عَنْ عُبَادَةَ بْنِ الصَّامِتِ رضي الله عنه أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«لَا صَلَاةَ لِمَنْ لَمْ يَقْرَأْ بِفَاتِحَةِ الكِتَابِ».
[صحيح] - [متفق عليه] - [صحيح البخاري: 756]
المزيــد ...
ಉಬಾದ ಬಿನ್ ಸಾಮಿತ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಗ್ರಂಥದ ಆರಂಭವನ್ನು (ಸೂರ ಫಾತಿಹ) ಪಠಿಸದವನಿಗೆ ನಮಾಝ್ ಇಲ್ಲ."
[صحيح] - [متفق عليه] - [صحيح البخاري - 756]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸೂರ ಫಾತಿಹ ಪಠಿಸದಿದ್ದರೆ ನಮಾಝ್ ಸಿಂಧುವಾಗುವುದಿಲ್ಲ. ಅದು ನಮಾಝ್‌ನ ಪ್ರತಿಯೊಂದು ಘಟಕ (ರಕಅತ್) ಗಳಲ್ಲೂ ನಿರ್ವಹಿಸಬೇಕಾದ ಅದರ ಸ್ತಂಭಗಳಲ್ಲಿ ಒಂದಾಗಿದೆ.