عَن أَبِي أُمَامَةَ رضي الله عنه قَالَ: سَمِعْتَ رَسُولَ اللهِ صَلَّى اللَّهُ عَلَيْهِ وَسَلَّمَ يَخْطُبُ فِي حَجَّةِ الوَدَاعِ فَقَالَ:
«اتَّقُوا اللَّهَ رَبَّكُمْ، وَصَلُّوا خَمْسَكُمْ، وَصُومُوا شَهْرَكُمْ، وَأَدُّوا زَكَاةَ أَمْوَالِكُمْ، وَأَطِيعُوا ذَا أَمْرِكُمْ تَدْخُلُوا جَنَّةَ رَبِّكُمْ».
[صحيح] - [رواه الترمذي وأحمد] - [سنن الترمذي: 616]
المزيــد ...
ಅಬೂ ಉಮಾಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ವಿದಾಯದ ಹಜ್ಜ್‌ನಲ್ಲಿ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಭಯಪಡಿರಿ, ನಿಮ್ಮ ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸಿರಿ, ನಿಮ್ಮ (ರಮದಾನ್) ತಿಂಗಳಲ್ಲಿ ಉಪವಾಸ ಆಚರಿಸಿರಿ, ನಿಮ್ಮ ಸಂಪತ್ತಿನ ಝಕಾತನ್ನು ನೀಡಿರಿ ಮತ್ತು ನಿಮ್ಮ ಆಡಳಿತಗಾರರನ್ನು ಅನುಸರಿಸಿರಿ. ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಸ್ವರ್ಗವನ್ನು ಪ್ರವೇಶಿಸುವಿರಿ."
[صحيح] - [رواه الترمذي وأحمد] - [سنن الترمذي - 616]
ಹಿಜರಿ ಹತ್ತನೇ ವರ್ಷ ವಿದಾಯದ ಹಜ್ಜ್‌ನ ಸಂದರ್ಭದಲ್ಲಿ ಅರಫಾ ದಿನದಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಚನ ನೀಡಿದರು. ಅದನ್ನು ವಿದಾಯದ ಹಜ್ಜ್ ಎಂದು ಕರೆಯಲು ಕಾರಣವೇನೆಂದರೆ, ಅದು ಅವರು ಕೊನೆಯದಾಗಿ ನಿರ್ವಹಿಸಿದ ಹಜ್ಜ್ ಆಗಿತ್ತು. ಅಲ್ಲಾಹನ ಆಜ್ಞೆಗಳನ್ನು ಪಾಲಿಸುತ್ತಾ ಮತ್ತು ಅವನ ನಿಷೇಧಗಳಿಂದ ದೂರವಿರುತ್ತಾ ಅವನನ್ನು ಭಯಪಡಬೇಕೆಂದು ಅವರು ಎಲ್ಲಾ ಜನರಿಗೂ ಆದೇಶಿಸಿದರು. ಅಲ್ಲಾಹು ದಿನರಾತ್ರಿ ನಿರ್ವಹಿಸಬೇಕೆಂದು ಕಡ್ಡಾಯಗೊಳಿಸಿದ ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸಬೇಕೆಂದು ಆದೇಶಿಸಿದರು. ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸಬೇಕೆಂದು ಆದೇಶಿಸಿದರು. ಸಂಪತ್ತಿನ ಝಕಾತನ್ನು ಅದರ ಹಕ್ಕುದಾರರಿಗೆ ಯಾವುದೇ ಜಿಪುಣತನ ಮಾಡದೆ ಕೊಟ್ಟುಬಿಡಲು ಆದೇಶಿಸಿದರು. ಅಲ್ಲಾಹು ಅವರ ಮೇಲೆ ಆಡಳಿತ ನಡೆಸಲು ನಿಶ್ಚಯಿಸಿದ ಆಡಳಿತಗಾರರನ್ನು ಅಲ್ಲಾಹನ ಆಜ್ಞೆಗಳಿಗೆ ವಿರುದ್ಧವಾಗದ ವಿಷಯಗಳಲ್ಲಿ ಅನುಸರಿಸಲು ಆದೇಶಿಸಿದರು. ಯಾರು ಈ ಎಲ್ಲಾ ಕಾರ್ಯಗಳನ್ನು ಮಾಡುತ್ತಾರೋ ಅವರಿಗೆ ಸಿಗುವ ಪ್ರತಿಫಲವು ಸ್ವರ್ಗ ಪ್ರವೇಶವಾಗಿದೆ.