عن ثَوْبَانَ رضي الله عنه قال:
كَانَ رَسُولُ اللهِ صَلَّى اللهُ عَلَيْهِ وَسَلَّمَ إِذَا انْصَرَفَ مِنْ صَلَاتِهِ اسْتَغْفَرَ ثَلَاثًا، وَقَالَ: «اللَّهُمَّ أَنْتَ السَّلَامُ، وَمِنْكَ السَّلَامُ، تَبَارَكْتَ ذَا الْجَلَالِ وَالْإِكْرَامِ»، قَالَ الْوَلِيدُ: فَقُلْتُ لِلْأَوْزَاعِيِّ: كَيْفَ الْاسْتِغْفَارُ؟ قَالَ: تَقُولُ: أَسْتَغْفِرُ اللهَ، أَسْتَغْفِرُ اللهَ.
[صحيح] - [رواه مسلم] - [صحيح مسلم: 591]
المزيــد ...
ಸೌಬಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮುಗಿಸಿದರೆ ಮೂರು ಬಾರಿ ಇಸ್ತಿಗ್ಫಾರ್ (ಕ್ಷಮೆಯಾಚನೆ) ಮಾಡುತ್ತಿದ್ದರು. ನಂತರ ಹೀಗೆ ಹೇಳುತ್ತಿದ್ದರು: "ಅಲ್ಲಾಹುಮ್ಮ ಅನ್ತ ಸ್ಸಲಾಂ, ವಮಿನ್ಕ ಸ್ಸಲಾಂ, ತಬಾರಕ್ತ ದಲ್ ಜಲಾಲಿ ವಲ್ ಇಕ್ರಾಮ್" (ಓ ಅಲ್ಲಾಹ್! ನೀನು ಅಸ್ಸಲಾಂ (ಶಾಂತಿ) ಮತ್ತು ನಿನ್ನಿಂದಲೇ ಶಾಂತಿ. ಓ ಮಹಿಮೆ ಪ್ರತಿಷ್ಠೆಗಳನ್ನು ಹೊಂದಿರುವವನೇ! ನೀನು ಅನುಗ್ರಹಪೂರ್ಣನಾಗಿರುವೆ.” (ವರದಿಗಾರರಲ್ಲಿ ಒಬ್ಬರಾದ) ವಲೀದ್ ಹೇಳುತ್ತಾರೆ: ನಾನು ಔಝಾಈರೊಡನೆ ಕೇಳಿದೆ: "ನಾನು ಕ್ಷಮೆಯಾಚನೆ ಮಾಡುವುದು ಹೇಗೆ?" ಅವರು ಉತ್ತರಿಸಿದರು: "ಅಸ್ತಗ್ಫಿರುಲ್ಲಾಹ್, ಅಸ್ತಗ್ಫಿರುಲ್ಲಾಹ್ ಎಂದು ಹೇಳುವುದು."
[صحيح] - [رواه مسلم] - [صحيح مسلم - 591]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮುಗಿಸಿದರೆ ಮೂರು ಬಾರಿ ಅಸ್ತಗ್ಫಿರುಲ್ಲಾಹ್ (ನಾನು ಅಲ್ಲಾಹನಲ್ಲಿ ಕ್ಷಮೆಯಾಚಿಸುತ್ತೇನೆ) ಎಂದು ಹೇಳುತ್ತಿದ್ದರು.
ನಂತರ ತನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಮಹಿಮೆಪಡಿಸುತ್ತಾ ಹೀಗೆ ಹೇಳುತ್ತಿದ್ದರು: "ಅಲ್ಲಾಹುಮ್ಮ ಅನ್ತ ಸ್ಸಲಾಂ, ವಮಿನ್ಕ ಸ್ಸಲಾಂ, ತಬಾರಕ್ತ ದಲ್ ಜಲಾಲಿ ವಲ್ ಇಕ್ರಾಮ್" (ಓ ಅಲ್ಲಾಹ್! ನೀನು ಅಸ್ಸಲಾಂ (ಶಾಂತಿ) ಮತ್ತು ನಿನ್ನಿಂದಲೇ ಶಾಂತಿ. ಓ ಮಹಿಮೆ ಪ್ರತಿಷ್ಠೆಗಳನ್ನು ಹೊಂದಿರುವವನೇ! ನೀನು ಅನುಗ್ರಹಪೂರ್ಣನಾಗಿರುವೆ.” ಅಲ್ಲಾಹು ಅವನ ಗುಣಲಕ್ಷಣಗಳ ವಿಷಯದಲ್ಲಿ ಸುರಕ್ಷಿತನು ಮತ್ತು ಪರಿಪೂರ್ಣನು. ಅವನಿಗೆ ಯಾವುದೇ ಕುಂದು-ಕೊರತೆಗಳು ಅಥವಾ ಅಪೂರ್ಣತೆಗಳಿಲ್ಲ. ಅದೇ ರೀತಿ, ಈ ಪ್ರಾರ್ಥನೆಯಲ್ಲಿ ಇಹಲೋಕದ ಮತ್ತು ಪರಲೋಕದ ಎಲ್ಲಾ ಕೆಡುಕುಗಳಿಂದ ಅಲ್ಲಾಹನಲ್ಲಿ ಮಾತ್ರ ಪ್ರಾರ್ಥಿಸಲಾಗುತ್ತದೆ. ಪರಮ ಪರಿಶುದ್ಧನಾದ ಅವನ ಒಳಿತುಗಳು ಇಹಲೋಕದಲ್ಲೂ ಪರಲೋಕದಲ್ಲೂ ಅತ್ಯಧಿಕವಾಗಿವೆ. ಅವನು ಮಹಿಮೆ ಮತ್ತು ಒಳಿತುಗಳ ಒಡೆಯನಾಗಿದ್ದಾನೆ.