عَنْ أُمِّ قَيْسٍ بِنْتِ مِحْصَنٍ رَضيَ اللهُ عنها:
أَنَّهَا أَتَتْ بِابْنٍ لَهَا صَغِيرٍ لَمْ يَأْكُلِ الطَّعَامَ إِلَى رَسُولِ اللَّهِ صَلَّى اللهُ عَلَيْهِ وَسَلَّمَ، فَأَجْلَسَهُ رَسُولُ اللَّهِ صَلَّى اللهُ عَلَيْهِ وَسَلَّمَ فِي حَجْرِهِ، فَبَالَ عَلَى ثَوْبِهِ، فَدَعَا بِمَاءٍ، فَنَضَحَهُ وَلَمْ يَغْسِلْهُ.
[صحيح] - [متفق عليه] - [صحيح البخاري: 223]
المزيــد ...
ಉಮ್ಮ್ ಖೈಸ್ ಬಿಂತ್ ಮಿಹ್ಸನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಅವರು ತಮ್ಮ ಚಿಕ್ಕ ಮಗುವನ್ನು (ಗಂಡು ಮಗುವನ್ನು) ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಕರೆತಂದರು. ಆ ಮಗು ಇನ್ನೂ (ಘನ) ಆಹಾರವನ್ನು ತಿನ್ನುತ್ತಿರಲಿಲ್ಲ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು (ಮಗುವನ್ನು) ತಮ್ಮ ಮಡಿಲಲ್ಲಿ ಕುಳ್ಳಿರಿಸಿಕೊಂಡರು. ಆಗ ಅವನು ಅವರ ವಸ್ತ್ರದ ಮೇಲೆ ಮೂತ್ರ ವಿಸರ್ಜಿಸಿದನು. ಅವರು ನೀರನ್ನು ತರಿಸಿ, ಅದನ್ನು (ಮೂತ್ರದ ಮೇಲೆ) ಚಿಮುಕಿಸಿದರು. ಅವರು ಅದನ್ನು ತೊಳೆಯಲಿಲ್ಲ.
[صحيح] - [متفق عليه] - [صحيح البخاري - 223]
ಉಮ್ಮ್ ಖೈಸ್ ಬಿಂತ್ ಮಿಹ್ಸನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ತಮ್ಮ ಮಗುವನ್ನು ಕರೆತಂದರು. ಅದು ವಯಸ್ಸಿನಲ್ಲಿ ಚಿಕ್ಕದಾಗಿದ್ದ ಕಾರಣ ಇನ್ನೂ ಆಹಾರ ತಿನ್ನಲು ಪ್ರಾರಂಭಿಸಿರಲಿಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು (ಮಗುವನ್ನು) ತಮ್ಮ ಮಡಿಲಲ್ಲಿ ಕುಳ್ಳಿರಿಸಿಕೊಂಡರು. ಆಗ ಮಗು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಸ್ತ್ರದ ಮೇಲೆ ಮೂತ್ರ ವಿಸರ್ಜಿಸಿತು. ಪ್ರವಾದಿಯವರು ನೀರನ್ನು ತರಿಸಿ, ಅದನ್ನು ತಮ್ಮ ವಸ್ತ್ರದ ಮೇಲೆ ಚಿಮುಕಿಸಿದರು. ಅವರು ಅದನ್ನು ತೊಳೆಯಲಿಲ್ಲ.