عَنْ أَنَسِ بْنِ مَالِكٍ رَضيَ اللهُ عَنْهُ قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«مَنْ صَلَّى صَلاَتَنَا وَاسْتَقْبَلَ قِبْلَتَنَا وَأَكَلَ ذَبِيحَتَنَا فَذَلِكَ المُسْلِمُ الَّذِي لَهُ ذِمَّةُ اللَّهِ وَذِمَّةُ رَسُولِهِ، فَلاَ تُخْفِرُوا اللَّهَ فِي ذِمَّتِهِ».
[صحيح] - [رواه البخاري] - [صحيح البخاري: 391]
المزيــد ...
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ನಮ್ಮ (ರೀತಿಯಲ್ಲಿ) ನಮಾಝನ್ನು ನಿರ್ವಹಿಸುತ್ತಾನೋ, ನಮ್ಮ ಕಿಬ್ಲಾವನ್ನು (ಕಾಬಾವನ್ನು) ಅಭಿಮುಖೀಕರಿಸುತ್ತಾನೋ, ಮತ್ತು ನಾವು ವಧೆ ಮಾಡಿದ ಪ್ರಾಣಿಯನ್ನು ತಿನ್ನುತ್ತಾನೋ, ಅವನು ಮುಸ್ಲಿಮ್. ಅವನಿಗೆ ಅಲ್ಲಾಹನ ರಕ್ಷಣೆ ಮತ್ತು ಅವನ ರಸೂಲರ ರಕ್ಷಣೆ ಇದೆ. ಆದ್ದರಿಂದ ನೀವು ಅಲ್ಲಾಹನ ರಕ್ಷಣೆಯ ವಿಷಯದಲ್ಲಿ ಅವನಿಗೆ ದ್ರೋಹ ಮಾಡಬೇಡಿ."
[صحيح] - [رواه البخاري] - [صحيح البخاري - 391]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿರುವುದೇನೆಂದರೆ, ಯಾರು ಧರ್ಮದ ಬಾಹ್ಯ ಆಚರಣೆಗಳಿಗೆ ಬದ್ಧನಾಗಿರುತ್ತಾನೋ — ಅಂದರೆ ನಮ್ಮ ನಮಾಝಿನಂತೆಯೇ ನಮಾಝ್ ಮಾಡುತ್ತಾನೋ, ನಮ್ಮ ಕಿಬ್ಲಾವಾದ ಕಾಬಾವನ್ನು ಅಭಿಮುಖೀಕರಿಸುತ್ತಾನೋ, ಮತ್ತು ನಾವು ವಧೆ ಮಾಡಿದ ಪ್ರಾಣಿಯನ್ನು (ಅದು ಧರ್ಮಸಮ್ಮತ ಎಂದು ನಂಬಿ) ತಿನ್ನುತ್ತಾನೋ — ಅವನು ಮುಸ್ಲಿಮ್. ಅವನಿಗೆ ಅಲ್ಲಾಹನ ಮತ್ತು ಅವನ ರಸೂಲರ ಅಭಯ ಮತ್ತು ಒಪ್ಪಂದವಿದೆ. ಆದ್ದರಿಂದ ಅವನ ವಿಷಯದಲ್ಲಿ ನೀವು ಅಲ್ಲಾಹನ ಅಭಯ ಮತ್ತು ಒಪ್ಪಂದವನ್ನು ಮುರಿಯಬೇಡಿ.