+ -

عَنْ مُعَاذِ بْنِ جَبَلٍ رضي الله عنه:
أَنَّ رَسُولَ صَلَّى عَلَيْهِ وَسَلَّمَ أَخَذَ بِيَدِهِ، وَقَالَ: «يَا مُعَاذُ، وَاللَّهِ إِنِّي لَأُحِبُّكَ»، فَقَالَ: «أُوصِيكَ يَا مُعَاذُ لَا تَدَعَنَّ فِي دُبُرِ كُلِّ صَلَاةٍ تَقُولُ: اللَّهُمَّ أَعِنِّي عَلَى ذِكْرِكَ وَشُكْرِكَ وَحُسْنِ عِبَادَتِكَ».

[صحيح] - [رواه أبو داود والنسائي وأحمد] - [سنن أبي داود: 1522]
المزيــد ...

ಮುಆದ್ ಬಿನ್ ಜಬಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕೈ ಹಿಡಿದು ಹೇಳಿದರು: "ಓ ಮುಆದ್, ಅಲ್ಲಾಹನಾಣೆ! ಖಂಡಿತವಾಗಿಯೂ ನಾನು ನಿನ್ನನ್ನು ಪ್ರೀತಿಸುತ್ತೇನೆ." ನಂತರ ಅವರು ಹೇಳಿದರು: "ಓ ಮುಆದ್, ನಾನು ನಿನಗೆ ಉಪದೇಶ ಮಾಡುತ್ತಿದ್ದೇನೆ. ಎಲ್ಲಾ ನಮಾಝ್‌ಗಳ ನಂತರ ಹೀಗೆ ಹೇಳುವುದನ್ನು ಬಿಟ್ಟುಬಿಡಬೇಡ: ಓ ಅಲ್ಲಾಹ್! ನಿನ್ನನ್ನು ಸ್ಮರಿಸಲು, ನಿನಗೆ ಕೃತಜ್ಞತೆ ಸಲ್ಲಿಸಲು ಮತ್ತು ಉತ್ತಮವಾದ ರೀತಿಯಲ್ಲಿ ನಿನ್ನ ಆರಾಧನೆ ಮಾಡಲು ನನಗೆ ಸಹಾಯ ಮಾಡು."

[صحيح] - - [سنن أبي داود - 1522]

ವಿವರಣೆ

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರ ಕೈಯನ್ನು ಹಿಡಿದು ಹೇಳಿದರು: "ಓ ಮುಆದ್, ಅಲ್ಲಾಹನಾಣೆ! ಖಂಡಿತವಾಗಿಯೂ ನಾನು ನಿನ್ನನ್ನು ಪ್ರೀತಿಸುತ್ತೇನೆ. ನಾನು ನಿನಗೆ ಉಪದೇಶ ಮಾಡುತ್ತಿದ್ದೇನೆ. ಎಲ್ಲಾ ನಮಾಝ್‌ಗಳ ನಂತರ ಹೀಗೆ ಹೇಳುವುದನ್ನು ಬಿಟ್ಟುಬಿಡಬೇಡ: ಓ ಅಲ್ಲಾಹ್! ಸತ್ಕರ್ಮಕ್ಕೆ ಹತ್ತಿರಗೊಳಿಸುವ ಎಲ್ಲಾ ಮಾತು ಮತ್ತು ಕರ್ಮಗಳಲ್ಲೂ ನಿನ್ನನ್ನು ಸ್ಮರಿಸಲು ನನಗೆ ಸಹಾಯ ಮಾಡು. ಒಂದು ಹೊಸ ಅನುಗ್ರಹ ಲಭ್ಯವಾಗುವಾಗ ಅಥವಾ ಒಂದು ಆಪತ್ತು ನಿವಾರಣೆಯಾಗುವಾಗ ನಿನಗೆ ಕೃತಜ್ಞತೆ ಸಲ್ಲಿಸಲು ಸಹಾಯ ಮಾಡು. ನಿಷ್ಕಳಂಕವಾಗಿ ಅಲ್ಲಾಹನಿಗೆ ಮತ್ತು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸುತ್ತಾ ಉತ್ತಮ ರೀತಿಯಲ್ಲಿ ಆರಾಧನೆ ಮಾಡಲು ನನಗೆ ಸಹಾಯ ಮಾಡು.

ಹದೀಸಿನ ಪ್ರಯೋಜನಗಳು

  1. ಒಬ್ಬ ವ್ಯಕ್ತಿಯೊಡನೆ ಅಲ್ಲಾಹನಿಗಾಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಲು ಅನುಮತಿಯಿದೆ.
  2. ಕಡ್ಡಾಯ ಮತ್ತು ಐಚ್ಛಿಕವಾದ ಎಲ್ಲಾ ನಮಾಝ್‌ಗಳ ನಂತರ ಈ ಪ್ರಾರ್ಥನೆಯನ್ನು ಪಠಿಸುವುದು ಅಪೇಕ್ಷಣೀಯವಾಗಿದೆ.
  3. ಕನಿಷ್ಠ ಶಬ್ದಗಳ ಈ ಪ್ರಾರ್ಥನೆಯು ಇಹಲೋಕ ಮತ್ತು ಪರಲೋಕದ ಎಲ್ಲಾ ಬೇಡಿಕೆಗಳನ್ನು ಒಳಗೊಂಡಿದೆ.
  4. ಸತ್ಯದ ಬಗ್ಗೆ ಉಪದೇಶ ಮಾಡುವುದು ಮತ್ತು ಒಳಿತು ಹಾಗೂ ದೇವಭಯದ ವಿಷಯಗಳಲ್ಲಿ ಪರಸ್ಪರ ಸಲಹೆ ಮತ್ತು ಸಹಕಾರ ನೀಡುವುದು ಅಲ್ಲಾಹನಿಗಾಗಿ ಪ್ರೀತಿಸುವುದರ ಪ್ರಯೋಜನಗಳಲ್ಲಿ ಸೇರಿದೆ.
  5. ತೀಬಿ ಹೇಳಿದರು: "ಅಲ್ಲಾಹನ ಸ್ಮರಣೆಯು ಹೃದಯವು ವಿಶಾಲವಾಗಲು ಪೀಠಿಕೆಯಾಗಿದೆ, ಅವನಿಗೆ ಕೃತಜ್ಞತೆ ಸಲ್ಲಿಸುವುದು ಅನುಗ್ರಹಗಳನ್ನು ಪಡೆಯುವ ಮಾಧ್ಯಮವಾಗಿದೆ ಮತ್ತು ನಿರ್ದೇಶಿಸಲಾದ ರೀತಿಯಲ್ಲಿ ಉತ್ತಮವಾಗಿ ಅವನನ್ನು ಆರಾಧಿಸುವುದು ಅಲ್ಲಾಹನಿಂದ ದೂರಗೊಳಿಸುವ ವಿಷಯಗಳಿಂದ ಮುಕ್ತವಾಗುವುದಾಗಿದೆ."
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية الرومانية المجرية الموري المالاجاشية الأورومو الأوكرانية الجورجية المقدونية
ಅನುವಾದಗಳನ್ನು ತೋರಿಸಿ
ಇನ್ನಷ್ಟು