عَنْ أَبِي هُرَيْرَةَ رضي الله عنه عَنْ رَسُولِ اللهِ صَلَّى اللهُ عَلَيْهِ وَسَلَّمَ:
«مَنْ سَبَّحَ اللهَ فِي دُبُرِ كُلِّ صَلَاةٍ ثَلَاثًا وَثَلَاثِينَ، وَحَمِدَ اللهَ ثَلَاثًا وَثَلَاثِينَ، وَكَبَّرَ اللهَ ثَلَاثًا وَثَلَاثِينَ، فَتْلِكَ تِسْعَةٌ وَتِسْعُونَ، وَقَالَ: تَمَامَ الْمِائَةِ: لَا إِلَهَ إِلَّا اللهُ وَحْدَهُ لَا شَرِيكَ لَهُ، لَهُ الْمُلْكُ وَلَهُ الْحَمْدُ وَهُوَ عَلَى كُلِّ شَيْءٍ قَدِيرٌ غُفِرَتْ خَطَايَاهُ وَإِنْ كَانَتْ مِثْلَ زَبَدِ الْبَحْرِ».
[صحيح] - [رواه مسلم] - [صحيح مسلم: 597]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಎಲ್ಲಾ ನಮಾಝ್‌ಗಳ ನಂತರ ಮೂವತ್ತಮೂರು ಬಾರಿ ಸುಬ್‌ಹಾನಲ್ಲಾಹ್, ಮೂವತ್ತಮೂರು ಬಾರಿ ಅಲ್-ಹಮ್ದುಲಿಲ್ಲಾಹ್ ಮತ್ತು ಮೂವತ್ತಮೂರು ಬಾರಿ ಅಲ್ಲಾಹು ಅಕ್ಬರ್ ಹೇಳುತ್ತಾರೋ—ಇವು ಒಟ್ಟು ತೊಂಬತ್ತೊಂಬತ್ತು— ಮತ್ತು ನೂರನ್ನು ಪೂರ್ತಿ ಮಾಡಲು, ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು, ವಹುವ ಅಲಾ ಕುಲ್ಲಿ ಶೈಇನ್ ಕದೀರ್ ಎಂದು ಪಠಿಸುತ್ತಾರೋ, ಅವರ ಪಾಪಗಳೆಲ್ಲವನ್ನೂ ಕ್ಷಮಿಸಲಾಗುವುದು. ಅವು ಸಮುದ್ರದ ನೊರೆಗಳಷ್ಟಿದ್ದರೂ ಸಹ."
[صحيح] - [رواه مسلم] - [صحيح مسلم - 597]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾರು ಕಡ್ಡಾಯ ನಮಾಝ್‌ಗಳ ನಂತರ ಹೀಗೆ ಹೇಳುತ್ತಾರೋ:
ಮೂವತ್ತಮೂರು ಬಾರಿ "ಸುಬ್‌ಹಾನಲ್ಲಾಹ್", ಇದು ಅಲ್ಲಾಹನನ್ನು ಎಲ್ಲಾ ನ್ಯೂನತೆಗಳಿಂದ ಪರಿಶುದ್ಧಗೊಳಿಸುವುದಾಗಿದೆ.
ಮೂವತ್ತಮೂರು ಬಾರಿ "ಅಲ್-ಹಮ್ದುಲಿಲ್ಲಾಹ್", ಇದು ಅಲ್ಲಾಹನನ್ನು ಪ್ರೀತಿಸುವುದು ಮತ್ತು ಅತಿಯಾಗಿ ಗೌರವಿಸುವುದರ ಜೊತೆಗೆ ಅವನನ್ನು ಸಂಪೂರ್ಣತೆಯ ಗುಣಗಳಿಂದ ಪ್ರಶಂಸಿಸುವುದಾಗಿದೆ.
ಮೂವತ್ತಮೂರು ಬಾರಿ "ಅಲ್ಲಾಹು ಅಕ್ಬರ್", ಇದು ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ಪರಮೋಚ್ಛನು ಮತ್ತು ಮಹಾಮಹಿಮನು ಎಂದು ಸಾರುವುದಾಗಿದೆ.
ನಂತರ ನೂರನ್ನು ಭರ್ತಿ ಮಾಡಲು, "ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್", ಇದರ ಅರ್ಥ: ಅಲ್ಲಾಹನನ್ನು ಹೊರತು ಆರಾಧನೆಗೆ ಅರ್ಹರಾದ ಬೇರೆ ಸತ್ಯ ದೇವರಿಲ್ಲ, ಅವನು ಏಕೈಕನು ಮತ್ತು ಅವನಿಗೆ ಯಾವುದೇ ಸಹಭಾಗಿಗಳಿಲ್ಲ; ಸಂಪೂರ್ಣ ಸಾರ್ವಭೌಮತ್ವವು ಅವನಿಗೆ ಮಾತ್ರ ಸೀಮಿತವಾಗಿದೆ, ಪ್ರೀತಿ ಮತ್ತು ಮಹಿಮೆಯೊಂದಿಗೆ ಎಲ್ಲಾ ರೀತಿಯ ಪ್ರಶಂಸೆಗಳಿಗೆ ಅವನು ಮಾತ್ರ ಅರ್ಹನಾಗಿದ್ದಾನೆ, ಅವನು ಶಕ್ತಿಶಾಲಿಯಾಗಿದ್ದು ಅವನ ಹಿಡಿತದಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ.
ಯಾರು ಇವುಗಳನ್ನು ಹೇಳುತ್ತಾರೋ, ಅವರ ಪಾಪಗಳನ್ನು ಅಳಿಸಲಾಗುವುದು ಮತ್ತು ಕ್ಷಮಿಸಲಾಗುವುದು. ಅವು ಅಲೆಗಳು ಅಪ್ಪಳಿಸುವಾಗ ಮತ್ತು ಬಿರುಗಾಳಿಗಳು ಬೀಸುವಾಗ ಸಮುದ್ರದ ನೀರಿನ ಮೇಲೆ ಕಾಣಿಸಿಕೊಳ್ಳುವ ಬಿಳಿ ನೊರೆಗಳ ಸಂಖ್ಯೆಯಲ್ಲಿದ್ದರೂ ಸಹ.