عَنْ عُقْبَةَ بْنِ عَامِرٍ رضي الله عنه قَالَ: كَانَتْ عَلَيْنَا رِعَايَةُ الْإِبِلِ فَجَاءَتْ نَوْبَتِي فَرَوَّحْتُهَا بِعَشِيٍّ فَأَدْرَكْتُ رَسُولَ اللهِ صَلَّى اللهُ عَلَيْهِ وَسَلَّمَ قَائِمًا يُحَدِّثُ النَّاسَ فَأَدْرَكْتُ مِنْ قَوْلِهِ:
«مَا مِنْ مُسْلِمٍ يَتَوَضَّأُ فَيُحْسِنُ وُضُوءَهُ، ثُمَّ يَقُومُ فَيُصَلِّي رَكْعَتَيْنِ، مُقْبِلٌ عَلَيْهِمَا بِقَلْبِهِ وَوَجْهِهِ، إِلَّا وَجَبَتْ لَهُ الْجَنَّةُ» قَالَ فَقُلْتُ: مَا أَجْوَدَ هَذِهِ، فَإِذَا قَائِلٌ بَيْنَ يَدَيَّ يَقُولُ: الَّتِي قَبْلَهَا أَجْوَدُ، فَنَظَرْتُ فَإِذَا عُمَرُ قَالَ: إِنِّي قَدْ رَأَيْتُكَ جِئْتَ آنِفًا، قَالَ: «مَا مِنْكُمْ مِنْ أَحَدٍ يَتَوَضَّأُ فَيُبْلِغُ - أَوْ فَيُسْبِغُ - الْوَضُوءَ ثُمَّ يَقُولُ: أَشْهَدُ أَنْ لَا إِلَهَ إِلَّا اللهُ وَأَنَّ مُحَمَّدًا عَبْدُ اللهِ وَرَسُولُهُ إِلَّا فُتِحَتْ لَهُ أَبْوَابُ الْجَنَّةِ الثَّمَانِيَةُ يَدْخُلُ مِنْ أَيِّهَا شَاءَ».
[صحيح] - [رواه مسلم] - [صحيح مسلم: 234]
المزيــد ...
ಉಕ್ಬ ಬಿನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಬ್ಬ ಮುಸಲ್ಮಾನನು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸಿ, ನಂತರ ಎದ್ದು ನಿಂತು ತನ್ನ ಹೃದಯ ಮತ್ತು ಮುಖವನ್ನು ಕೇಂದ್ರೀಕರಿಸಿ ಏಕಾಗ್ರತೆಯಿಂದ ಎರಡು ರಕಅತ್ ನಮಾಝ್ ನಿರ್ವಹಿಸಿದರೆ, ಅವನಿಗೆ ಸ್ವರ್ಗವು ಕಡ್ಡಾಯವಾಗದೇ ಇರುವುದಿಲ್ಲ." ನಾನು ಹೇಳಿದೆ: "ಇದು ಎಷ್ಟೊಂದು ಉತ್ತಮವಾಗಿದೆ!" ಆಗ ನನ್ನ ಮುಂದಿದ್ದ ಒಬ್ಬ ವ್ಯಕ್ತಿ ಹೇಳಿದರು: "ಅವರು ಅದಕ್ಕಿಂತ ಮೊದಲು ಹೇಳಿದ್ದು ಅದಕ್ಕಿಂತಲೂ ಉತ್ತಮವಾಗಿದೆ." ನಾನು ಅತ್ತ ನೋಡಿದಾಗ ಅದು ಉಮರ್ ಆಗಿದ್ದರು. ಅವರು ಹೇಳಿದರು: "ನೀನು ಈಗಷ್ಟೇ ಬಂದಿರುವುದೆಂದು ತೋರುತ್ತದೆ. ಅವರು (ಇದಕ್ಕಿಂತ ಮೊದಲು) ಹೇಳಿದ್ದೇನೆಂದರೆ: "ನಿಮ್ಮಲ್ಲೊಬ್ಬನು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸಿ ನಂತರ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ದಾಸ ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ ಎಂದು ಹೇಳಿದರೆ, ಅವನಿಗೆ ಸ್ವರ್ಗದ ಎಂಟು ಬಾಗಿಲುಗಳನ್ನು ತೆರೆದುಕೊಡಲಾಗುತ್ತದೆ. ಅವನು ಇಚ್ಛಿಸುವ ಬಾಗಿಲಿನಿಂದ ಅವನಿಗೆ ಪ್ರವೇಶ ಮಾಡಬಹುದು."
[صحيح] - [رواه مسلم] - [صحيح مسلم - 234]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರೊಡನೆ ಮಾತನಾಡುತ್ತಾ ಎರಡು ಮಹಾ ಶ್ರೇಷ್ಠತೆಗಳ ಬಗ್ಗೆ ತಿಳಿಸುತ್ತಾರೆ.
ಒಂದು: ಒಬ್ಬ ವ್ಯಕ್ತಿ ಉತ್ತಮ ರೀತಿಯಲ್ಲಿ ವುದೂ ಅನ್ನು ಅದರ ಎಲ್ಲಾ ನಿಯಮಗಳನ್ನು ಪಾಲಿಸುತ್ತಾ ಪೂರ್ಣವಾಗಿ ಮತ್ತು ಎಲ್ಲಾ ಅಂಗಗಳಿಗೂ ಅವುಗಳನ್ನು ತೊಳೆಯಬೇಕಾದ ರೀತಿಯಲ್ಲೇ ತೊಳೆದು ವುದೂ ನಿರ್ವಹಿಸಿ ನಂತರ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ದಾಸ ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ ಎಂದು ಹೇಳಿದರೆ, ಅವನಿಗೆ ಸ್ವರ್ಗದ ಎಂಟು ಬಾಗಿಲುಗಳನ್ನು ತೆರೆದುಕೊಡಲಾಗುತ್ತದೆ. ಅವನು ಇಚ್ಛಿಸುವ ಬಾಗಿಲಿನಿಂದ ಅವನು ಪ್ರವೇಶ ಮಾಡಬಹುದು.
ಎರಡು: ಒಬ್ಬ ವ್ಯಕ್ತಿ ಪೂರ್ಣ ರೂಪದಲ್ಲಿ ವುದೂ ನಿರ್ವಹಿಸಿ, ನಂತರ ಎದ್ದು ನಿಂತು ನಿಷ್ಕಳಂಕವಾಗಿ, ಪೂರ್ಣ ವಿನಮ್ರತೆಯಿಂದ, ತನ್ನ ಮುಖ ಮತ್ತು ದೇಹದ ಎಲ್ಲಾ ಅಂಗಗಳನ್ನು ಅಲ್ಲಾಹನಿಗೆ ಶರಣಾಗಿಸಿ, ಎರಡು ರಕಅತ್ ನಮಾಝ್ ನಿರ್ವಹಿಸಿದರೆ, ಅವನಿಗೆ ಸ್ವರ್ಗವು ಕಡ್ಡಾಯವಾಗಿದೆ.