಮಾಡಿದೆ."
عربي ಆಂಗ್ಲ ಉರ್ದು
"ಓ ಅಲ್ಲಾಹ್, ನನ್ನ ಸಮಾಧಿಯನ್ನು ವಿಗ್ರಹವನ್ನಾಗಿ ಮಾಡಬೇಡ*. ತಮ್ಮ ಪ್ರವಾದಿಗಳ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಂಡ ಜನರನ್ನು ಅಲ್ಲಾಹು ಶಪಿಸಿದ್ದಾನೆ."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
“ಐದು ವೇಳೆಯ ನಮಾಝ್‌ಗಳು, ಒಂದು ಜುಮುಅದಿಂದ ಇನ್ನೊಂದು ಜುಮುಅ, ಒಂದು ರಮದಾನ್‌ನಿಂದ ಇನ್ನೊಂದು ರಮದಾನ್, ಅವುಗಳ ನಡುವಿನ ಪಾಪಗಳಿಗೆ ಪರಿಹಾರವಾಗಿದೆ; ಮಹಾಪಾಪಗಳಿಂದ ದೂರವಿದ್ದರೆ.”
عربي ಆಂಗ್ಲ ಉರ್ದು
"ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ಕದರ್‌ನ ರಾತ್ರಿಯಲ್ಲಿ ನಮಾಝ್ ನಿರ್ವಹಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”
عربي ಆಂಗ್ಲ ಉರ್ದು
"ಫಜ್ರ್ ನಮಾಝ್ ಮಾಡುವವನು ಅಲ್ಲಾಹನ ರಕ್ಷಣೆಯಲ್ಲಿದ್ದಾನೆ*. ಆದ್ದರಿಂದ, ತನ್ನ ರಕ್ಷಣೆಯನ್ನು ಮುರಿದದ್ದಕ್ಕಾಗಿ ಅಲ್ಲಾಹು ನಿಮ್ಮನ್ನು ಪ್ರಶ್ನಿಸುವಂತೆ ಮಾಡಬೇಡಿ. ಏಕೆಂದರೆ, ತನ್ನ ರಕ್ಷಣೆಯನ್ನು ಮುರಿದದ್ದಕ್ಕಾಗಿ ಅಲ್ಲಾಹು ಯಾರನ್ನಾದರೂ ಪ್ರಶ್ನೆ ಮಾಡಿದರೆ ಅವನನ್ನು ಹಿಡಿದು ತಲೆಕೆಳಗಾಗಿ ನರಕಕ್ಕೆ ಎಸೆಯುತ್ತಾನೆ."
عربي ಆಂಗ್ಲ ಉರ್ದು
ಇಬ್ನ್ ಝುಬೈರ್ ಪ್ರತಿಯೊಂದು ನಮಾಝ್‌ನಲ್ಲೂ ಸಲಾಂ ಹೇಳಿದ ನಂತರ ಇದನ್ನು ಪಠಿಸುತ್ತಿದ್ದರು: "ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್. ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್. ಲಾ ಇಲಾಹ ಇಲ್ಲಲ್ಲಾಹು, ವಲಾ ನಅ್‌ಬುದು ಇಲ್ಲಾ ಇಯ್ಯಾಹು, ಲಹು ನ್ನಿಅ್‌‌ಮತು ವಲಹುಲ್ ಫದ್ಲು, ವಲಹು ಸ್ಸನಾಉಲ್ ಹಸನು, ಲಾ ಇಲಾಹ ಇಲ್ಲಲ್ಲಾಹು ಮುಖ್ಲಿಸೀನ ಲಹು ದ್ದೀನ ವಲವ್ ಕರಿಹಲ್ ಕಾಫಿರೂನ್." (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಆಧಿಪತ್ಯವು ಅವನದ್ದು ಮತ್ತು ಸ್ತುತಿಯು ಅವನಿಗೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ಅಲ್ಲಾಹನ ಹೊರತು ಶಕ್ತಿಯಾಗಲಿ ಸಾಮರ್ಥ್ಯವಾಗಲಿ ಇಲ್ಲ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ನಾವು ಅವನನ್ನಲ್ಲದೆ ಇನ್ನಾರನ್ನೂ ಆರಾಧಿಸುವುದಿಲ್ಲ. ಅನುಗ್ರಹವು ಅವನದ್ದು, ಔದಾರ್ಯವು ಅವನದ್ದು ಮತ್ತು ಉತ್ತಮವಾದ ಪ್ರಶಂಸೆಯು ಅವನಿಗೆ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ ನಾವು ಧರ್ಮವನ್ನು ಅವನಿಗೆ ನಿಷ್ಕಳಂಕಗೊಳಿಸುತ್ತೇವೆ). ನಂತರ ಅವರು ಹೇಳಿದರು: "@ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ನಮಾಝ್‌ಗಳ ನಂತರ ಇವುಗಳ ಮೂಲಕ ತಹ್ಲೀಲ್ (ಲಾಇಲಾಹ ಇಲ್ಲಲ್ಲಾಹ್) ಪಠಿಸುತ್ತಿದ್ದರು."
عربي ಆಂಗ್ಲ ಉರ್ದು
"ಅಸರ್ ನಮಾಜನ್ನು ಬೇಗನೆ ನಿರ್ವಹಿಸಿರಿ. ಏಕೆಂದರೆ ಪ್ರವಾದಿಯವರು ಹೇಳಿದರು: "@ಯಾರು ಅಸರ್ ನಮಾಝನ್ನು ತೊರೆಯುತ್ತಾರೋ ಅವರ ಕರ್ಮಗಳು ನಿಷ್ಪಲವಾಗುತ್ತವೆ."
عربي ಆಂಗ್ಲ ಉರ್ದು
"ಸಮಾಧಿಗಳ ಮೇಲೆ ಕೂರಬೇಡಿ ಮತ್ತು ಅವುಗಳ ಕಡೆಗೆ ನಮಾಝ್ ಮಾಡಬೇಡಿ."
عربي ಆಂಗ್ಲ ಉರ್ದು
ಒಮ್ಮೆ ಉಮ್ಮು ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಬಿಸೀನಿಯಾದಲ್ಲಿ ನೋಡಿದ ಮಾರಿಯ ಎಂಬ ಹೆಸರಿನ ಇಗರ್ಜಿಯ ಬಗ್ಗೆ ಮತ್ತು ಅದರಲ್ಲಿ ಅವರು ನೋಡಿದ ಚಿತ್ರಗಳ ಬಗ್ಗೆ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಮನ ಸೆಳೆದಾಗ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "@ಅವರು ಎಂತಹ ಜನರೆಂದರೆ, ಅವರಲ್ಲಿ ಒಬ್ಬ ನೀತಿವಂತ ದಾಸ ಅಥವಾ ಒಬ್ಬ ನೀತಿವಂತ ವ್ಯಕ್ತಿ ಮರಣಹೊಂದಿದರೆ, ಅವರು ಅವನ ಸಮಾಧಿಯ ಮೇಲೆ ಆರಾಧನಾಲಯವನ್ನು ನಿರ್ಮಿಸುತ್ತಿದ್ದರು* ಮತ್ತು ಅದರಲ್ಲಿ ಆ ಚಿತ್ರಗಳನ್ನು ರಚಿಸುತ್ತಿದ್ದರು. ಅವರು ಅಲ್ಲಾಹನ ದೃಷ್ಟಿಯಲ್ಲಿ ಸೃಷ್ಟಿಗಳಲ್ಲೇ ಅತ್ಯಂತ ನಿಕೃಷ್ಟರು."
عربي ಆಂಗ್ಲ ಉರ್ದು
"ನನಗೆ ಏಳು ಎಲುಬುಗಳ ಮೇಲೆ ಸಾಷ್ಟಾಂಗ ಮಾಡಲು ಆಜ್ಞಾಪಿಸಲಾಗಿದೆ.* ಅವು: ಹಣೆ"—ಇದನ್ನು ಹೇಳುವಾಗ ಅವರು ತಮ್ಮ ಕೈಯಿಂದ ಮೂಗಿನ ಕಡೆಗೆ ತೋರಿಸಿದರು—"ಕೈಗಳು, ಮೊಣಕಾಲುಗಳು ಮತ್ತು ಪಾದಗಳ ತುದಿಗಳು. ಮತ್ತು ಬಟ್ಟೆ ಹಾಗೂ ಕೂದಲನ್ನು ಮಡಚಬಾರದೆಂದು ಕೂಡ ಆಜ್ಞಾಪಿಸಲಾಗಿದೆ."
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ಅಲ್ಲಾಹುಮ್ಮಗ್ಫಿರ್ ಲೀ, ವರ್‌ಹಮ್‌ನೀ, ವಆಫಿನೀ, ವಹ್ದಿನೀ, ವರ್‌ಝುಕ್‌ನೀ" (ಓ ಅಲ್ಲಾಹ್! ನನ್ನನ್ನು ಕ್ಷಮಿಸು, ನನಗೆ ದಯೆತೋರು, ನನಗೆ ಸೌಖ್ಯವನ್ನು ನೀಡು, ನನಗೆ ಸನ್ಮಾರ್ಗವನ್ನು ತೋರಿಸು ಮತ್ತು ನನಗೆ ಜೀವನೋಪಾಯವನ್ನು ದಯಪಾಲಿಸು) ಎಂದು ಹೇಳುತ್ತಿದ್ದರು.
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮುಗಿಸಿದರೆ ಮೂರು ಬಾರಿ ಇಸ್ತಿಗ್ಫಾರ್ (ಕ್ಷಮೆಯಾಚನೆ) ಮಾಡುತ್ತಿದ್ದರು. ನಂತರ ಹೀಗೆ ಹೇಳುತ್ತಿದ್ದರು: "@ಅಲ್ಲಾಹುಮ್ಮ ಅನ್ತ ಸ್ಸಲಾಂ, ವಮಿನ್ಕ ಸ್ಸಲಾಂ, ತಬಾರಕ್ತ ದಲ್ ಜಲಾಲಿ ವಲ್ ಇಕ್ರಾಮ್*" (ಓ ಅಲ್ಲಾಹ್! ನೀನು ಅಸ್ಸಲಾಂ (ಶಾಂತಿ) ಮತ್ತು ನಿನ್ನಿಂದಲೇ ಶಾಂತಿ. ಓ ಮಹಿಮೆ ಪ್ರತಿಷ್ಠೆಗಳನ್ನು ಹೊಂದಿರುವವನೇ! ನೀನು ಅನುಗ್ರಹಪೂರ್ಣನಾಗಿರುವೆ.” (ವರದಿಗಾರರಲ್ಲಿ ಒಬ್ಬರಾದ) ವಲೀದ್ ಹೇಳುತ್ತಾರೆ: ನಾನು ಔಝಾಈರೊಡನೆ ಕೇಳಿದೆ: "ನಾನು ಕ್ಷಮೆಯಾಚನೆ ಮಾಡುವುದು ಹೇಗೆ?" ಅವರು ಉತ್ತರಿಸಿದರು: "ಅಸ್ತಗ್ಫಿರುಲ್ಲಾಹ್, ಅಸ್ತಗ್ಫಿರುಲ್ಲಾಹ್ ಎಂದು ಹೇಳುವುದು."
عربي ಆಂಗ್ಲ ಉರ್ದು
"ನಿಂತು ನಮಾಝ್ ನಿರ್ವಹಿಸಿ, ಅದು ಸಾಧ್ಯವಾಗದಿದ್ದರೆ ಕುಳಿತು ನಿರ್ವಹಿಸಿ, ಅದು ಕೂಡ ಸಾಧ್ಯವಾಗದಿದ್ದರೆ ಮಲಗಿ ನಿರ್ವಹಿಸಿ."
عربي ಆಂಗ್ಲ ಉರ್ದು
:
عربي ಆಂಗ್ಲ ಉರ್ದು
"ಇಸ್ಲಾಂ ಧರ್ಮವನ್ನು ಐದು (ಸ್ತಂಭಗಳ) ಮೇಲೆ ನಿರ್ಮಿಸಲಾಗಿದೆ*. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ಹಜ್ಜ್ ನಿರ್ವಹಿಸುವುದು ಮತ್ತು ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು."
عربي ಆಂಗ್ಲ ಉರ್ದು
ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "@ನಾನು ಐದು ವೇಳೆಯ ಕಡ್ಡಾಯ ನಮಾಝ್‌ಗಳನ್ನು ನಿರ್ವಹಿಸಿದರೆ, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸಿದರೆ, ಧರ್ಮಸಮ್ಮತವಾಗಿರುವುದನ್ನು ಧರ್ಮಸಮ್ಮತವೆಂದು ಮತ್ತು ಧರ್ಮನಿಷಿದ್ಧವಾಗಿರುವುದನ್ನು ಧರ್ಮನಿಷಿದ್ಧವೆಂದು ಪರಿಗಣಿಸಿದರೆ*, ಮತ್ತು ಇವುಗಳಿಗಿಂತ ಹೆಚ್ಚು ಏನೂ ನಿರ್ವಹಿಸದಿದ್ದರೆ, ನಾನು ಸ್ವರ್ಗಕ್ಕೆ ಹೋಗುವೆನೇ?" ಅವರು ಉತ್ತರಿಸಿದರು: "ಹೌದು." ಆ ವ್ಯಕ್ತಿ ಹೇಳಿದರು: "ಅಲ್ಲಾಹನಾಣೆ! ನಾನು ಅವುಗಳಿಗಿಂತ ಏನೂ ಹೆಚ್ಚಿಸುವುದಿಲ್ಲ."
عربي ಆಂಗ್ಲ ಉರ್ದು
. .
عربي ಆಂಗ್ಲ ಉರ್ದು
"ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ ನಿಮ್ಮಲ್ಲೊಬ್ಬರು ಹೃದಯಾಂತರಾಳದಿಂದ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ*, ಮುಅಝ್ಝಿನ್ 'ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳುವಾಗ 'ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್' ಎಂದು ಹೇಳುವಾಗ 'ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಹಯ್ಯ ಅಲಸ್ಸಲಾಹ್' ಎಂದು ಹೇಳುವಾಗ 'ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಹಯ್ಯ ಅಲಲ್ ಫಲಾಹ್' ಎಂದು ಹೇಳುವಾಗ 'ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ, ಮುಅಝ್ಝಿನ್ 'ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳುವಾಗ 'ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳಿದರೆ, ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
"ಒಬ್ಬ ವ್ಯಕ್ತಿ ಮತ್ತು ಶಿರ್ಕ್ (ದೇವಸಹಭಾಗಿತ್ವ) ಹಾಗೂ ಕುಫ್ರ್ (ಸತ್ಯನಿಷೇಧ) ನ ನಡುವಿನ ಅಂತರವು ನಮಾಝನ್ನು ತೊರೆಯುವುದಾಗಿದೆ."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
"ನೀವು ಅಝಾನ್ ಕೇಳಿದರೆ ಮುಅಝ್ಝಿನ್ ಹೇಳುವಂತೆಯೇ ಹೇಳಿರಿ."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
"ನಾನು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ರಕಅತ್‌ಗಳನ್ನು ಜ್ಞಾಪಕದಲ್ಲಿಟ್ಟಿದ್ದೇನೆ*: ಝುಹರ್ ನಮಾಝಿಗೆ ಮೊದಲು ಎರಡು ರಕಅತ್‌ಗಳು ಮತ್ತು ಅದರ ನಂತರ ಎರಡು ರಕಅತ್‌ಗಳು, ಮಗ್ರಿಬ್ ನಂತರ ಮನೆಯಲ್ಲಿ ಎರಡು ರಕಅತ್‌ಗಳು, ಇಶಾ ನಂತರ ಮನೆಯಲ್ಲಿ ಎರಡು ರಕಅತ್‌ಗಳು, ಫಜ್ರ್ ನಮಾಝಿಗೆ ಮೊದಲು ಎರಡು ರಕಅತ್‌ಗಳು. (ಇವು ಮಾತ್ರವಲ್ಲದೆ) ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಯಾರೂ ಹೋಗದಂತಹ ಒಂದು ಸಮಯವಿದೆ. (ಪ್ರವಾದಿ ಪತ್ನಿ) ಹಫ್ಸ ನನಗೆ ತಿಳಿಸಿದರು: ಮುಅಝ್ಝಿನ್ ಅಝಾನ್ ನೀಡಿ ಪ್ರಭಾತವು ಉದಯವಾದಾಗ ಪ್ರವಾದಿಯವರು ಎರಡು ರಕಅತ್‌ ನಮಾಝ್ ಮಾಡುತ್ತಿದ್ದರು." ಇನ್ನೊಂದು ವರದಿಯಲ್ಲಿ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜುಮಾ ನಮಾಝಿನ ಬಳಿಕ ಎರಡು ರಕಅತ್‌ ನಮಾಝ್ ನಿರ್ವಹಿಸುತ್ತಿದ್ದರು."
عربي ಆಂಗ್ಲ ಉರ್ದು
"ಇಮಾಮರು ತಲೆ ಎತ್ತುವುದಕ್ಕಿಂತ ಮೊದಲು ತಲೆ ಎತ್ತುವವರು, ಅಲ್ಲಾಹು ಅವರ ತಲೆಯನ್ನು ಕತ್ತೆಯ ತಲೆಯಾಗಿ, ಅಥವಾ ಅವರ ರೂಪವನ್ನು ಕತ್ತೆಯ ರೂಪವಾಗಿ ಮಾರ್ಪಡಿಸುವನು ಎಂದು ಭಯಪಡುವುದಿಲ್ಲವೇ?"
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝನ್ನು ಪ್ರಾರಂಭಿಸುವಾಗ ತಮ್ಮ ಎರಡು ಕೈಗಳನ್ನು ಹೆಗಲಿಗೆ ಸಮಾನಾಂತರವಾಗಿ ಎತ್ತುತ್ತಿದ್ದರು.* ಅದೇ ರೀತಿ, ರುಕೂ ಮಾಡುವಾಗಲೂ, ರುಕೂವಿನಿಂದ ತಲೆ ಎತ್ತುವಾಗಲೂ ಕೈಗಳನ್ನು ಎತ್ತುತ್ತಿದ್ದರು ಮತ್ತು "ಸಮಿಅಲ್ಲಾಹು ಲಿಮನ್ ಹಮಿದ, ರಬ್ಬನಾ ವಲಕಲ್ ಹಮ್ದ್" ಎಂದು ಹೇಳುತ್ತಿದ್ದರು. ಆದರೆ ಸುಜೂದ್‌ನಲ್ಲಿ ಅವರು ಹೀಗೆ ಮಾಡುತ್ತಿರಲಿಲ್ಲ.
عربي ಆಂಗ್ಲ ಉರ್ದು
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಅಂಗೈಯನ್ನು ಅವರ ಎರಡು ಅಂಗೈಗಳ ಮಧ್ಯದಲ್ಲಿಟ್ಟು, ಕುರ್‌ಆನಿನ ಒಂದು ಅಧ್ಯಾಯವನ್ನು ಕಲಿಸಿಕೊಡುವಂತೆ ನನಗೆ ತಶಹ್ಹುದ್ ಕಲಿಸಿಕೊಟ್ಟರು*: ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು, ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್. ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು." (ಅಭಿವಂದನೆಗಳು, ನಮಾಝ್‌ಗಳು ಮತ್ತು ಅತ್ಯುತ್ತಮವಾದುದೆಲ್ಲವೂ ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಸಮೃದ್ಧಿಯಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ನೀತಿವಂತ ದಾಸರೆಲ್ಲರ ಮೇಲೆ ಶಾಂತಿಯಿರಲಿ. ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ದೇವರಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ). ಇನ್ನೊಂದು ವರದಿಯಲ್ಲಿ: "ನಿಶ್ಚಯವಾಗಿಯೂ ಅಲ್ಲಾಹು ಶಾಂತಿಯಾಗಿದ್ದಾನೆ. ಆದ್ದರಿಂದ ನಿಮ್ಮಲ್ಲೊಬ್ಬರು ನಮಾಝಿನಲ್ಲಿ ಕುಳಿತುಕೊಳ್ಳುವಾಗ ಹೀಗೆ ಹೇಳಲಿ: ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು, ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್. (ಅಭಿವಂದನೆಗಳು, ನಮಾಝ್‌ಗಳು ಮತ್ತು ಅತ್ಯುತ್ತಮವಾದುದೆಲ್ಲವೂ ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಸಮೃದ್ಧಿಯಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ನೀತಿವಂತ ದಾಸರೆಲ್ಲರ ಮೇಲೆ ಶಾಂತಿಯಿರಲಿ). ಹೀಗೆ ಹೇಳಿದರೆ ಭೂಮ್ಯಾಕಾಶಗಳಲ್ಲಿರುವ ಅಲ್ಲಾಹನ ಎಲ್ಲಾ ನೀತಿವಂತ ದಾಸರಿಗೂ ಅದು ಅನ್ವಯಿಸುತ್ತದೆ. ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು. (ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ದೇವರಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ). ನಂತರ ಅವರಿಗೆ ಇಷ್ಟವಾದ ಪ್ರಾರ್ಥನೆಯನ್ನು ಪ್ರಾರ್ಥಿಸಬಹುದು."
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸುತ್ತಾ ಹೇಳುತ್ತಿದ್ದರು: "@ಓ ಅಲ್ಲಾಹ್! ನಾನು ನಿನ್ನಲ್ಲಿ ಸಮಾಧಿಯ ಶಿಕ್ಷೆಯಿಂದ, ನರಕ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ದಜ್ಜಾಲ್‌ನ ಪರೀಕ್ಷೆಯಿಂದ ರಕ್ಷೆ ಬೇಡುತ್ತೇನೆ.*" ಮುಸ್ಲಿಂರ ಇನ್ನೊಂದು ವರದಿಯಲ್ಲಿ: "ನಿಮ್ಮಲ್ಲೊಬ್ಬನು ಕೊನೆಯ ತಶಹ್ಹುದ್ ಪಠಿಸಿದ ನಂತರ ನಾಲ್ಕು ವಿಷಯಗಳಿಂದ ಅಲ್ಲಾಹನಲ್ಲಿ ರಕ್ಷೆ ಬೇಡಲಿ. ನರಕ ಶಿಕ್ಷೆಯಿಂದ, ಸಮಾಧಿಯ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ದಜ್ಜಾಲ್‌ನ ಕೆಡುಕಿನಿಂದ."
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝಿಗಾಗಿ ತಕ್ಬೀರ್ ಹೇಳಿದರೆ, ಕುರ್‌ಆನ್ ಪಠಿಸುವುದಕ್ಕೆ ಮೊದಲು ಸ್ವಲ್ಪ ಹೊತ್ತು ಮೌನವಾಗಿರುತ್ತಿದ್ದರು. ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನನ್ನ ತಂದೆ-ತಾಯಿಗಳನ್ನು ನಿಮಗೆ ಅರ್ಪಿಸುತ್ತಿದ್ದೇನೆ. ತಕ್ಬೀರ್ ಮತ್ತು ಕುರ್‌ಆನ್ ಪಠಣದ ನಡುವೆ ನೀವು ಮೌನವಾಗಿರುತ್ತೀರಿ. ಆಗ ನೀವು ಏನು ಪಠಿಸುತ್ತೀರಿ? ಅವರು ಉತ್ತರಿಸಿದರು: "ನಾನು ಹೀಗೆ ಹೇಳುತ್ತೇನೆ: @ಓ ಅಲ್ಲಾಹ್! ಪೂರ್ವ ಮತ್ತು ಪಶ್ಚಿಮಗಳ ನಡುವೆ ಅಂತರವಿಟ್ಟಂತೆ ನನ್ನ ಮತ್ತು ನನ್ನ ಪಾಪಗಳ ನಡುವೆ ಅಂತರವಿಡು.* ಓ ಅಲ್ಲಾಹ್! ಬಿಳಿಬಟ್ಟೆಯನ್ನು ಕೊಳೆಯಿಂದ ಶುಚಿಗೊಳಿಸುವಂತೆ ನನ್ನ ಪಾಪಗಳಿಂದ ನನ್ನನ್ನು ಶುಚಿಗೊಳಿಸು. ಓ ಅಲ್ಲಾಹ್! ಮಂಜು, ನೀರು ಮತ್ತು ಹಿಮದ ಮೂಲಕ ನನ್ನ ಪಾಪಗಳಿಂದ ನನ್ನನ್ನು ತೊಳೆದುಬಿಡು."
عربي ಆಂಗ್ಲ ಉರ್ದು
: . : : . : :
عربي ಆಂಗ್ಲ ಉರ್ದು
ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುತ್ತೇನೆ, ನಮಾಝ್ ಸಂಸ್ಥಾಪಿಸುತ್ತೇನೆ, ಝಕಾತ್ ನೀಡುತ್ತೇನೆ, ಕೇಳುತ್ತೇನೆ ಮತ್ತು ಅನುಸರಿಸುತ್ತೇನೆ ಹಾಗೂ ಎಲ್ಲಾ ಮುಸ್ಲಿಮರ ಹಿತಚಿಂತಕನಾಗಿರುತ್ತೇನೆ ಎಂದು ನಾನು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷ್ಠೆಯ ಪ್ರತಿಜ್ಞೆ ಮಾಡಿದೆ.
عربي ಆಂಗ್ಲ ಉರ್ದು
. :
عربي ಆಂಗ್ಲ ಉರ್ದು
. .
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
"ಯಾರು ಎರಡು ಬರದ್ (ತಂಪು) ನಮಾಝ್‌ಗಳನ್ನು ನಿರ್ವಹಿಸುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ."
عربي ಆಂಗ್ಲ ಉರ್ದು
"ಒಬ್ಬ ವ್ಯಕ್ತಿ ಸಾಮೂಹಿಕವಾಗಿ (ಜಮಾಅತ್‌ನೊಂದಿಗೆ) ನಮಾಝ್ ನಿರ್ವಹಿಸುವುದು, ಆತ ತನ್ನ ಮನೆಯಲ್ಲಿ ಅಥವಾ ತನ್ನ ಮಾರುಕಟ್ಟೆಯಲ್ಲಿ ನಿರ್ವಹಿಸುವ ನಮಾಝ್‌ಗಿಂತ ಇಪ್ಪತ್ತಕ್ಕಿಂತಲೂ ಹೆಚ್ಚು ಪದವಿಗಳನ್ನು ಹೊಂದಿದೆ.* ಅದೇಕೆಂದರೆ, ಅವರಲ್ಲೊಬ್ಬನು ಅತ್ಯುತ್ತಮ ರೀತಿಯಲ್ಲಿ ವುದೂ (ಅಂಗಸ್ನಾನ) ನಿರ್ವಹಿಸಿ, ನಂತರ ಮಸೀದಿಗೆ ಹೊರಡುತ್ತಾನೆ. ನಮಾಝಿನ ಹೊರತು ಇನ್ನೇನೂ ಅವನನ್ನು (ಹೊರಡುವಂತೆ) ಪ್ರಚೋದಿಸುವುದಿಲ್ಲ. ಅವನು ನಮಾಝನ್ನಲ್ಲದೆ ಇನ್ನೇನನ್ನೂ ಉದ್ದೇಶಿಸುವುದೂ ಇಲ್ಲ. ಹಾಗಾದರೆ, ಅವನು ಮಸೀದಿಯನ್ನು ಪ್ರವೇಶಿಸುವ ತನಕ ಅವನ ಒಂದೊಂದು ಹೆಜ್ಜೆಗೂ ಅವನಿಗೆ ಒಂದೊಂದು ಪದವಿಯನ್ನು ಏರಿಸಲಾಗುತ್ತದೆ ಮತ್ತು ಅವನಿಂದ ಒಂದೊಂದು ಪಾಪವನ್ನು ಅಳಿಸಲಾಗುತ್ತದೆ. ಅವನು ಮಸೀದಿಯನ್ನು ಪ್ರವೇಶಿಸಿದ ನಂತರ, ಎಲ್ಲಿಯವರೆಗೆ ನಮಾಝ್ ಅವನನ್ನು ಅಲ್ಲಿ ತಡೆದಿರಿಸುತ್ತದೋ ಅಲ್ಲಿಯ ತನಕ ಅವನು ನಮಾಝ್ ಮಾಡುತ್ತಿದ್ದಾನೆಂದೇ ಪರಿಗಣಿಸಲಾಗುತ್ತದೆ. ನಿಮ್ಮಲ್ಲೊಬ್ಬನು ನಮಾಝ್ ಮಾಡಿದ ಸ್ಥಳದಲ್ಲೇ ಕುಳಿತಿರುವ ತನಕ ದೇವದೂತರುಗಳು, “ಓ ಅಲ್ಲಾಹ್! ಇವನಿಗೆ ದಯೆ ತೋರು! ಓ ಅಲ್ಲಾಹ್! ಇವನನ್ನು ಕ್ಷಮಿಸು! ಓ ಅಲ್ಲಾಹ್! ಇವನ ಪಶ್ಚಾತ್ತಾಪವನ್ನು ಸ್ವೀಕರಿಸು!” ಎಂದು ಅವನಿಗಾಗಿ ಪ್ರಾರ್ಥಿಸುತ್ತಲೇ ಇರುತ್ತಾರೆ. ಅವನು ಇತರರಿಗೆ ತೊಂದರೆ ಕೊಡದಿರುವ ತನಕ, ಅಥವಾ ಅವನ ವುದೂ (ಅಂಗಸ್ನಾನ) ಅಸಿಂಧುವಾಗದಿರುವ ತನಕ."
عربي ಆಂಗ್ಲ ಉರ್ದು
:
عربي ಆಂಗ್ಲ ಉರ್ದು
"ನೀವು ಆಲೋಚಿಸಿ ನೋಡಿದ್ದೀರಾ! ನಿಮ್ಮಲ್ಲೊಬ್ಬನ ಮನೆಯ ಬಾಗಿಲಿನ ಬಳಿ ಒಂದು ನದಿ ಹರಿಯುತ್ತಿದ್ದು, ಅವನು ಅದರಲ್ಲಿ ಪ್ರತಿ ದಿನ ಐದು ಬಾರಿ ಸ್ನಾನ ಮಾಡುತ್ತಿದ್ದರೆ, ಅವನಲ್ಲಿ ಏನಾದರೂ ಕೊಳೆ ಉಳಿಯಬಹುದೇ?"* ಅವರು ಉತ್ತರಿಸಿದರು: "ಅವನ ದೇಹದಲ್ಲಿ ಯಾವುದೇ ಕೊಳೆ ಉಳಿಯಲಾರದು." ಅವರು (ಪ್ರವಾದಿ) ಹೇಳಿದರು: "ಅದು ಐದು ವೇಳೆಯ ನಮಾಝಿನ ಉದಾಹರಣೆಯಾಗಿದೆ. ಅದರ ಮೂಲಕ ಅಲ್ಲಾಹು ಪಾಪಗಳನ್ನು ಅಳಿಸುತ್ತಾನೆ."
عربي ಆಂಗ್ಲ ಉರ್ದು
"ಮಕ್ಕಳಿಗೆ ಏಳು ವರ್ಷ ಪ್ರಾಯವಾದಾಗ ನಮಾಝ್ ನಿರ್ವಹಿಸಲು ಆದೇಶಿಸಿರಿ, ಹತ್ತು ವರ್ಷ ಪ್ರಾಯವಾದಾಗ ಅದಕ್ಕಾಗಿ ಹೊಡೆಯಿರಿ ಮತ್ತು ಮಲಗುವ ಸ್ಥಳದಲ್ಲಿ ಅವರನ್ನು ಬೇರ್ಪಡಿಸಿರಿ."
عربي ಆಂಗ್ಲ ಉರ್ದು
: .
عربي ಆಂಗ್ಲ ಉರ್ದು
"ಗ್ರಂಥದ ಆರಂಭವನ್ನು (ಸೂರ ಫಾತಿಹ) ಪಠಿಸದವನಿಗೆ ನಮಾಝ್ ಇಲ್ಲ."
عربي ಆಂಗ್ಲ ಉರ್ದು
"ಶುಕ್ರವಾರ ದೊಡ್ಡ ಅಶುದ್ಧಿ (ಜನಾಬತ್) ಗಾಗಿರುವ ಸ್ನಾನವನ್ನು ಮಾಡಿ ನಂತರ (ಮಸೀದಿಗೆ) ಹೊರಡುವವನು, ಒಂಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ.* ಎರಡನೇ ತಾಸಿನಲ್ಲಿ ಹೊರಡುವವನು ಹಸುವನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಮೂರನೇ ತಾಸಿನಲ್ಲಿ ಹೊರಡುವವನು ಕೊಂಬುಗಳಿರುವ ಟಗರನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ನಾಲ್ಕನೇ ತಾಸಿನಲ್ಲಿ ಹೊರಡುವವನು ಕೋಳಿಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಐದನೇ ತಾಸಿನಲ್ಲಿ ಹೊರಡುವವನು ಮೊಟ್ಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ನಂತರ, ಇಮಾಮರು ಹೊರ ಬಂದರೆ ದೇವದೂತರುಗಳು ಪ್ರವಚನವನ್ನು ಕೇಳಲು ಹಾಜರಾಗುತ್ತಾರೆ."
عربي ಆಂಗ್ಲ ಉರ್ದು
"ನಿಮ್ಮಲ್ಲಿ ಯಾರಾದರೂ ಜುಮಾ ನಮಾಝ್‌ಗೆ ಬಂದರೆ ಸ್ನಾನ ಮಾಡಿ ಬರಲಿ."
عربي ಆಂಗ್ಲ ಉರ್ದು
"ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸಿ, ನಂತರ ಜುಮಾ ನಮಾಝಿಗೆ ಬಂದು, (ಪ್ರವಚನವನ್ನು) ಕಿವಿಗೊಟ್ಟು ಕೇಳಿ, ಮೌನವಾಗಿರುತ್ತಾನೋ, ಆ ಜುಮಾ ಮತ್ತು ಮುಂದಿನ ಜುಮಾದ ತನಕವಿರುವ ಮತ್ತು ಮೂರು ದಿನ ಹೆಚ್ಚುವರಿಯಾಗಿ, ಅವನ ಎಲ್ಲಾ ಪಾಪಗಳನ್ನು ಕ್ಷಮಿಸಲಾಗುವುದು.* ಆದರೆ ಯಾರು ಬೆಣಚುಕಲ್ಲುಗಳನ್ನು ಮುಟ್ಟುತ್ತಾನೋ ಅವನು ಅನಗತ್ಯವನ್ನು ಮಾಡಿದನು."
عربي ಆಂಗ್ಲ ಉರ್ದು
"ಯಾರು ಬೆಳಿಗ್ಗೆ ಮತ್ತು ಸಂಜೆ ಮಸೀದಿಗೆ ಹೋಗುತ್ತಾನೋ, ಅವನು ಬೆಳಿಗ್ಗೆ ಮತ್ತು ಸಂಜೆ ಮಸೀದಿಗೆ ಹೋಗುವಾಗಲೆಲ್ಲಾ ಅಲ್ಲಾಹು ಅವನಿಗೆ ಸ್ವರ್ಗದಲ್ಲಿ ಒಂದು ಔತಣವನ್ನು ಸಿದ್ಧಗೊಳಿಸುವನು."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
"ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತಕ್ಕೆ ಮೊದಲು ನಮಾಝ್ ಮಾಡಿದವರು ಎಂದಿಗೂ ನರಕವನ್ನು ಪ್ರವೇಶಿಸುವುದಿಲ್ಲ."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
"ಮುಅಝ್ಝಿನ್ (ಅಝಾನ್ ಕರೆ ನೀಡುವವನು) ಕರೆ ನೀಡುವುದನ್ನು ಕೇಳಿದಾಗ, ಯಾರು "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷ್ಯ ವಹಿಸುತ್ತೇನೆ, ಪರಿಪಾಲಕನಾಗಿ ಅಲ್ಲಾಹನಲ್ಲಿ, ಸಂದೇಶವಾಹಕರಾಗಿ ಮುಹಮ್ಮದ್‌ರಲ್ಲಿ ಮತ್ತು ಧರ್ಮವಾಗಿ ಇಸ್ಲಾಂನಲ್ಲಿ ನನಗೆ ತೃಪ್ತಿಯಿದೆ ಎಂದು ಹೇಳುತ್ತಾನೋ, ಅವನಿಗೆ ಅವನ ಪಾಪಗಳನ್ನು ಕ್ಷಮಿಸಲಾಗುತ್ತದೆ."
عربي ಆಂಗ್ಲ ಉರ್ದು
"ಹರೆಯ ತಲುಪಿದ ಎಲ್ಲರಿಗೂ ಶುಕ್ರವಾರ ಸ್ನಾನ ಮಾಡುವುದು, ಹಲ್ಲು ಸ್ವಚ್ಛ ಮಾಡುವುದು ಮತ್ತು ಲಭ್ಯವಿದ್ದರೆ ಸುಗಂಧ ದ್ರವ್ಯವನ್ನು ಹಚ್ಚುವುದು ಕಡ್ಡಾಯವಾಗಿದೆ."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
"ಯಾರು ಎಲ್ಲಾ ಕಡ್ಡಾಯ ನಮಾಝ್‌ಗಳ ನಂತರ ಆಯತುಲ್-ಕುರ್ಸಿ ಪಠಿಸುತ್ತಾರೋ, ಅವರನ್ನು ಸಾವಿನ ಹೊರತು ಬೇರೇನೂ ಸ್ವರ್ಗ ಪ್ರವೇಶಿಸದಂತೆ ತಡೆಯುವುದಿಲ್ಲ."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
ಒಮ್ಮೆ ನಾವು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿ ಕುಳಿತಿರುವಾಗ, ಒಬ್ಬ ವ್ಯಕ್ತಿ ಒಂಟೆಯಲ್ಲಿ ಸವಾರಿ ಮಾಡುತ್ತಾ ಅಲ್ಲಿಗೆ ಬಂದರು. ಅವರು ಒಂಟೆಯನ್ನು ಮಸೀದಿಯೊಳಗೆ ಮಂಡಿಯೂರಿಸಿ ಕಟ್ಟಿಹಾಕಿದರು. ನಂತರ ನಮ್ಮೊಡನೆ ಕೇಳಿದರು: "ನಿಮ್ಮಲ್ಲಿ ಮುಹಮ್ಮದ್ ಯಾರು?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ನಡುವೆ ಒರಗಿ ಕುಳಿತಿದ್ದರು. ನಾವು ಹೇಳಿದೆವು: "ಒರಗಿ ಕುಳಿತಿರುವ ಈ ಬೆಳ್ಳಗಿನ ವ್ಯಕ್ತಿ." ಆಗ ಆ ವ್ಯಕ್ತಿ, "ಓ ಅಬ್ದುಲ್ ಮುತ್ತಲಿಬರ ಮಗನೇ!" ಎಂದು ಕರೆದರು. ಪ್ರವಾದಿಯವರು, "ನಾನು ನಿನಗೆ ಉತ್ತರ ನೀಡಲು ಇಲ್ಲಿದ್ದೇನೆ" ಎಂದು ಉತ್ತರಿಸಿದರು. ಆಗ ಆ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ತಮ್ಮಲ್ಲಿ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳುತ್ತೇನೆ. ತಾವು ನನ್ನ ಮೇಲೆ ಕೋಪ ಮಾಡಿಕೊಳ್ಳಬಾರದು." ಆಗ ಪ್ರವಾದಿಯವರು ಹೇಳಿದರು: "ನಿಮಗೆ ಕೇಳಲಿರುವುದನ್ನು ಕೇಳಿ." ಆ ವ್ಯಕ್ತಿ ಕೇಳಿದರು: "ತಮ್ಮ ಮತ್ತು ತಮ್ಮ ಪೂರ್ವಜರ ಪರಿಪಾಲಕನನ್ನು (ಅಲ್ಲಾಹನನ್ನು) ಮುಂದಿಟ್ಟು ಕೇಳುತ್ತೇನೆ. ತಮ್ಮನ್ನು ಸಂಪೂರ್ಣ ಮನುಕುಲದ ಕಡೆಗೆ ಕಳುಹಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ದಿನರಾತ್ರಿಯಲ್ಲಿ ನಾವು ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ವರ್ಷದಲ್ಲಿ ಈ ತಿಂಗಳು ನಾವು ಉಪವಾಸ ಆಚರಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ನಮ್ಮಲ್ಲಿನ ಶ್ರೀಮಂತರಿಂದ ಈ ದಾನವನ್ನು ಪಡೆದು ನಮ್ಮಲ್ಲಿರುವ ಬಡವರಿಗೆ ಹಂಚಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?” ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಆಗ ಆ ವ್ಯಕ್ತಿ ಹೇಳಿದರು: "ತಾವು ತಂದ ಸಂದೇಶದಲ್ಲಿ ನಾನು ವಿಶ್ವಾಸವಿಟ್ಟಿದ್ದೇನೆ. ನಾನು ನನ್ನ ಗೋತ್ರದ ದೂತನಾಗಿ ಇಲ್ಲಿಗೆ ಬಂದಿದ್ದೇನೆ. @ನಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
"ಉಸ್ಮಾನ್ ಬಿನ್ ಅಫ್ಫಾನ್ ಮಸೀದಿಯನ್ನು ಪುನರ್ ನಿರ್ಮಿಸಲು ಬಯಸಿದರು. ಆದರೆ ಜನರಿಗೆ ಅದು ಇಷ್ಟವಿರಲಿಲ್ಲ. ಮಸೀದಿ ಹೇಗಿತ್ತೋ ಹಾಗೆಯೇ ಇರುವುದು ಅವರಿಗೆ ಇಷ್ಟವಾಗಿತ್ತು. ಆಗ ಉಸ್ಮಾನ್ ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "@ಯಾರು ಅಲ್ಲಾಹನಿಗೋಸ್ಕರ ಒಂದು ಮಸೀದಿಯನ್ನು ನಿರ್ಮಿಸುತ್ತಾರೋ ಅವರಿಗೆ ಅಲ್ಲಾಹು ಸ್ವರ್ಗದಲ್ಲಿ ಅದಕ್ಕೆ ಸಮಾನವಾದುದನ್ನು ನಿರ್ಮಿಸುತ್ತಾನೆ."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
"ನಿಮ್ಮಲ್ಲೊಬ್ಬರು ಮಸೀದಿಯೊಳಗೆ ಪ್ರವೇಶ ಮಾಡಿದರೆ ಕುಳಿತುಕೊಳ್ಳುವುದಕ್ಕೆ ಮೊದಲು ಎರಡು ರಕಅತ್ ನಮಾಝ್ ನಿರ್ವಹಿಸಲಿ."
عربي ಆಂಗ್ಲ ಉರ್ದು
"ನಿಮ್ಮಲ್ಲೊಬ್ಬರು ಮಸೀದಿಯನ್ನು ಪ್ರವೇಶಿಸುವಾಗ, 'ಅಲ್ಲಾಹುಮ್ಮಫ್ತಹ್ ಲೀ ಅಬ್ವಾಬ ರಹ್ಮತಿಕ್' (ಓ ಅಲ್ಲಾಹ್! ನಿನ್ನ ದಯೆಯ ಬಾಗಿಲುಗಳನ್ನು ನನಗೆ ತೆರೆದುಕೊಡು) ಎಂದು ಹೇಳಬೇಕು ಮತ್ತು ಹೊರಬರುವಾಗ, 'ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಮಿನ್ ಫದ್ಲಿಕ್' (ಓ ಅಲ್ಲಾಹ್! ನಿನ್ನ ಔದಾರ್ಯದಿಂದ ನಾನು ನಿನ್ನಲ್ಲಿ ಬೇಡುತ್ತೇನೆ) ಎಂದು ಹೇಳಬೇಕು."
عربي ಆಂಗ್ಲ ಉರ್ದು
"ಓ ಬಿಲಾಲ್! ನಮಾಝ್‌ಗಾಗಿ ಇಕಾಮತ್ ನೀಡು ಮತ್ತು ಅದರ ಮೂಲಕ ನಮ್ಮನ್ನು ನಿರಾಳಗೊಳಿಸು."
عربي ಆಂಗ್ಲ ಉರ್ದು
ಒಮ್ಮೆ ಕೆಲವು ಜನರು ಸಹಲ್ ಬಿನ್ ಸಅದ್ ಸಾಇದೀಯವರ ಬಳಿಗೆ ಬಂದರು. ಮಿಂಬರ್ (ಪ್ರವಚನ ಪೀಠ) ವನ್ನು ಯಾವುದರಿಂದ ನಿರ್ಮಿಸಲಾಗಿದೆಯೆಂಬ ಬಗ್ಗೆ ಅವರಿಗೆ ತರ್ಕವಿತ್ತು. ಅವರು ಅದರ ಬಗ್ಗೆ ಕೇಳಿದಾಗ, ಸಹಲ್ ಉತ್ತರಿಸಿದರು: "ಅಲ್ಲಾಹನಾಣೆ! ಅದನ್ನು ಯಾವುದರಿಂದ ತಯಾರಿಸಲಾಗಿದೆಯೆಂದು ನನಗೆ ತಿಳಿದಿದೆ. ಅದನ್ನು ಸ್ಥಾಪಿಸಲಾದ ಮೊದಲನೇ ದಿನದಿಂದಲೇ ನಾನು ಅದನ್ನು ನೋಡಿದ್ದೇನೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರಲ್ಲಿ ಕುಳಿತುಕೊಂಡ ಮೊದಲ ದಿನದಿಂದಲೇ ನಾನು ಅದನ್ನು ನೋಡಿದ್ದೇನೆ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನ್ಸಾರ್‌ಗಳಲ್ಲಿ ಸೇರಿದ ಒಬ್ಬ ಮಹಿಳೆಗೆ—ಸಹಲ್ ಆ ಮಹಿಳೆಯ ಹೆಸರನ್ನು ಹೇಳಿದ್ದರು—ಹೇಳಿ ಕಳುಹಿಸಿದರು: "ನನಗೆ ಕೆಲವು ಮೆಟ್ಟಲುಗಳಿರುವ ಪೀಠವನ್ನು ತಯಾರಿಸಿಕೊಡಲು ನಿನ್ನ ಬಡಗಿ ಗುಲಾಮನಿಗೆ ಹೇಳು. ನಾನು ಅದರಲ್ಲಿ ಕುಳಿತು ಜನರೊಂದಿಗೆ ಮಾತನಾಡುವುದಕ್ಕಾಗಿ." ಅವಳು ತನ್ನ ಗುಲಾಮನಿಗೆ ಆದೇಶಿಸಿದಾಗ ಆತ ಅದನ್ನು ಗಾಬದ (ಮದೀನದ ಬಳಿಯ ಒಂದು ಸ್ಥಳ) ಮರದಿಂದ ತಯಾರಿಸಿ ಆಕೆಯ ಕೈಗೆ ನೀಡಿದನು. ಅವಳು ಅದನ್ನು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಳುಹಿಸಿಕೊಟ್ಟಳು. ಅವರು ಅದನ್ನು ಅದರ ಸ್ಥಳದಲ್ಲಿ ಸ್ಥಾಪಿಸುವಂತೆ ಹೇಳಿದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರ ಮೇಲೇರಿ ನಮಾಝ್ ನಿರ್ವಹಿಸುವುದನ್ನು ನಾನು ನೋಡಿದೆ. ಅವರು ಅದರ ಮೇಲಿಂದಲೇ ತಕ್ಬೀರ್ ಹೇಳಿದರು ಮತ್ತು ರುಕೂ ಮಾಡಿದರು. ನಂತರ ಹಿಂಭಾಗಕ್ಕೆ ಚಲಿಸುತ್ತಾ ಕೆಳಗಿಳಿದು ಪೀಠದ ಬುಡದಲ್ಲಿ ಸುಜೂದ್ ಮಾಡಿದರು. ನಂತರ ಪುನಃ ಅದರ ಮೇಲೇರಿದರು. ನಮಾಝ್ ಮುಗಿಸಿದ ನಂತರ ಅವರು ಜನರ ಕಡೆಗೆ ತಿರುಗಿ ಹೇಳಿದರು: "@ಓ ಜನರೇ! ನಾನು ಹೀಗೆ ಮಾಡಿದ್ದು ನೀವು ನನ್ನನ್ನು ಅನುಸರಿಸುವುದಕ್ಕಾಗಿ ಮತ್ತು ನನ್ನ ನಮಾಝನ್ನು ಕಲಿಯುವುದಕ್ಕಾಗಿ."
عربي ಆಂಗ್ಲ ಉರ್ದು
. .
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
. : :
عربي ಆಂಗ್ಲ ಉರ್ದು
:
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಕಡ್ಡಾಯ ನಮಾಝ್‌ಗಳ ನಂತರ ಹೀಗೆ ಹೇಳುತ್ತಿದ್ದರು*: “ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು, ವಹುವ ಅಲಾ ಕುಲ್ಲಿ ಶೈಇನ್ ಕದೀರ್. ಅಲ್ಲಾಹುಮ್ಮ ಲಾ ಮಾನಿಅ ಲಿಮಾ ಅಅ್‌ತಯ್ತ ವಲಾ ಮುಅ್‌ತಿಯ ಲಿಮಾ ಮನಅ್‌ತ, ವಲಾ ಯನ್‌ಫಉ ದಲ್-ಜದ್ದಿ ಮಿನ್ಕಲ್ ಜದ್ದ್."
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ರಬ್ಬಿಗ್ಫಿರ್ ಲೀ, ರಬ್ಬಿಗ್ಫಿರ್ ಲೀ" (ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು, ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು) ಎಂದು ಹೇಳುತ್ತಿದ್ದರು.
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
. : . .
عربي ಆಂಗ್ಲ ಉರ್ದು