عَنْ عَبْدِ اللَّهِ بنِ مَسْعُودٍ رَضِيَ اللَّهُ عَنْهُ قَالَ: قَالَ النَّبِيُّ صَلَّى اللهُ عَلَيْهِ وَسَلَّمَ:
«لَيْسَ مِنَّا مَنْ لَطَمَ الخُدُودَ، وَشَقَّ الجُيُوبَ، وَدَعَا بِدَعْوَى الجَاهِلِيَّةِ».
[صحيح] - [متفق عليه] - [صحيح البخاري: 1294]
المزيــد ...
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಕೆನ್ನೆಗೆ ಹೊಡೆಯುವವರು, ಅಂಗಿಯನ್ನು ಹರಿಯುವವರು ಮತ್ತು ಅಜ್ಞಾನಕಾಲದ ಪ್ರಾರ್ಥನೆಗಳನ್ನು ಪ್ರಾರ್ಥಿಸುವವರು ನಮ್ಮಲ್ಲಿ ಸೇರಿದವರಲ್ಲ."
[صحيح] - [متفق عليه] - [صحيح البخاري - 1294]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಅಜ್ಞಾನಕಾಲದ ಜನರು ಮಾಡುತ್ತಿದ್ದ ಕೆಲವು ಕೃತ್ಯಗಳನ್ನು ಎಚ್ಚರಿಸುತ್ತಾ ಮತ್ತು ನಿಷೇಧಿಸುತ್ತಾ ಹಾಗೆ ಮಾಡುವವರು ನಮ್ಮವರಲ್ಲ ಎಂದು ಹೇಳಿದ್ದಾರೆ.
ಒಂದು: ಕೆನ್ನೆಗೆ ಹೊಡೆಯುವುದು. ಇಲ್ಲಿ ಕೆನ್ನೆಯನ್ನು ವಿಶೇಷವಾಗಿ ಹೇಳಿದ್ದೇಕೆಂದರೆ, ಹೆಚ್ಚಾಗಿ ಮುಖಕ್ಕೆ ಹೊಡೆಯುವಾಗ ಕೆನ್ನೆಗೇ ಹೊಡೆಯಲಾಗುತ್ತದೆ. ಆದಾಗ್ಯೂ, ಮುಖದ ಇತರ ಭಾಗಗಳಿಗೆ ಹೊಡೆಯುವುದೂ ಇದರಲ್ಲಿ ಒಳಪಡುತ್ತದೆ.
ಎರಡು: ದುಃಖ ತಡೆಯಲಾಗದೆ ಅಂಗಿಯೊಳಗೆ ತಲೆಯನ್ನು ತೂರಿಸುವ ಭಾಗವನ್ನು (ಕಾಲರ್) ಎರಡು ಕೈಗಳಿಂದ ಹಿಡಿದು ಹರಿಯುವುದು.
ಮೂರು: ಅಜ್ಞಾನಕಾಲದ ಪ್ರಾರ್ಥನೆಗಳನ್ನು ಪ್ರಾರ್ಥಿಸುವುದು. ಉದಾಹರಣೆಗೆ, ನಾಶ ಮತ್ತು ವಿನಾಶಕ್ಕಾಗಿ ಪ್ರಾರ್ಥಿಸುವುದು, ಗೋಳಿಡುವುದು, ಶೋಕಗೀತೆ ಹಾಡುವುದು ಇತ್ಯಾದಿ.