عَنْ وَائِل بن حُجرٍ رضي الله عنه قَالَ:
صَلَّيْتُ مَعَ النَّبِيِّ صَلَّى اللهُ عَلَيْهِ وَسَلَّمَ، فَكَانَ يُسَلِّمُ عَنْ يَمِينِهِ: «السَّلَامُ عَلَيْكُمْ وَرَحْمَةُ اللَّهِ وَبَرَكَاتُهُ»، وَعَنْ شِمَالِهِ: «السَّلَامُ عَلَيْكُمْ وَرَحْمَةُ اللَّهِ».
[حسن] - [رواه أبو داود] - [سنن أبي داود: 997]
المزيــد ...
ವಾಯಿಲ್ ಬಿನ್ ಹುಜ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆ ನಮಾಝ್ ಮಾಡಿದೆ. ಅವರು ತಮ್ಮ ಬಲಗಡೆಗೆ ತಿರುಗಿ 'ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹಿ ವಬರಕಾತುಹು' ಎಂದು ಸಲಾಂ ಹೇಳುತ್ತಿದ್ದರು, ಮತ್ತು ತಮ್ಮ ಎಡಗಡೆಗೆ ತಿರುಗಿ 'ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹ್' ಎಂದು ಸಲಾಂ ಹೇಳುತ್ತಿದ್ದರು."
[حسن] - [رواه أبو داود] - [سنن أبي داود - 997]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ನಮಾಝಿನಿಂದ ಹೊರಬರಲು ಬಯಸಿದಾಗ, ತಮ್ಮ ಬಲ ಮತ್ತು ಎಡಗಡೆಗೆ ತಿರುಗಿ ಸಲಾಂ ಹೇಳುತ್ತಿದ್ದರು. ಅಂದರೆ, ಅವರು ತಮ್ಮ ಮುಖವನ್ನು ಬಲಗಡೆಗೆ ತಿರುಗಿಸಿ, "ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹಿ ವಬರಕಾತುಹು" ಎಂದು ಹೇಳುತ್ತಿದ್ದರು. ಹಾಗೆಯೇ ಅವರು ತಮ್ಮ ಎಡಗಡೆಗೆ ಸಲಾಂ ಹೇಳುತ್ತಿದ್ದರು. ಅಂದರೆ, ಅವರು ತಮ್ಮ ಮುಖವನ್ನು ಎಡಗಡೆಗೆ ತಿರುಗಿಸಿ, "ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹ್" ಎಂದು ಹೇಳುತ್ತಿದ್ದರು.