عَنِ ابْنِ أَبِي أَوْفَى رضي الله عنه قَالَ:
كَانَ رَسُولُ اللهِ صَلَّى اللهُ عَلَيْهِ وَسَلَّمَ إِذَا رَفَعَ ظَهْرَهُ مِنَ الرُّكُوعِ قَالَ: «سَمِعَ اللهُ لِمَنْ حَمِدَهُ، اللَّهُمَّ رَبَّنَا لَكَ الْحَمْدُ، مِلْءَ السَّمَاوَاتِ وَمِلْءَ الْأَرْضِ وَمِلْءَ مَا شِئْتَ مِنْ شَيْءٍ بَعْدُ».
[صحيح] - [رواه مسلم] - [صحيح مسلم: 476]
المزيــد ...
ಇಬ್ನ್ ಅಬೂ ಔಫಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರುಕೂನಿಂದ ಬೆನ್ನನ್ನು ಎತ್ತುವಾಗ, ಹೀಗೆ ಹೇಳುತ್ತಿದ್ದರು: "ಸಮಿಅಲ್ಲಾಹು ಲಿಮನ್ ಹಮಿದ, ಅಲ್ಲಾಹುಮ್ಮ ರಬ್ಬನಾ ಲಕಲ್ ಹಮ್ದ್, ಮಿಲ್‌ಅ ಸ್ಸಮಾವಾತಿ ವಮಿಲ್‌ಅಲ್ ಅರ್ದಿ, ವಮಿಲ್‌ಅ ಮಾ ಶಿಅ್‌ತ ಮಿನ್ ಶೈಇನ್ ಬಅ್‌ದ್."
[صحيح] - [رواه مسلم] - [صحيح مسلم - 476]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝಿನಲ್ಲಿ ರುಕೂನಿಂದ ಬೆನ್ನನ್ನು ಎತ್ತುವಾಗ ಹೀಗೆ ಹೇಳುತ್ತಿದ್ದರು: "ಸಮಿಅಲ್ಲಾಹು ಲಿಮನ್ ಹಮಿದ", ಅಂದರೆ ಯಾರು ಅಲ್ಲಾಹನನ್ನು ಸ್ತುತಿಸುತ್ತಾರೋ ಅವರಿಗೆ ಅಲ್ಲಾಹು ಉತ್ತರ ನೀಡಲಿ. ಕೆಲವರು ಇದಕ್ಕೆ, ಅಲ್ಲಾಹು ಅವರನ್ನು ಪ್ರಶಂಸಿಸಲಿ ಮತ್ತು ಪ್ರತಿಫಲ ನೀಡಲಿ ಎಂಬ ಅರ್ಥವನ್ನು ಹೇಳಿದ್ದಾರೆ. ನಂತರ ಅವರು ಅಲ್ಲಾಹನನ್ನು ಸ್ತುತಿಸುತ್ತಾ ಹೀಗೆ ಹೇಳುತ್ತಿದ್ದರು: "ಅಲ್ಲಾಹುಮ್ಮ ರಬ್ಬನಾ ಲಕಲ್ ಹಮ್ದ್, ಮಿಲ್‌ಅ ಸ್ಸಮಾವಾತಿ ವಮಿಲ್‌ಅಲ್ ಅರ್ದಿ, ವಮಿಲ್‌ಅ ಮಾ ಶಿಅ್‌ತ ಮಿನ್ ಶೈಇನ್ ಬಅ್‌ದ್." ಇದು ಆಕಾಶಗಳು ಭೂಮಿಗಳು ಮತ್ತು ಅವುಗಳ ನಡುವೆಯಿರುವ, ಹಾಗೂ ಅಲ್ಲಾಹು ಬಯಸುವ ಎಲ್ಲವನ್ನೂ ತುಂಬಿಕೊಳ್ಳುವ ಸ್ತುತಿಯಾಗಿದೆ.