+ -

عَنْ جَرِيرِِ بْنِ عَبْدِ اللَّهِ رضي الله عنه قَالَ:
بَايَعْتُ رَسُولَ اللَّهِ صَلَّى اللهُ عَلَيْهِ وَسَلَّمَ عَلَى شَهَادَةِ أَنْ لاَ إِلَهَ إِلَّا اللَّهُ، وَأَنَّ مُحَمَّدًا رَسُولُ اللَّهِ، وَإِقَامِ الصَّلاَةِ، وَإِيتَاءِ الزَّكَاةِ، وَالسَّمْعِ وَالطَّاعَةِ، وَالنُّصْحِ لِكُلِّ مُسْلِمٍ.

[صحيح] - [متفق عليه] - [صحيح البخاري: 2157]
المزيــد ...

ಜರೀರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುತ್ತೇನೆ, ನಮಾಝ್ ಸಂಸ್ಥಾಪಿಸುತ್ತೇನೆ, ಝಕಾತ್ ನೀಡುತ್ತೇನೆ, ಕೇಳುತ್ತೇನೆ ಮತ್ತು ಅನುಸರಿಸುತ್ತೇನೆ ಹಾಗೂ ಎಲ್ಲಾ ಮುಸ್ಲಿಮರ ಹಿತಚಿಂತಕನಾಗಿರುತ್ತೇನೆ ಎಂದು ನಾನು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷ್ಠೆಯ ಪ್ರತಿಜ್ಞೆ ಮಾಡಿದೆ.

[صحيح] - [متفق عليه] - [صحيح البخاري - 2157]

ವಿವರಣೆ

ಸಹಾಬಿವರ್ಯರಾದ ಜರೀರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಅವರು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಕೆಳಗಿನ ವಿಷಯಗಳನ್ನು ಪಾಲಿಸುತ್ತೇನೆಂದು ನಿಷ್ಠೆಯ ಪ್ರತಿಜ್ಞೆ ಮಾಡಿದರು: ಏಕದೇವವಿಶ್ವಾಸದಲ್ಲಿರುತ್ತೇನೆ, ದಿನರಾತ್ರಿಯಲ್ಲಿ ಐದು ವೇಳೆಯ ಕಡ್ಡಾಯ ನಮಾಝ್‌ಗಳನ್ನು ಅವುಗಳ ಷರತ್ತುಗಳು, ಸ್ತಂಭಗಳು, ಕಡ್ಡಾಯಗಳು ಮತ್ತು ಐಚ್ಛಿಕ ಕಾರ್ಯಗಳನ್ನು ಪಾಲಿಸಿ ನಿರ್ವಹಿಸುತ್ತೇನೆ, ಕಡ್ಡಾಯ ಝಕಾತ್ ನೀಡುತ್ತೇನೆ, ಅದು ಆರ್ಥಿಕ ಆರಾಧನೆಯಾಗಿದ್ದು ಅದನ್ನು ಶ್ರೀಮಂತರಿಂದ ಪಡೆದು ಬಡವರು ಮುಂತಾದ ಅದರ ಫಲಾನುಭವಿಗಳಿಗೆ ನೀಡಲಾಗುತ್ತದೆ, ಆಡಳಿತಗಾರರನ್ನು ಅನುಸರಿಸುತ್ತೇನೆ ಮತ್ತು ಎಲ್ಲಾ ಮುಸ್ಲಿಮರಿಗೂ ಹಿತಚಿಂತಕನಾಗಿರುತ್ತೇನೆ, ಅಂದರೆ ಮಾತು ಮತ್ತು ಕ್ರಿಯೆಗಳ ಮೂಲಕ ಮುಸ್ಲಿಮರಿಗೆ ಪ್ರಯೋಜನ ನೀಡಲು, ಅವರಿಗೆ ಒಳಿತನ್ನು ತಲುಪಿಸಲು ಮತ್ತು ಅವರಿಂದ ಕೆಡುಕನ್ನು ತಡೆಗಟ್ಟಲು ಪ್ರಯತ್ನಿಸುತ್ತೇನೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية المالاجاشية الأورومو
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ನಮಾಝ್ ಮತ್ತು ಝಕಾತ್‌ನ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ. ಇವೆರಡೂ ಇಸ್ಲಾಮಿನ ಸ್ತಂಭಗಳಲ್ಲಿ ಒಳಪಡುತ್ತವೆ.
  2. ಹಿತಚಿಂತನೆಯ ಮತ್ತು ಮುಸಲ್ಮಾನರು ಪರಸ್ಪರ ಹಿತಚಿಂತಕರಾಗಿರಬೇಕಾದ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ. ಎಲ್ಲಿಯವರೆಗೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದಕ್ಕಾಗಿ ಸಹಾಬಿಗಳಿಂದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಿಷ್ಠೆಯ ಪ್ರತಿಜ್ಞೆ ಸ್ವೀಕರಿಸಿದ್ದರು.
ಇನ್ನಷ್ಟು