عَنْ أَبِي هُرَيْرَةَ رضي الله عنه قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ:
«أَسْوَأُ النَّاسِ سَرَقَةً الَّذِي يَسْرِقُ صَلَاتَهُ» قَالَ: وَكَيْفَ يَسْرِقُ صَلَاتَهُ؟ قال: «لَا يُتِمُّ رُكُوعَهَا، وَلَا سُجُودَهَا».
[صحيح] - [رواه ابن حبان] - [صحيح ابن حبان: 1888]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಕಳ್ಳತನ ಮಾಡುವವರಲ್ಲಿ ಅತಿಕೆಟ್ಟವರು ನಮಾಝ್‌ನಲ್ಲಿ ಕಳ್ಳತನ ಮಾಡುವವರು." ಸಹಾಬಿಗಳು ಕೇಳಿದರು: "ನಮಾಝ್‌ನಲ್ಲಿ ಕಳ್ಳತನ ಮಾಡುವುದು ಹೇಗೆ?" ಅವರು ಉತ್ತರಿಸಿದರು: "ಅದರ ರುಕೂ ಮತ್ತು ಸುಜೂದ್‌ಗಳನ್ನು ಪೂರ್ಣಗೊಳಿಸದಿರುವುದು."
[صحيح] - [رواه ابن حبان] - [صحيح ابن حبان - 1888]
ಕಳ್ಳತನ ಮಾಡುವವರಲ್ಲಿ ಅತಿಕೆಟ್ಟ ವ್ಯಕ್ತಿ ನಮಾಝ್‌ನಲ್ಲಿ ಕಳ್ಳತನ ಮಾಡುವವನೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸಿದ್ದಾರೆ. ಅದೇಕೆಂದರೆ, ಇತರರ ಹಣವನ್ನು ಕದ್ದವನು ಇಹಲೋಕದಲ್ಲಿ ಅದರ ಪ್ರಯೋಜನ ಪಡೆಯುತ್ತಾನೆ. ಆದರೆ ಈ ಕಳ್ಳ ಸ್ವತಃ ತನ್ನದೇ ಪ್ರತಿಫಲವನ್ನು ಕದಿಯುತ್ತಿದ್ದಾನೆ. ಸಹಾಬಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಮಾಝ್‌ನಿಂದ ಕದಿಯುವುದು ಹೇಗೆ?" ಅವರು ಉತ್ತರಿಸಿದರು: "ಅದರ ರುಕೂ ಮತ್ತು ಸುಜೂದ್‌ಗಳನ್ನು ಪೂರ್ಣಗೊಳಿಸದಿರುವುದು." ಅಂದರೆ ರುಕೂ ಮತ್ತು ಸುಜೂದ್‌ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೆ ಆತುರದಿಂದ ನಿರ್ವಹಿಸುವುದು.