ಉಪವರ್ಗಗಳು

ಹದೀಸ್‌ಗಳ ಪಟ್ಟಿ

"ನನಗೆ ಏಳು ಎಲುಬುಗಳ ಮೇಲೆ ಸಾಷ್ಟಾಂಗ ಮಾಡಲು ಆಜ್ಞಾಪಿಸಲಾಗಿದೆ.* ಅವು: ಹಣೆ"—ಇದನ್ನು ಹೇಳುವಾಗ ಅವರು ತಮ್ಮ ಕೈಯಿಂದ ಮೂಗಿನ ಕಡೆಗೆ ತೋರಿಸಿದರು—"ಕೈಗಳು, ಮೊಣಕಾಲುಗಳು ಮತ್ತು ಪಾದಗಳ ತುದಿಗಳು. ಮತ್ತು ಬಟ್ಟೆ ಹಾಗೂ ಕೂದಲನ್ನು ಮಡಚಬಾರದೆಂದು ಕೂಡ ಆಜ್ಞಾಪಿಸಲಾಗಿದೆ."
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ಅಲ್ಲಾಹುಮ್ಮಗ್ಫಿರ್ ಲೀ, ವರ್‌ಹಮ್‌ನೀ, ವಆಫಿನೀ, ವಹ್ದಿನೀ, ವರ್‌ಝುಕ್‌ನೀ" (ಓ ಅಲ್ಲಾಹ್! ನನ್ನನ್ನು ಕ್ಷಮಿಸು, ನನಗೆ ದಯೆತೋರು, ನನಗೆ ಸೌಖ್ಯವನ್ನು ನೀಡು, ನನಗೆ ಸನ್ಮಾರ್ಗವನ್ನು ತೋರಿಸು ಮತ್ತು ನನಗೆ ಜೀವನೋಪಾಯವನ್ನು ದಯಪಾಲಿಸು) ಎಂದು ಹೇಳುತ್ತಿದ್ದರು.
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝನ್ನು ಪ್ರಾರಂಭಿಸುವಾಗ ತಮ್ಮ ಎರಡು ಕೈಗಳನ್ನು ಹೆಗಲಿಗೆ ಸಮಾನಾಂತರವಾಗಿ ಎತ್ತುತ್ತಿದ್ದರು.* ಅದೇ ರೀತಿ, ರುಕೂ ಮಾಡುವಾಗಲೂ, ರುಕೂವಿನಿಂದ ತಲೆ ಎತ್ತುವಾಗಲೂ ಕೈಗಳನ್ನು ಎತ್ತುತ್ತಿದ್ದರು ಮತ್ತು "ಸಮಿಅಲ್ಲಾಹು ಲಿಮನ್ ಹಮಿದ, ರಬ್ಬನಾ ವಲಕಲ್ ಹಮ್ದ್" ಎಂದು ಹೇಳುತ್ತಿದ್ದರು. ಆದರೆ ಸುಜೂದ್‌ನಲ್ಲಿ ಅವರು ಹೀಗೆ ಮಾಡುತ್ತಿರಲಿಲ್ಲ.
عربي ಆಂಗ್ಲ ಉರ್ದು
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಅಂಗೈಯನ್ನು ಅವರ ಎರಡು ಅಂಗೈಗಳ ಮಧ್ಯದಲ್ಲಿಟ್ಟು, ಕುರ್‌ಆನಿನ ಒಂದು ಅಧ್ಯಾಯವನ್ನು ಕಲಿಸಿಕೊಡುವಂತೆ ನನಗೆ ತಶಹ್ಹುದ್ ಕಲಿಸಿಕೊಟ್ಟರು*: ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು, ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್. ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು." (ಅಭಿವಂದನೆಗಳು, ನಮಾಝ್‌ಗಳು ಮತ್ತು ಅತ್ಯುತ್ತಮವಾದುದೆಲ್ಲವೂ ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಸಮೃದ್ಧಿಯಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ನೀತಿವಂತ ದಾಸರೆಲ್ಲರ ಮೇಲೆ ಶಾಂತಿಯಿರಲಿ. ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ದೇವರಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ). ಇನ್ನೊಂದು ವರದಿಯಲ್ಲಿ: "ನಿಶ್ಚಯವಾಗಿಯೂ ಅಲ್ಲಾಹು ಶಾಂತಿಯಾಗಿದ್ದಾನೆ. ಆದ್ದರಿಂದ ನಿಮ್ಮಲ್ಲೊಬ್ಬರು ನಮಾಝಿನಲ್ಲಿ ಕುಳಿತುಕೊಳ್ಳುವಾಗ ಹೀಗೆ ಹೇಳಲಿ: ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು, ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್. (ಅಭಿವಂದನೆಗಳು, ನಮಾಝ್‌ಗಳು ಮತ್ತು ಅತ್ಯುತ್ತಮವಾದುದೆಲ್ಲವೂ ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಸಮೃದ್ಧಿಯಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ನೀತಿವಂತ ದಾಸರೆಲ್ಲರ ಮೇಲೆ ಶಾಂತಿಯಿರಲಿ). ಹೀಗೆ ಹೇಳಿದರೆ ಭೂಮ್ಯಾಕಾಶಗಳಲ್ಲಿರುವ ಅಲ್ಲಾಹನ ಎಲ್ಲಾ ನೀತಿವಂತ ದಾಸರಿಗೂ ಅದು ಅನ್ವಯಿಸುತ್ತದೆ. ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು. (ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ದೇವರಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ). ನಂತರ ಅವರಿಗೆ ಇಷ್ಟವಾದ ಪ್ರಾರ್ಥನೆಯನ್ನು ಪ್ರಾರ್ಥಿಸಬಹುದು."
عربي ಆಂಗ್ಲ ಉರ್ದು
ಒಮ್ಮೆ ಕೆಲವು ಜನರು ಸಹಲ್ ಬಿನ್ ಸಅದ್ ಸಾಇದೀಯವರ ಬಳಿಗೆ ಬಂದರು. ಮಿಂಬರ್ (ಪ್ರವಚನ ಪೀಠ) ವನ್ನು ಯಾವುದರಿಂದ ನಿರ್ಮಿಸಲಾಗಿದೆಯೆಂಬ ಬಗ್ಗೆ ಅವರಿಗೆ ತರ್ಕವಿತ್ತು. ಅವರು ಅದರ ಬಗ್ಗೆ ಕೇಳಿದಾಗ, ಸಹಲ್ ಉತ್ತರಿಸಿದರು: "ಅಲ್ಲಾಹನಾಣೆ! ಅದನ್ನು ಯಾವುದರಿಂದ ತಯಾರಿಸಲಾಗಿದೆಯೆಂದು ನನಗೆ ತಿಳಿದಿದೆ. ಅದನ್ನು ಸ್ಥಾಪಿಸಲಾದ ಮೊದಲನೇ ದಿನದಿಂದಲೇ ನಾನು ಅದನ್ನು ನೋಡಿದ್ದೇನೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರಲ್ಲಿ ಕುಳಿತುಕೊಂಡ ಮೊದಲ ದಿನದಿಂದಲೇ ನಾನು ಅದನ್ನು ನೋಡಿದ್ದೇನೆ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನ್ಸಾರ್‌ಗಳಲ್ಲಿ ಸೇರಿದ ಒಬ್ಬ ಮಹಿಳೆಗೆ—ಸಹಲ್ ಆ ಮಹಿಳೆಯ ಹೆಸರನ್ನು ಹೇಳಿದ್ದರು—ಹೇಳಿ ಕಳುಹಿಸಿದರು: "ನನಗೆ ಕೆಲವು ಮೆಟ್ಟಲುಗಳಿರುವ ಪೀಠವನ್ನು ತಯಾರಿಸಿಕೊಡಲು ನಿನ್ನ ಬಡಗಿ ಗುಲಾಮನಿಗೆ ಹೇಳು. ನಾನು ಅದರಲ್ಲಿ ಕುಳಿತು ಜನರೊಂದಿಗೆ ಮಾತನಾಡುವುದಕ್ಕಾಗಿ." ಅವಳು ತನ್ನ ಗುಲಾಮನಿಗೆ ಆದೇಶಿಸಿದಾಗ ಆತ ಅದನ್ನು ಗಾಬದ (ಮದೀನದ ಬಳಿಯ ಒಂದು ಸ್ಥಳ) ಮರದಿಂದ ತಯಾರಿಸಿ ಆಕೆಯ ಕೈಗೆ ನೀಡಿದನು. ಅವಳು ಅದನ್ನು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಳುಹಿಸಿಕೊಟ್ಟಳು. ಅವರು ಅದನ್ನು ಅದರ ಸ್ಥಳದಲ್ಲಿ ಸ್ಥಾಪಿಸುವಂತೆ ಹೇಳಿದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರ ಮೇಲೇರಿ ನಮಾಝ್ ನಿರ್ವಹಿಸುವುದನ್ನು ನಾನು ನೋಡಿದೆ. ಅವರು ಅದರ ಮೇಲಿಂದಲೇ ತಕ್ಬೀರ್ ಹೇಳಿದರು ಮತ್ತು ರುಕೂ ಮಾಡಿದರು. ನಂತರ ಹಿಂಭಾಗಕ್ಕೆ ಚಲಿಸುತ್ತಾ ಕೆಳಗಿಳಿದು ಪೀಠದ ಬುಡದಲ್ಲಿ ಸುಜೂದ್ ಮಾಡಿದರು. ನಂತರ ಪುನಃ ಅದರ ಮೇಲೇರಿದರು. ನಮಾಝ್ ಮುಗಿಸಿದ ನಂತರ ಅವರು ಜನರ ಕಡೆಗೆ ತಿರುಗಿ ಹೇಳಿದರು: "@ಓ ಜನರೇ! ನಾನು ಹೀಗೆ ಮಾಡಿದ್ದು ನೀವು ನನ್ನನ್ನು ಅನುಸರಿಸುವುದಕ್ಕಾಗಿ ಮತ್ತು ನನ್ನ ನಮಾಝನ್ನು ಕಲಿಯುವುದಕ್ಕಾಗಿ."
عربي ಆಂಗ್ಲ ಉರ್ದು
. .
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
. : :
عربي ಆಂಗ್ಲ ಉರ್ದು
:
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ರಬ್ಬಿಗ್ಫಿರ್ ಲೀ, ರಬ್ಬಿಗ್ಫಿರ್ ಲೀ" (ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು, ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು) ಎಂದು ಹೇಳುತ್ತಿದ್ದರು.
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು