ಉಪವರ್ಗಗಳು

ಹದೀಸ್‌ಗಳ ಪಟ್ಟಿ

“ಶುದ್ಧೀಕರಣವು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ‘ಅಲ್-ಹಮ್ದುಲಿಲ್ಲಾಹ್’ ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ. ‘ಸುಬ್‌ಹಾನಲ್ಲಾಹ್ ವಲ್-ಹಮ್ದುಲಿಲ್ಲಾಹ್’ ಎಂಬ ವಚನಗಳು ತಕ್ಕಡಿಯನ್ನು ತುಂಬುತ್ತವೆ, ಅಥವಾ ಭೂಮ್ಯಾಕಾಶಗಳ ನಡುವಿನ ಭಾಗವನ್ನು ತುಂಬುತ್ತವೆ
عربي ಆಂಗ್ಲ ಉರ್ದು
ಒಬ್ಬ ವ್ಯಕ್ತಿ ಮನೆಯನ್ನು ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸಿದರೆ, ಶೈತಾನನು ಹೇಳುತ್ತಾನೆ: ನಿಮಗೆ ಇಲ್ಲಿ ರಾತ್ರಿವಾಸವಿಲ್ಲ ಮತ್ತು ರಾತ್ರಿಭೋಜನವಿಲ್ಲ
عربي ಆಂಗ್ಲ ಉರ್ದು
ನಿಮ್ಮಲ್ಲೊಬ್ಬನು ಮಲಗಿರುವಾಗ ಶೈತಾನನು ಅವನ ಕತ್ತಿನ ಹಿಂಭಾಗದಲ್ಲಿ ಮೂರು ಗಂಟುಗಳನ್ನು ಹಾಕಿ, ಅವುಗಳಲ್ಲಿ ಪ್ರತಿಯೊಂದು ಗಂಟಿಗೂ ಗುದ್ದುತ್ತಾ, "ರಾತ್ರಿ ಇನ್ನೂ ದೀರ್ಘವಾಗಿದೆ; ಮಲಗು" ಎನ್ನುತ್ತಿರುವನು
عربي ಆಂಗ್ಲ ಉರ್ದು
ಕಡ್ಡಾಯ ನಮಾಝ್‌ಗಳ ನಂತರ ಕೆಲವು ಸ್ಮರಣೆಗಳಿದ್ದು, ಅವುಗಳನ್ನು ಪಠಿಸುವವನು—ಅಥವಾ ಕಾರ್ಯಗತಗೊಳಿಸುವವನು—ಎಂದಿಗೂ ನಿರಾಶನಾಗುವುದಿಲ್ಲ. ಮೂವತ್ತಮೂರು ತಸ್ಬೀಹ್‌ಗಳು, ಮೂವತ್ತಮೂರು ತಹ್ಮೀದ್‌ಗಳು ಮತ್ತು ಮೂವತ್ತನಾಲ್ಕು ತಕ್ಬೀರ್‌ಗಳು
عربي ಆಂಗ್ಲ ಉರ್ದು
ಶೈತಾನನು ನಿಮ್ಮಲ್ಲೊಬ್ಬನ ಬಳಿಗೆ ಬಂದು ಕೇಳುತ್ತಾನೆ: "ಇದನ್ನು ಸೃಷ್ಟಿಸಿದ್ದು ಯಾರು? ಇದನ್ನು ಸೃಷ್ಟಿಸಿದ್ದು ಯಾರು?" ಹೀಗೆ ಅವನು "ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಸೃಷ್ಟಿಸಿದ್ದು ಯಾರು?" ಎಂದು ಕೇಳುವ ತನಕ ಮುಂದುವರಿಯುತ್ತಾನೆ. ಯಾರಿಗಾದರೂ ಇಂತಹ ಅನುಭವವಾದರೆ ಅವನು ಅಲ್ಲಾಹನಲ್ಲಿ ಅಭಯ ಯಾಚಿಸಿ ಅಲ್ಲಿಯೇ ನಿಂತುಬಿಡಲಿ
عربي ಆಂಗ್ಲ ಉರ್ದು