ಹದೀಸ್‌ಗಳ ಪಟ್ಟಿ

ಐದು ಕಾರ್ಯಗಳು ಫಿತ್ರ (ಸಹಜ ಮನೋಧರ್ಮ) ದ ಭಾಗವಾಗಿವೆ: ಸುನ್ನತಿ ಮಾಡುವುದು, ಗುಹ್ಯಭಾಗದ ರೋಮವನ್ನು ಬೋಳಿಸುವುದು, ಮೀಸೆ ಕಿರಿದಾಗಿಸುವುದು, ಉಗುರುಗಳನ್ನು ಕತ್ತರಿಸುವುದು ಮತ್ತು ಕಂಕುಳದ ರೋಮವನ್ನು ಕೀಳುವುದು
عربي ಆಂಗ್ಲ ಉರ್ದು
ಮೀಸೆಗಳನ್ನು ಕಿರಿದುಗೊಳಿಸಿರಿ ಮತ್ತು ದಾಡಿಯನ್ನು ಬೆಳೆಸಿರಿ
عربي ಆಂಗ್ಲ ಉರ್ದು
ಯಾರು ನಾನಿಲ್ಲಿ ವುದೂ ನಿರ್ವಹಿಸಿದಂತೆ ವುದೂ ನಿರ್ವಹಿಸಿ, ಇಹಲೋಕದ ಯಾವುದೇ ವಿಷಯದ ಬಗ್ಗೆ ಏನೂ ಯೋಚಿಸದೆ ಎರಡು ರಕಅತ್ ನಮಾಝ್ ನಿರ್ವಹಿಸುತ್ತಾರೋ ಅವರ ಗತ ಪಾಪಗಳನ್ನು ಅಲ್ಲಾಹು ಕ್ಷಮಿಸುತ್ತಾನೆ
عربي ಆಂಗ್ಲ ಉರ್ದು
ನಿಮ್ಮಲ್ಲೊಬ್ಬರಿಗೆ ಅಶುದ್ಧಿಯುಂಟಾದರೆ ಅವರು ವುದೂ ನಿರ್ವಹಿಸುವ ತನಕ ಅಲ್ಲಾಹು ಅವರ ನಮಾಝನ್ನು ಸ್ವೀಕರಿಸುವುದಿಲ್ಲ
عربي ಆಂಗ್ಲ ಉರ್ದು
“ಸಿವಾಕ್ (ಹಲ್ಲುಜ್ಜುವುದು) ಬಾಯಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅಲ್ಲಾಹನನ್ನು ಸಂಪ್ರೀತಗೊಳಿಸುತ್ತದೆ.”
عربي ಆಂಗ್ಲ ಉರ್ದು
ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸುತ್ತಾರೋ ಅವರ ಪಾಪಗಳು ಅವರ ದೇಹದಿಂದ ಹೊರಟುಹೋಗುತ್ತವೆ; ಎಲ್ಲಿಯವರೆಗೆಂದರೆ, ಅವರ ಉಗುರುಗಳ ಅಡಿಭಾಗದಿಂದಲೂ ಸಹ
عربي ಆಂಗ್ಲ ಉರ್ದು
“ಶುದ್ಧೀಕರಣವು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ‘ಅಲ್-ಹಮ್ದುಲಿಲ್ಲಾಹ್’ ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ. ‘ಸುಬ್‌ಹಾನಲ್ಲಾಹ್ ವಲ್-ಹಮ್ದುಲಿಲ್ಲಾಹ್’ ಎಂಬ ವಚನಗಳು ತಕ್ಕಡಿಯನ್ನು ತುಂಬುತ್ತವೆ, ಅಥವಾ ಭೂಮ್ಯಾಕಾಶಗಳ ನಡುವಿನ ಭಾಗವನ್ನು ತುಂಬುತ್ತವೆ
عربي ಆಂಗ್ಲ ಉರ್ದು
ಹಿಮ್ಮಡಿಗಳಿಗೆ ನರಕಾಗ್ನಿಯಿಂದ ವಿನಾಶವಿದೆ. ಪೂರ್ಣವಾಗಿ ವುದೂ ನಿರ್ವಹಿಸಿರಿ
عربي ಆಂಗ್ಲ ಉರ್ದು
ಅವುಗಳನ್ನು ಬಿಟ್ಟುಬಿಡಿ. ನಾವು ಅವುಗಳನ್ನು ಶುದ್ಧಿಯಲ್ಲಿದ್ದ ಸ್ಥಿತಿಯಲ್ಲಿ ಧರಿಸಿದ್ದೆ
عربي ಆಂಗ್ಲ ಉರ್ದು
ಅದು ರಕ್ತನಾಳವಾಗಿದೆ. ಆದರೆ ಸಾಮಾನ್ಯವಾಗಿ ನಿಮಗೆ ಮುಟ್ಟಾಗುವ ಅವಧಿಯಲ್ಲಿ ನಮಾಝ್ ತೊರೆಯಿರಿ, ನಂತರ ಗುಸ್ಲ್ (ಕಡ್ಡಾಯ ಸ್ನಾನ) ನಿರ್ವಹಿಸಿ ನಮಾಝ್ ಮುಂದುವರಿಸಿ
عربي ಆಂಗ್ಲ ಉರ್ದು
ನಿಮ್ಮಲ್ಲೊಬ್ಬರು ವುದೂ (ಅಂಗಸ್ನಾನ) ಮಾಡುವಾಗ, ಮೂಗಿಗೆ ನೀರನ್ನು ಎಳೆದು ಹೊರಬಿಡಲಿ. ನಿಮ್ಮಲ್ಲೊಬ್ಬನು ಇಸ್ತಿಜ್ಮಾರ್ (ಕಲ್ಲು ಮುಂತಾದ ವಸ್ತುಗಳಿಂದ ಶುಚಿ) ಮಾಡುವಾಗ ಬೆಸ ಸಂಖ್ಯೆಯಲ್ಲಿ ಮಾಡಲಿ
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ನಿದ್ರೆಯಿಂದ ಎದ್ದರೆ, ಹಲ್ಲುಜ್ಜುವ ಕಡ್ಡಿಯಿಂದ ತಮ್ಮ ಬಾಯಿಯನ್ನು ಸ್ವಚ್ಛಗೊಳಿಸುತ್ತಿದ್ದರು
عربي ಆಂಗ್ಲ ಉರ್ದು
ನೀವು ಮಲ ವಿಸರ್ಜನೆ ಮಾಡುವ ಸ್ಥಳಕ್ಕೆ ಹೋದರೆ ಕಿಬ್ಲದ ದಿಕ್ಕಿಗೆ ಮುಖ ಮಾಡಬೇಡಿ ಮತ್ತು ಅದರ ಕಡೆಗೆ ಬೆನ್ನು ಹಾಕಬೇಡಿ. ಬದಲಿಗೆ, ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಮುಖ ಮಾಡಿರಿ
عربي ಆಂಗ್ಲ ಉರ್ದು
ನಿಮ್ಮಲ್ಲೊಬ್ಬರು ಮೂತ್ರ ವಿಸರ್ಜನೆ ಮಾಡುವಾಗ ತನ್ನ ಜನನಾಂಗವನ್ನು ಬಲಗೈಯಲ್ಲಿ ಹಿಡಿಯಬಾರದು, ಬಲಗೈಯಿಂದ ಶೌಚವನ್ನು ಒರೆಸಬಾರದು, ಮತ್ತು ಪಾತ್ರೆಯೊಳಗೆ ಶ್ವಾಸ ಬಿಡಬಾರದು
عربي ಆಂಗ್ಲ ಉರ್ದು
ನಾಯಿ ನಿಮ್ಮಲ್ಲೊಬ್ಬರ ಪಾತ್ರೆಯಲ್ಲಿ ಕುಡಿದರೆ, ಅವನು ಅದನ್ನು ಏಳು ಬಾರಿ ತೊಳೆಯಬೇಕಾಗಿದೆ
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌಚಾಲಯವನ್ನು ಪ್ರವೇಶಿಸುವಾಗ,ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಖುಬುಸಿ ವಲ್ ಖಬಾಇಸ್ (ಓ ಅಲ್ಲಾಹ್, ಗಂಡು ಶೈತಾನರಿಂದ ಮತ್ತು ಹೆಣ್ಣು ಶೈತಾನರಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ) ಎಂದು ಹೇಳುತ್ತಿದ್ದರು
عربي ಆಂಗ್ಲ ಉರ್ದು
ದೊಡ್ಡ ಅಶುದ್ಧಿಯಿಂದ (ಜನಾಬತ್) ಸ್ನಾನ ಮಾಡುವ ರೂಪ
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೊಡ್ಡ ಅಶುದ್ಧಿಯಿಂದಾಗಿ (ಜನಾಬತ್) ಸ್ನಾನ ಮಾಡುವಾಗ, ಮೊದಲು ಕೈಗಳನ್ನು ತೊಳೆದು, ನಂತರ ನಮಾಝ್‌ಗಾಗಿ ವುದೂ (ಅಂಗಸ್ನಾನ) ಮಾಡುವಂತೆ ವುದೂ ಮಾಡುತ್ತಿದ್ದರು. ನಂತರ ಅವರು ಸ್ನಾನ ಮಾಡುತ್ತಿದ್ದರು
عربي ಆಂಗ್ಲ ಉರ್ದು
ನಾನು ಅತ್ಯಧಿಕ ಮದಿ (ಸ್ಖಲನಪೂರ್ವ ದ್ರವ) ಸ್ರವಿಸುವ ವ್ಯಕ್ತಿಯಾಗಿದ್ದೆ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಗಳಿಗಿರುವ ಸ್ಥಾನಮಾನದಿಂದ ನಾನು ಅವರಲ್ಲಿ ಅದರ ಬಗ್ಗೆ ಕೇಳಲು ಸಂಕೋಚಪಡುತ್ತಿದ್ದೆ. ಆದ್ದರಿಂದ, ನಾನು ಮಿಕ್ದಾದ್ ಬಿನ್ ಅಸ್ವದ್ ರಿಗೆ ಆಜ್ಞಾಪಿಸಿದೆ. ಅವರು (ಅದರ ಬಗ್ಗೆ) ಕೇಳಿದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಉತ್ತರಿಸಿದರು: ಅವರು ತಮ್ಮ ಜನನಾಂಗವನ್ನು ತೊಳೆದು ವುದೂ (ಅಂಗಸ್ನಾನ) ನಿರ್ವಹಿಸಲಿ
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸಿದಂತೆ ವುದೂ ನಿರ್ವಹಿಸಿ ತೋರಿಸಿದರು
عربي ಆಂಗ್ಲ ಉರ್ದು
ನೀನು ನಿನ್ನ ಕೈಗಳಿಂದ ಹೀಗೆ ಮಾಡಿದರೆ ನಿನಗೆ ಸಾಕಾಗುತ್ತಿತ್ತು." ನಂತರ ಅವರು ತಮ್ಮ ಕೈಗಳಿಂದ ಒಂದು ಬಾರಿ ನೆಲಕ್ಕೆ ಬಡಿದರು. ನಂತರ ಎಡಗೈಯಿಂದ ಬಲಗೈಯನ್ನು, ಎರಡು ಅಂಗೈಗಳ ಹೊರಭಾಗವನ್ನು ಮತ್ತು ಮುಖವನ್ನು ಸವರಿದರು
عربي ಆಂಗ್ಲ ಉರ್ದು
ಶುಕ್ರವಾರ ದೊಡ್ಡ ಅಶುದ್ಧಿ (ಜನಾಬತ್) ಗಾಗಿರುವ ಸ್ನಾನವನ್ನು ಮಾಡಿ ನಂತರ (ಮಸೀದಿಗೆ) ಹೊರಡುವವನು, ಒಂಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ
عربي ಆಂಗ್ಲ ಉರ್ದು
ಒಬ್ಬ ವ್ಯಕ್ತಿ ವುದೂ ನಿರ್ವಹಿಸಿದರು ಮತ್ತು ತನ್ನ ಪಾದದಲ್ಲಿ ಉಗುರಿನ ಗಾತ್ರದ ಸ್ಥಳವನ್ನು ಬಿಟ್ಟುಬಿಟ್ಟರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ನೋಡಿ ಹೇಳಿದರು: "ಹಿಂದಿರುಗಿ ಹೋಗು ಮತ್ತು ಅತ್ಯುತ್ತಮವಾಗಿ ವುದೂ ನಿರ್ವಹಿಸು." ಆ ವ್ಯಕ್ತಿ ಹಿಂದಿರುಗಿ ಹೋಗಿ, ನಂತರ ನಮಾಝ್ ನಿರ್ವಹಿಸಿದರು
عربي ಆಂಗ್ಲ ಉರ್ದು
ಶುದ್ಧಿಯಾದ ನಂತರ ನಾವು ಕಂದು ಬಣ್ಣ ಅಥವಾ ಹಳದಿ ಬಣ್ಣವನ್ನು ಪರಿಗಣಿಸುತ್ತಿರಲಿಲ್ಲ
عربي ಆಂಗ್ಲ ಉರ್ದು
ನಿಮ್ಮ ಮುಟ್ಟಿನ ಅವಧಿಯು ಸಾಮಾನ್ಯವಾಗಿ ನಿಮ್ಮನ್ನು ತಡೆಹಿಡಿಯುವ ತನಕ ಕಾಯಿರಿ, ತದನಂತರ ಸ್ನಾನ ಮಾಡಿರಿ
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ನಮಾಝ್‌ಗಳಿಗೂ ಪ್ರತ್ಯೇಕವಾಗಿ ವುದೂ ಮಾಡುತ್ತಿದ್ದರು
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂಗಗಳನ್ನು ಒಂದೊಂದು ಬಾರಿ ತೊಳೆಯುವ ಮೂಲಕ ವುದೂ ನಿರ್ವಹಿಸಿದರು
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂಗಗಳನ್ನು ಎರಡೆರಡು ಬಾರಿ ತೊಳೆಯುವ ಮೂಲಕ ವುದೂ ನಿರ್ವಹಿಸಿದರು
عربي ಆಂಗ್ಲ ಉರ್ದು
ನಿಮ್ಮಲ್ಲೊಬ್ಬನಿಗೆ ತನ್ನ ಹೊಟ್ಟೆಯೊಳಗೆ ಏನೋ ಅನುಭವವಾಗಿ, ಅದರಿಂದ ಏನಾದರೂ ಹೊರ ಬಂದಿದೆಯೋ ಇಲ್ಲವೋ ಎಂದು ಸಂಶಯವಾದರೆ, ಸದ್ದು ಕೇಳುವ ತನಕ ಅಥವಾ ವಾಸನೆ ಅನುಭವವಾಗುವ ತನಕ ಅವನು ಮಸೀದಿಯಿಂದ ಹೊರಹೋಗಬಾರದು
عربي ಆಂಗ್ಲ ಉರ್ದು
ವಾರಕ್ಕೊಮ್ಮೆ ತಲೆ ಮತ್ತು ದೇಹವನ್ನು ತೊಳೆಯುವ ಮೂಲಕ ಸ್ನಾನ ಮಾಡುವುದು ಪ್ರತಿಯೊಬ್ಬ ಮುಸಲ್ಮಾನನ ಕರ್ತವ್ಯವಾಗಿದೆ
عربي ಆಂಗ್ಲ ಉರ್ದು
ನಾನು ಇಸ್ಲಾಂ ಸ್ವೀಕರಿಸಲು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದಾಗ, ಅವರು ನನಗೆ ನೀರು ಮತ್ತು ಸಿದ್ರ್ ಎಲೆಗಳಿಂದ ಸ್ನಾನ ಮಾಡಲು ಆದೇಶಿಸಿದರು
عربي ಆಂಗ್ಲ ಉರ್ದು
ಒಮ್ಮೆ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದಾಗ, ಅವರು ಅಲ್ಲಿನ ಜನಸಮೂಹದ ತಿಪ್ಪೆಯ ಬಳಿಗೆ ಸಾಗಿ, ಅಲ್ಲಿ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡಿದರು
عربي ಆಂಗ್ಲ ಉರ್ದು