عَنْ سَعْدٍ رَضِيَ اللَّهُ عَنْهُ قَالَ:
كُنْتُ أَرَى رَسُولَ اللهِ صَلَّى اللهُ عَلَيْهِ وَسَلَّمَ يُسَلِّمُ عَنْ يَمِينِهِ، وَعَنْ يَسَارِهِ، حَتَّى أَرَى بَيَاضَ خَدِّهِ.

[صحيح] - [رواه مسلم] - [صحيح مسلم: 582]
المزيــد ...

ಸಅದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಬಲಗಡೆಗೆ ಮತ್ತು ತಮ್ಮ ಎಡಗಡೆಗೆ ಸಲಾಂ ಹೇಳುವುದನ್ನು ನೋಡುತ್ತಿದ್ದೆನು. ಎಷ್ಟರಮಟ್ಟಿಗೆಂದರೆ (ಅವರು ತಿರುಗುವಾಗ) ನಾನು ಅವರ ಕೆನ್ನೆಯ ಬಿಳುಪನ್ನು ಕಾಣುತ್ತಿದ್ದೆನು."

[صحيح] - [رواه مسلم] - [صحيح مسلم - 582]

ವಿವರಣೆ

ಸಅದ್ ಬಿನ್ ಅಬೀ ವಕ್ಕಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸಿರುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ನಮಾಝಿನಿಂದ ಸಲಾಂ ಹೇಳುವಾಗ — ಮೊದಲ ಸಲಾಂಗೆ ತಮ್ಮ ಬಲಗಡೆಗೆ ಮತ್ತು ಎರಡನೇ ಸಲಾಂಗೆ ತಮ್ಮ ಎಡಗಡೆಗೆ — ಎಷ್ಟು (ಪೂರ್ತಿಯಾಗಿ) ತಿರುಗುತ್ತಿದ್ದರೆಂದರೆ, ಇವರು ಪ್ರವಾದಿಯವರ ಕೆನ್ನೆಯ ಬಿಳುಪನ್ನು ನೋಡುತ್ತಿದ್ದರು.

ಹದೀಸಿನ ಪ್ರಯೋಜನಗಳು

  1. ಬಲ ಭಾಗಕ್ಕೆ ಮತ್ತು ಎಡ ಭಾಗಕ್ಕೆ ತಿರುಗುವಾಗ, ಚೆನ್ನಾಗಿ (ಪೂರ್ತಿಯಾಗಿ) ತಿರುಗುವುದು ನಿಯಮಗೊಳಿಸಲಾಗಿದೆ.
  2. ಬಲಕ್ಕೆ ಮತ್ತು ಎಡಕ್ಕೆ ಎರಡು ಸಲಾಂ ಹೇಳುವುದು ನಿಯಮಗೊಳಿಸಲಾಗಿದೆ.
  3. ನವವಿ ಹೇಳುತ್ತಾರೆ: ಒಂದು ವೇಳೆ ಎರಡು ಸಲಾಂಗಳನ್ನು ಕೂಡ ತನ್ನ ಬಲಗಡೆಗೇ ಹೇಳಿದರೆ, ಅಥವಾ ಎಡಗಡೆಗೇ ಹೇಳಿದರೆ, ಅಥವಾ ತನ್ನ ಮುಖದ ನೇರಕ್ಕೆ (ಮುಂದೆ) ಹೇಳಿದರೆ, ಅಥವಾ ಮೊದಲನೆಯದನ್ನು ಎಡಕ್ಕೆ ಮತ್ತು ಎರಡನೆಯದನ್ನು ಬಲಕ್ಕೆ ಹೇಳಿದರೆ, ಅವನ ನಮಾಝ್ ಸಿಂಧುವಾಗುತ್ತದೆ ಮತ್ತು ಎರಡು ಸಲಾಂಗಳು ಪೂರ್ಣಗೊಳ್ಳುತ್ತವೆ. ಆದರೆ ಸಲಾಂ ಹೇಳುವ ವಿಧಾನದ ಶ್ರೇಷ್ಠತೆಯನ್ನು ಅವನು ಕಳೆದುಕೊಳ್ಳುತ್ತಾನೆ.
ಅನುವಾದ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ರಷ್ಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الهولندية الغوجاراتية الدرية المجرية الجورجية المقدونية الخميرية البنجابية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು