+ -

عَنْ عَلِيٍّ رضي الله عنه قَالَ:
كُنْتُ رَجُلًا مَذَّاءً وَكُنْتُ أَسْتَحْيِي أَنْ أَسْأَلَ النَّبِيَّ صَلَّى اللهُ عَلَيْهِ وَسَلَّمَ لِمَكَانِ ابْنَتِهِ فَأَمَرْتُ الْمِقْدَادَ بْنَ الْأَسْوَدِ فَسَأَلَهُ فَقَالَ: «يَغْسِلُ ذَكَرَهُ وَيَتَوَضَّأُ». وَلِلبُخَاريِّ: فَقَالَ: «تَوَضَّأْ وَاغْسِلْ ذَكَرَكَ».

[صحيح] - [متفق عليه] - [صحيح مسلم: 303]
المزيــد ...

ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ನಾನು ಅತ್ಯಧಿಕ ಮದಿ (ಸ್ಖಲನಪೂರ್ವ ದ್ರವ) ಸ್ರವಿಸುವ ವ್ಯಕ್ತಿಯಾಗಿದ್ದೆ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಗಳಿಗಿರುವ ಸ್ಥಾನಮಾನದಿಂದ ನಾನು ಅವರಲ್ಲಿ ಅದರ ಬಗ್ಗೆ ಕೇಳಲು ಸಂಕೋಚಪಡುತ್ತಿದ್ದೆ. ಆದ್ದರಿಂದ, ನಾನು ಮಿಕ್ದಾದ್ ಬಿನ್ ಅಸ್ವದ್ ರಿಗೆ ಆಜ್ಞಾಪಿಸಿದೆ. ಅವರು (ಅದರ ಬಗ್ಗೆ) ಕೇಳಿದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಉತ್ತರಿಸಿದರು: ಅವರು ತಮ್ಮ ಜನನಾಂಗವನ್ನು ತೊಳೆದು ವುದೂ (ಅಂಗಸ್ನಾನ) ನಿರ್ವಹಿಸಲಿ." ಬುಖಾರಿಯಲ್ಲಿರುವ ವರದಿಯಲ್ಲಿ ಹೀಗಿದೆ: "ಅವರು ಉತ್ತರಿಸಿದರು: ನೀವು ವುದೂ ನಿರ್ವಹಿಸಿರಿ ಮತ್ತು ನಿಮ್ಮ ಜನನಾಂಗವನ್ನು ತೊಳೆಯಿರಿ."

[صحيح] - [متفق عليه] - [صحيح مسلم - 303]

ವಿವರಣೆ

ಅಲಿ ಬಿನ್ ಅಬೂತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಇಲ್ಲಿ ತಿಳಿಸುವುದೇನೆಂದರೆ, ಅವರು ಅತ್ಯಧಿಕ ಮದಿ (ಕಾಮೋದ್ರೇಕವಾಗುವಾಗ ಅಥವಾ ಸ್ಖಲನಕ್ಕೆ ಮೊದಲು ಹೊರಬರುವ ತೆಳುವಾದ, ಜಿಗುಟಾದ ಬಿಳಿ ದ್ರವ) ಸ್ರವಿಸುವ ವ್ಯಕ್ತಿಯಾಗಿದ್ದೆ. ಅದು ಸ್ರವಿಸುವಾಗ ಏನು ಮಾಡಬೇಕೆಂದು ಅವರಿಗೆ ತಿಳಿದಿರಲಿಲ್ಲ. ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಗಳು ಫಾತಿಮರ ಗಂಡನಾಗಿರುವುದರಿಂದ ಅದರ ಬಗ್ಗೆ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲು ಸಂಕೋಚಪಡುತ್ತಿದ್ದರು. ಆದ್ದರಿಂದ ಅದರ ಬಗ್ಗೆ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲು ಅವರು ಮಿಕ್ದಾದ್ ಬಿನ್ ಅಸ್ವದ್ ರಲ್ಲಿ ವಿನಂತಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನನಾಂಗವನ್ನು ತೊಳೆದು ನಂತರ ವುದೂ ನಿರ್ವಹಿಸಬೇಕೆಂದು ಉತ್ತರಿಸಿದರು.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية الموري المالاجاشية الأورومو الولوف الأذربيجانية الأوكرانية الجورجية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಅಲಿ ಬಿನ್ ಅಬೂತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಏಕೆಂದರೆ ಮಧ್ಯವರ್ತಿಯ ಮೂಲಕವಾದರೂ ಕೇಳಲು ಸಂಕೋಚವು ಅವರಿಗೆ ತಡೆಯಾಗಲಿಲ್ಲ.
  2. ಫತ್ವಾ ಕೇಳಲು ತನ್ನ ಪರವಾಗಿ ಇನ್ನೊಬ್ಬರನ್ನು ಕಳುಹಿಸಲು ಅನುಮತಿಯಿದೆ.
  3. ವ್ಯಕ್ತಿ ಒಳಿತಿನ ಉದ್ದೇಶದಿಂದ ತನ್ನ ದೇಹದ ಬಗ್ಗೆ ತಾನು ಸಂಕೋಚಪಡುವುದನ್ನು ತಿಳಿಸಲು ಅನುಮತಿಯಿದೆ.
  4. ಮದಿ ಮಾಲಿನ್ಯವಾಗಿದೆ. ಅದು ದೇಹ ಮತ್ತು ಬಟ್ಟೆಗೆ ತಾಗಿದರೆ ತೊಳೆಯುವುದು ಕಡ್ಡಾಯವಾಗಿದೆ.
  5. ಮದಿ ಹೊರಬಂದರೆ ವುದೂ (ಅಂಗಸ್ನಾನ) ಅಸಿಂಧುವಾಗುತ್ತದೆ.
  6. ಇನ್ನೊಂದು ಹದೀಸಿನಲ್ಲಿ ವರದಿಯಾಗಿರುವಂತೆ ಜನನಾಂಗ ಮತ್ತು ವೃಷಣಗಳನ್ನು ತೊಳೆಯುವುದು ಕಡ್ಡಾಯವಾಗಿದೆ.