+ -

عَنْ أَبِي أُمَامَةَ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«مَنْ قَرَأَ آيَةَ الْكُرْسِيِّ فِي دُبُرِ كُلِّ صَلَاةٍ مَكْتُوبَةٍ لَمْ يَمْنَعْهُ مِنْ دُخُولِ الْجَنَّةِ إِلَّا أَنْ يَمُوتَ».

[صحيح] - [رواه النسائي في الكبرى] - [السنن الكبرى للنسائي: 9848]
المزيــد ...

ಅಬೂ ಉಮಾಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಎಲ್ಲಾ ಕಡ್ಡಾಯ ನಮಾಝ್‌ಗಳ ನಂತರ ಆಯತುಲ್-ಕುರ್ಸಿ ಪಠಿಸುತ್ತಾರೋ, ಅವರನ್ನು ಸಾವಿನ ಹೊರತು ಬೇರೇನೂ ಸ್ವರ್ಗ ಪ್ರವೇಶಿಸದಂತೆ ತಡೆಯುವುದಿಲ್ಲ."

[صحيح] - - [السنن الكبرى للنسائي - 9848]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಎಲ್ಲಾ ಕಡ್ಡಾಯ ನಮಾಝ್‌ಗಳನ್ನು ನಿರ್ವಹಿಸಿದ ಬಳಿಕ ಆಯತುಲ್-ಕುರ್ಸಿ ಪಠಿಸುತ್ತಾರೋ ಅವರನ್ನು ಸಾವಿನ ಹೊರತು ಬೇರೇನೂ ಸ್ವರ್ಗ ಪ್ರವೇಶಿಸದಂತೆ ತಡೆಯುವುದಿಲ್ಲ. ಅದು ಸೂರ ಬಕರದಲ್ಲಿರುವ ಅಲ್ಲಾಹನ ಈ ವಚನ: "ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ನಿರಂತರ ಜೀವಿಸುವವನು ಮತ್ತು ಎಲ್ಲರನ್ನೂ ಸಂರಕ್ಷಿಸಿ ನಿಯಂತ್ರಿಸುವವನಾಗಿದ್ದಾನೆ. ತೂಕಡಿಕೆ ಅಥವಾ ನಿದ್ದೆ ಅವನನ್ನು ವಶಪಡಿಸುವುದಿಲ್ಲ. ಭೂಮ್ಯಾಕಾಶಗಳಲ್ಲಿರುವ ಎಲ್ಲವೂ ಅವನಿಗೆ ಸೇರಿದ್ದು. ಅವನ ಅಪ್ಪಣೆಯಿಲ್ಲದೆ ಅವನ ಬಳಿ ಶಿಫಾರಸು ಮಾಡುವವನು ಯಾರು? ಅವರ ಮುಂದಿರುವುದನ್ನು ಮತ್ತು ಅವರ ಹಿಂದಿರುವುದನ್ನು ಅವನು ತಿಳಿಯುತ್ತಾನೆ. ಅವನ ಜ್ಞಾನದಿಂದ ಅವನು ಇಚ್ಛಿಸುವಷ್ಟನ್ನಲ್ಲದೆ (ಬೇರೇನನ್ನೂ) ತಿಳಿದುಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಅವನ ಕುರ್ಸೀ ಭೂಮ್ಯಾಕಾಶಗಳನ್ನು ವ್ಯಾಪಿಸಿಕೊಂಡಿದೆ. ಅವುಗಳ ಸಂರಕ್ಷಣೆಯು ಅವನನ್ನು ಆಯಾಸಗೊಳಿಸುವುದಿಲ್ಲ. ಅವನು ಅತ್ಯುನ್ನತನು ಮತ್ತು ಮಹಾನನಾಗಿದ್ದಾನೆ." [ಬಕರ: 255].

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية اليوروبا الدرية الصربية الصومالية الكينياروندا الرومانية المالاجاشية الأورومو
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಈ ಮಹಾ ವಚನದ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಏಕೆಂದರೆ ಇದು ಅಲ್ಲಾಹನ ಅತ್ಯುತ್ತಮ ನಾಮಗಳನ್ನು ಮತ್ತು ಅತ್ಯುನ್ನತ ಗುಣಲಕ್ಷಣಗಳನ್ನು ಒಳಗೊಂಡಿದೆ.
  2. ಎಲ್ಲಾ ಕಡ್ಡಾಯ ನಮಾಝ್‌ಗಳ ನಂತರ ಈ ಮಹಾ ವಚನವನ್ನು ಪಠಿಸುವುದು ಅಪೇಕ್ಷಣೀಯವಾಗಿದೆ.
  3. ಸತ್ಕರ್ಮಗಳು ಸ್ವರ್ಗ ಪ್ರವೇಶಕ್ಕೆ ಕಾರಣವಾಗುತ್ತವೆ.
ಇನ್ನಷ್ಟು