عَنْ أَبِي هُرَيْرَةَ رَضِيَ اللَّهُ عَنْهُ أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«يَعْقِدُ الشَّيْطَانُ عَلَى قَافِيَةِ رَأْسِ أَحَدِكُمْ إِذَا هُوَ نَامَ ثَلاَثَ عُقَدٍ يَضْرِبُ كُلَّ عُقْدَةٍ عَلَيْكَ لَيْلٌ طَوِيلٌ، فَارْقُدْ، فَإِنِ اسْتَيْقَظَ فَذَكَرَ اللَّهَ، انْحَلَّتْ عُقْدَةٌ، فَإِنْ تَوَضَّأَ انْحَلَّتْ عُقْدَةٌ، فَإِنْ صَلَّى انْحَلَّتْ عُقْدَةٌ، فَأَصْبَحَ نَشِيطًا طَيِّبَ النَّفْسِ، وَإِلَّا أَصْبَحَ خَبِيثَ النَّفْسِ كَسْلاَنَ».
[صحيح] - [متفق عليه] - [صحيح البخاري: 1142]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮಲ್ಲೊಬ್ಬನು ಮಲಗಿರುವಾಗ ಶೈತಾನನು ಅವನ ಕತ್ತಿನ ಹಿಂಭಾಗದಲ್ಲಿ ಮೂರು ಗಂಟುಗಳನ್ನು ಹಾಕಿ, ಅವುಗಳಲ್ಲಿ ಪ್ರತಿಯೊಂದು ಗಂಟಿಗೂ ಗುದ್ದುತ್ತಾ, "ರಾತ್ರಿ ಇನ್ನೂ ದೀರ್ಘವಾಗಿದೆ; ಮಲಗು" ಎನ್ನುತ್ತಿರುವನು. ಅವನೇನಾದರೂ ಎದ್ದು ಅಲ್ಲಾಹನನ್ನು ಸ್ಮರಿಸಿದರೆ, ಒಂದು ಗಂಟು ಬಿಚ್ಚಿಹೋಗುತ್ತದೆ. ಅವನು ವುದೂ ನಿರ್ವಹಿಸಿದರೆ ಇನ್ನೊಂದು ಗಂಟು ಬಿಚ್ಚಿಹೋಗುತ್ತದೆ. ಅವನು ನಮಾಝ್ ಮಾಡಿದರೆ ಮೂರನೆಯ ಗಂಟು ಬಿಚ್ಚಿಹೋಗುತ್ತದೆ. ಆಗ ಅವನು ಉಲ್ಲಾಸದಿಂದ ಶುದ್ಧ ಮನಸ್ಸಿನೊಂದಿಗೆ ಬೆಳಗನ್ನು ಪ್ರವೇಶಿಸುತ್ತಾನೆ. ಇಲ್ಲದಿದ್ದರೆ ಅವನು ಕೆಟ್ಟ ಮನಸ್ಸಿನೊಂದಿಗೆ ಆಲಸ್ಯದಿಂದ ಬೆಳಗನ್ನು ಪ್ರವೇಶಿಸುತ್ತಾನೆ."
[صحيح] - [متفق عليه] - [صحيح البخاري - 1142]
ರಾತ್ರಿ ನಮಾಝ್ ಅಥವಾ ಫಜ್ರ್ ನಮಾಝ್ ನಿರ್ವಹಿಸಲು ಬಯಸುವ ವ್ಯಕ್ತಿಯೊಂದಿಗೆ ಶೈತಾನನು ನಡೆಸುವ ಗುದ್ದಾಟವನ್ನು ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ್ದಾರೆ.
ಸತ್ಯವಿಶ್ವಾಸಿಯು ಮಲಗಲು ಹೋಗುವಾಗ ಶೈತಾನನು ಅವನ ಕತ್ತಿನ ಹಿಂಭಾಗದಲ್ಲಿ ಮೂರು ಗಂಟುಗಳನ್ನು ಹಾಕುತ್ತಾನೆ.
ಸತ್ಯವಿಶ್ವಾಸಿಯು ಎದ್ದು ಅಲ್ಲಾಹನನ್ನು ಸ್ಮರಿಸಿದರೆ ಮತ್ತು ಶೈತಾನನ ಗೊಣಗಾಟಕ್ಕೆ ಕಿವಿಗೊಡದಿದ್ದರೆ, ಅವನ ಒಂದು ಗಂಟು ಬಿಚ್ಚಿಹೋಗುತ್ತದೆ.
ಅವನು ವುದೂ ನಿರ್ವಹಿಸಿದರೆ ಇನ್ನೊಂದು ಗಂಟು ಬಿಚ್ಚಿಹೋಗುತ್ತದೆ. .
ಅವನು ಎದ್ದು ನಮಾಝ್ ನಿರ್ವಹಿಸಿದರೆ ಮೂರನೆಯ ಗಂಟು ಬಿಚ್ಚಿಹೋಗುತ್ತದೆ. ಆಗ ಅವನು, ಅಲ್ಲಾಹು ಅವನಿಗೆ ಸತ್ಕರ್ಮವನ್ನು ನಿರ್ವಹಿಸುವ ಭಾಗ್ಯ ನೀಡಿದ್ದಕ್ಕಾಗಿ ಸಂತೋಷಪಡುತ್ತಾ, ಅದಕ್ಕಾಗಿ ಅಲ್ಲಾಹು ವಾಗ್ದಾನ ಮಾಡಿದ ಪ್ರತಿಫಲವನ್ನು ನೆನೆಸಿ, ಮತ್ತು ಅದರೊಂದಿಗೆ ಶೈತಾನನ ಗಂಟುಗಳು ಮತ್ತು ಗೊಣಗಾಟಗಳು ನಿವಾರಣೆಯಾದುದಕ್ಕಾಗಿ ಆಹ್ಲಾದಿಸುತ್ತಾ, ಶುದ್ಧ ಮನಸ್ಸಿನೊಂದಿಗೆ ಬೆಳಗನ್ನು ಪ್ರವೇಶಿಸುತ್ತಾನೆ.ಇಲ್ಲದಿದ್ದರೆ ಅವನು ಕೆಟ್ಟ ಮನಸ್ಸಿನೊಂದಿಗೆ, ಒಳಿತು ಮತ್ತು ಸತ್ಕರ್ಮಗಳನ್ನು ಮಾಡಲು ಆಲಸ್ಯಪಡುತ್ತಾ ಬೆಳಗನ್ನು ಪ್ರವೇಶಿಸುತ್ತಾನೆ. ಏಕೆಂದರೆ, ಅವನು ಶೈತಾನನ ಬಂಧನದಲ್ಲಿ ಬಂಧಿತನಾಗಿದ್ದಾನೆ ಮತ್ತು ಅಲ್ಲಾಹನಿಂದ ದೂರವಾಗಿದ್ದಾನೆ.