عَنِ الْبَرَاءِ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«إِذَا سَجَدْتَ، فَضَعْ كَفَّيْكَ وَارْفَعْ مِرْفَقَيْكَ».
[صحيح] - [رواه مسلم] - [صحيح مسلم: 494]
المزيــد ...
ಬರಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನೀವು ಸಜ್ದಾ (ಸಾಷ್ಟಾಂಗ) ಮಾಡುವಾಗ, ನಿಮ್ಮ ಅಂಗೈಗಳನ್ನು ನೆಲದ ಮೇಲೆ ಇರಿಸಿ ಮತ್ತು ನಿಮ್ಮ ಮೊಣಕೈಗಳನ್ನು ಎತ್ತಿಕೊಳ್ಳಿ."
[صحيح] - [رواه مسلم] - [صحيح مسلم - 494]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ನಮಾಝ್ ಮಾಡುವಾಗ ಸಜ್ದಾದಲ್ಲಿ ಕೈಗಳು ಹೇಗಿರಬೇಕೆಂದು ವಿವರಿಸುತ್ತಿದ್ದಾರೆ. ಅದು ಹೇಗೆಂದರೆ, ಅಂಗೈಗಳನ್ನು ನೆಲದ ಮೇಲೆ ದೃಢವಾಗಿ ಇಡಬೇಕು ಮತ್ತು ಬೆರಳುಗಳನ್ನು ಮುಚ್ಚಿಕೊಂಡು ಕಿಬ್ಲಾದ ದಿಕ್ಕಿಗೆ ಇಡಬೇಕು. ಮೊಣಕೈಗಳು - ತೋಳು ಮತ್ತು ಮೇಲ್ಬಾಹುವಿನ ಜೋಡಣೆ - ನೆಲವನ್ನು ಮುಟ್ಟದಂತೆ ಎತ್ತಿಕೊಂಡಿರಬೇಕು ಮತ್ತು ಪಕ್ಕೆಲುಬುಗಳಿಂದ ದೂರವಿರಬೇಕು.