عَنْ كَعْبِ بْنِ عُجْرَةَ رضي الله عنه عَنْ رَسُولِ اللهِ صَلَّى اللهُ عَلَيْهِ وَسَلَّمَ قَالَ:
«مُعَقِّبَاتٌ لَا يَخِيبُ قَائِلُهُنَّ -أَوْ فَاعِلُهُنَّ- دُبُرَ كُلِّ صَلَاةٍ مَكْتُوبَةٍ، ثَلَاثٌ وَثَلَاثُونَ تَسْبِيحَةً، وَثَلَاثٌ وَثَلَاثُونَ تَحْمِيدَةً، وَأَرْبَعٌ وَثَلَاثُونَ تَكْبِيرَةً».
[صحيح] - [رواه مسلم] - [صحيح مسلم: 596]
المزيــد ...
ಕಅಬ್ ಬಿನ್ ಉಜ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಕಡ್ಡಾಯ ನಮಾಝ್‌ಗಳ ನಂತರ ಕೆಲವು ಸ್ಮರಣೆಗಳಿದ್ದು, ಅವುಗಳನ್ನು ಪಠಿಸುವವನು—ಅಥವಾ ಕಾರ್ಯಗತಗೊಳಿಸುವವನು—ಎಂದಿಗೂ ನಿರಾಶನಾಗುವುದಿಲ್ಲ. ಮೂವತ್ತಮೂರು ತಸ್ಬೀಹ್‌ಗಳು, ಮೂವತ್ತಮೂರು ತಹ್ಮೀದ್‌ಗಳು ಮತ್ತು ಮೂವತ್ತನಾಲ್ಕು ತಕ್ಬೀರ್‌ಗಳು."
[صحيح] - [رواه مسلم] - [صحيح مسلم - 596]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಸ್ಮರಣೆಗಳ ಬಗ್ಗೆ ತಿಳಿಸಿದ್ದಾರೆ. ಅವುಗಳನ್ನು ಪಠಿಸುವವನಿಗೆ ನಷ್ಟವಾಗುವುದೂ ಇಲ್ಲ ಮತ್ತು ಅವನು ನಿರಾಶನಾಗುವುದೂ ಇಲ್ಲ. ಬದಲಿಗೆ, ಅವನಿಗೆ ಈ ಪದಗಳನ್ನು ಪಠಿಸಿದ್ದಕ್ಕೆ ಪ್ರತಿಫಲವಿದೆ. ಅವುಗಳಲ್ಲಿ ಒಂದನ್ನು ಇನ್ನೊಂದರ ನಂತರ ಹೇಳಬೇಕಾಗಿದೆ. ಅವುಗಳನ್ನು ಕಡ್ಡಾಯ ನಮಾಝ್‌ಗಳ ನಂತರ ಹೇಳಬೇಕಾಗಿದೆ. ಅವು:
"ಸುಬ್‌ಹಾನಲ್ಲಾಹ್" (ಮೂವತ್ತ ಮೂರು ಬಾರಿ) ಇದು ಅಲ್ಲಾಹನನ್ನು ಎಲ್ಲಾ ರೀತಿಯ ನ್ಯೂನತೆಗಳಿಂದ ಪರಿಶುದ್ಧಗೊಳಿಸುವುದಾಗಿದೆ.
"ಅಲ್-ಹಮ್ದುಲಿಲ್ಲಾಹ್" (ಮೂವತ್ತ ಮೂರು ಬಾರಿ) ಇದು ಅಲ್ಲಾಹನನ್ನು ಪ್ರೀತಿಸುವುದು ಮತ್ತು ಮಹಿಮೆಪಡಿಸುವುದರ ಜೊತೆಗೆ ಅವನನ್ನು ಸರ್ವಸಂಪೂರ್ಣನೆಂದು ಬಣ್ಣಿಸುವುದಾಗಿದೆ.
"ಅಲ್ಲಾಹು ಅಕ್ಬರ್" (ಮೂವತ್ತ ನಾಲ್ಕು ಬಾರಿ) ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ದೊಡ್ಡವನು ಮತ್ತು ಮಹಾಮಹಿಮನು ಎಂದು ಘೋಷಿಸುವುದಾಗಿದೆ.