+ -

عَنْ أَبِي هُرَيْرَةَ رضي الله عنه عَنِ النَّبِيِّ صلى الله عليه وسلم قَالَ:
«لَا يَقْبَلُ اللهُ صَلَاةَ أَحَدِكُمْ إِذَا أَحْدَثَ حَتَّى يَتَوَضَّأَ».

[صحيح] - [متفق عليه] - [صحيح البخاري: 6954]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮಲ್ಲೊಬ್ಬರಿಗೆ ಅಶುದ್ಧಿಯುಂಟಾದರೆ ಅವರು ವುದೂ ನಿರ್ವಹಿಸುವ ತನಕ ಅಲ್ಲಾಹು ಅವರ ನಮಾಝನ್ನು ಸ್ವೀಕರಿಸುವುದಿಲ್ಲ."

[صحيح] - [متفق عليه] - [صحيح البخاري - 6954]

ವಿವರಣೆ

ಶುದ್ಧಿಯು ನಮಾಝ್ ಸಿಂಧುವಾಗಲಿರುವ ಷರತ್ತುಗಳಲ್ಲಿ ಒಂದಾಗಿದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸಿದ್ದಾರೆ. ಆದ್ದರಿಂದ, ನಮಾಝ್ ನಿರ್ವಹಿಸಲು ಬಯಸುವವರು, ಅವರಿಗೆ ಮಲಮೂತ್ರ ವಿಸರ್ಜನೆ, ನಿದ್ದೆ ಮುಂತಾದ ವುದೂ ಅಸಿಂಧುವಾಗುವ ಕಾರ್ಯಗಳಲ್ಲಿ ಏನಾದರೊಂದು ಸಂಭವಿಸಿದ್ದರೆ ನಮಾಝ್‌ಗೆ ಮೊದಲು ವುದೂ ನಿರ್ವಹಿಸುವುದು ಕಡ್ಡಾಯವಾಗಿದೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية الموري المالاجاشية الأورومو الولوف الأذربيجانية الأوكرانية الجورجية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಅಶುದ್ಧಿಯಲ್ಲಿರುವವರು—ಅವರು ದೊಡ್ಡ ಅಶುದ್ಧಿಯಲ್ಲಿದ್ದರೆ ಸ್ನಾನ ಮಾಡುವ ತನಕ ಮತ್ತು ಚಿಕ್ಕ ಅಶುದ್ಧಿಯಲ್ಲಿದ್ದರೆ ವುದೂ ನಿರ್ವಹಿಸುವ ತನಕ ಅವರ ನಮಾಝ್ ಸ್ವೀಕರಿಸಲ್ಪಡುವುದಿಲ್ಲ.
  2. ವುದೂ ಎಂದರೆ, ಅಂಗೈಗಳನ್ನು ತೊಳೆಯುವುದು, ನೀರನ್ನು ಬಾಯಿಗೆ ಹಾಕಿ ಮುಕ್ಕಳಿಸಿ ಉಗಿಯುವುದು, ನಂತರ ಶ್ವಾಸದೊಂದಿಗೆ ನೀರನ್ನು ಮೂಗಿನೊಳಗೆ ಎಳೆದು ರಭಸವಾಗಿ ಹೊರಬಿಡುವುದು, ನಂತರ ಮುಖವನ್ನು ಮೂರು ಬಾರಿ ತೊಳೆಯುವುದು, ನಂತರ ಮೊಣಕೈಗಳನ್ನು ಸೇರಿಸಿ ಎರಡು ಕೈಗಳನ್ನು ಮೂರು ಬಾರಿ ತೊಳೆಯುವುದು, ನಂತರ ತಲೆಯನ್ನು ಸಂಪೂರ್ಣವಾಗಿ ಒಂದು ಬಾರಿ ಸವರುವುದು, ನಂತರ ಕಾಲಿನ ಹರಡುಗಂಟುಗಳನ್ನು ಸೇರಿಸಿ ಎರಡು ಕಾಲುಗಳನ್ನು ಮೂರು ಬಾರಿ ತೊಳೆಯುವುದು.