عَنْ أَبِي هُرَيْرَةَ رضي الله عنه:
أَنَّ رَسُولَ اللهِ صَلَّى اللهُ عَلَيْهِ وَسَلَّمَ قَرَأَ فِي رَكْعَتَيِ الْفَجْرِ: {قُلْ يَا أَيُّهَا الْكَافِرُونَ}، وَ{قُلْ هُوَ اللهُ أَحَدٌ}.
[صحيح] - [رواه مسلم] - [صحيح مسلم: 726]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್‌ನ ಎರಡು ರಕ್ಅತ್‌ಗಳಲ್ಲಿ "ಕುಲ್ ಯಾ ಅಯ್ಯುಹಲ್ ಕಾಫಿರೂನ್" ಮತ್ತು "ಕುಲ್ ಹುವಲ್ಲಾಹು ಅಹದ್" ಅನ್ನು ಪಠಿಸಿದರು."
[صحيح] - [رواه مسلم] - [صحيح مسلم - 726]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್‌ನ ಎರಡು ರಕ್ಅತ್ ರವಾತಿಬ್ ನಮಾಝಿನಲ್ಲಿ ಸೂರ ಫಾತಿಹ ಪಠಿಸಿದ ನಂತರ ಮೊದಲ ರಕ್ಅತ್‌ನಲ್ಲಿ "ಕುಲ್ ಯಾ ಅಯ್ಯುಹಲ್ ಕಾಫಿರೂನ್" (ಸೂರ ಕಾಫಿರೂನ್) ಮತ್ತು ಎರಡನೇ ರಕ್ಅತ್‌ನಲ್ಲಿ "ಕುಲ್ ಹುವಲ್ಲಾಹು ಅಹದ್" (ಸೂರ ಇಖ್ಲಾಸ್) ಪಠಿಸಲು ಇಷ್ಟಪಡುತ್ತಿದ್ದರು.