عَنْ حُذَيْفَةَ رَضيَ اللهُ عنه قَالَ:
كُنَّا إِذَا حَضَرْنَا مَعَ النَّبِيِّ صَلَّى اللهُ عَلَيْهِ وَسَلَّمَ طَعَامًا لَمْ نَضَعْ أَيْدِيَنَا حَتَّى يَبْدَأَ رَسُولُ اللهِ صَلَّى اللهُ عَلَيْهِ وَسَلَّمَ فَيَضَعَ يَدَهُ، وَإِنَّا حَضَرْنَا مَعَهُ مَرَّةً طَعَامًا، فَجَاءَتْ جَارِيَةٌ كَأَنَّهَا تُدْفَعُ، فَذَهَبَتْ لِتَضَعَ يَدَهَا فِي الطَّعَامِ، فَأَخَذَ رَسُولُ اللهِ صَلَّى اللهُ عَلَيْهِ وَسَلَّمَ بِيَدِهَا، ثُمَّ جَاءَ أَعْرَابِيٌّ كَأَنَّمَا يُدْفَعُ فَأَخَذَ بِيَدِهِ، فَقَالَ رَسُولُ اللهِ صَلَّى اللهُ عَلَيْهِ وَسَلَّمَ: «إِنَّ الشَّيْطَانَ يَسْتَحِلُّ الطَّعَامَ أَنْ لَا يُذْكَرَ اسْمُ اللهِ عَلَيْهِ، وَإِنَّهُ جَاءَ بِهَذِهِ الْجَارِيَةِ لِيَسْتَحِلَّ بِهَا فَأَخَذْتُ بِيَدِهَا، فَجَاءَ بِهَذَا الْأَعْرَابِيِّ لِيَسْتَحِلَّ بِهِ فَأَخَذْتُ بِيَدِهِ، وَالَّذِي نَفْسِي بِيَدِهِ، إِنَّ يَدَهُ فِي يَدِي مَعَ يَدِهَا».
[صحيح] - [رواه مسلم] - [صحيح مسلم: 2017]
المزيــد ...
ಹುದೈಫಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ನಾವು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಊಟಕ್ಕೆ ಹಾಜರಾದಾಗ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಊಟ ಮಾಡಲು) ಪ್ರಾರಂಭಿಸಿ ತಮ್ಮ ಕೈಯನ್ನು (ಊಟದಲ್ಲಿ) ಇಡುವವರೆಗೆ ನಾವು ನಮ್ಮ ಕೈಗಳನ್ನು ಇಡುತ್ತಿರಲಿಲ್ಲ. ಒಮ್ಮೆ ನಾವು ಅವರೊಂದಿಗೆ ಊಟಕ್ಕೆ ಹಾಜರಾಗಿದ್ದೆವು. ಆಗ ಒಬ್ಬ ಹುಡುಗಿ ಯಾರೋ ದೂಡಿದಂತೆ (ವೇಗವಾಗಿ) ಬಂದು, ತನ್ನ ಕೈಯನ್ನು ಊಟದಲ್ಲಿಡಲು ಹೋದಳು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವಳ ಕೈಯನ್ನು ಹಿಡಿದರು. ನಂತರ ಒಬ್ಬ ಮರುಭೂಮಿ ನಿವಾಸಿ ಅರಬ್ಬಿ ಯಾರೋ ದೂಡಿದಂತೆ ಬಂದನು. ಆಗ ಅವರು (ಪ್ರವಾದಿ) ಅವನ ಕೈಯನ್ನೂ ಹಿಡಿದರು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಯಾವ ಆಹಾರದ ಮೇಲೆ ಅಲ್ಲಾಹನ ಹೆಸರನ್ನು ಉಚ್ಚರಿಸಲಾಗುವುದಿಲ್ಲವೋ ಅದನ್ನು ಶೈತಾನನು ತನಗಾಗಿ ಹಲಾಲ್ ಮಾಡಿಕೊಳ್ಳುತ್ತಾನೆ (ಅಂದರೆ, ಅದರಲ್ಲಿ ಪಾಲ್ಗೊಳ್ಳುತ್ತಾನೆ). ಅವನು ಈ ಹುಡುಗಿಯ ಮೂಲಕ (ಆಹಾರವನ್ನು) ಹಲಾಲ್ ಮಾಡಿಕೊಳ್ಳಲು ಅವಳನ್ನು ಕರೆತಂದನು. ಆಗ ನಾನು ಅವಳ ಕೈಯನ್ನು ಹಿಡಿದೆನು. ನಂತರ ಅವನು ಈ ಮರುಭೂಮಿ ನಿವಾಸಿಯ ಮೂಲಕ (ಆಹಾರವನ್ನು) ಹಲಾಲ್ ಮಾಡಿಕೊಳ್ಳಲು ಅವನನ್ನು ಕರೆತಂದನು, ಆಗ ನಾನು ಅವನ ಕೈಯನ್ನೂ ಹಿಡಿದೆನು. ಯಾರ ಕೈಯಲ್ಲಿ ನನ್ನ ಆತ್ಮವಿದೆಯೋ ಅವನ ಮೇಲಾಣೆ, ಖಂಡಿತವಾಗಿಯೂ ಅವನ (ಶೈತಾನನ) ಕೈ ಅವಳ ಕೈಯೊಂದಿಗೆ ನನ್ನ ಕೈಯಲ್ಲಿದೆ".
[صحيح] - [رواه مسلم] - [صحيح مسلم - 2017]
ಹುದೈಫಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ; ಅವರು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಊಟಕ್ಕೆ ಹಾಜರಾದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಊಟ ಮಾಡಲು ಪ್ರಾರಂಭಿಸಿ ತಮ್ಮ ಕೈಯನ್ನು ಅದರಲ್ಲಿ ಇಡುವವರೆಗೆ ಅವರು (ಅನುಯಾಯಿಗಳು) ತಮ್ಮ ಕೈಗಳನ್ನು ಇಡುತ್ತಿರಲಿಲ್ಲ. ಒಮ್ಮೆ ನಾವು ಅವರೊಂದಿಗೆ ಊಟಕ್ಕೆ ಹಾಜರಾಗಿದ್ದೆವು. ಆಗ ಒಬ್ಬ ಹುಡುಗಿ ಅತಿಯಾದ ವೇಗದಿಂದ, ಯಾರೋ ದೂಡುತ್ತಿರುವಂತೆ ಬಂದಳು. ಅವಳು ತನ್ನ ಕೈಯನ್ನು ಊಟದಲ್ಲಿಡುವಷ್ಟರಲ್ಲಿ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವಳ ಕೈಯನ್ನು ಹಿಡಿದರು. ನಂತರ ಒಬ್ಬ ಮರುಭೂಮಿ ನಿವಾಸಿ ಯಾರೋ ದೂಡುತ್ತಿರುವಂತೆ ಬಂದು, ಊಟವನ್ನು ಮುಟ್ಟುವ ಮೊದಲೇ ಅವರು (ಪ್ರವಾದಿ) ಅವನ ಕೈಯನ್ನೂ ಹಿಡಿದರು. ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಖಂಡಿತವಾಗಿಯೂ ಒಬ್ಬ ವ್ಯಕ್ತಿಯು ಅಲ್ಲಾಹನ ಹೆಸರನ್ನು ಉಚ್ಚರಿಸದೆ ಊಟವನ್ನು ಪ್ರಾರಂಭಿಸಿದರೆ ಅದನ್ನು ತಿನ್ನಲು ಶೈತಾನನು ಸಮರ್ಥನಾಗುತ್ತಾನೆ. ಅವನು ಈ ಹುಡುಗಿಯ ಮೂಲಕ (ಆಹಾರವನ್ನು) ಹಲಾಲ್ ಮಾಡಿಕೊಳ್ಳಲು ಅವಳನ್ನು ಕರೆತಂದನು. ಆಗ ನಾನು ಅವಳ ಕೈಯನ್ನು ಹಿಡಿದೆನು. ನಂತರ ಅವನು ಈ ಮರುಭೂಮಿ ನಿವಾಸಿಯ ಮೂಲಕ (ಆಹಾರವನ್ನು) ಹಲಾಲ್ ಮಾಡಿಕೊಳ್ಳಲು ಅವನನ್ನು ಕರೆತಂದನು. ಆಗ ನಾನು ಅವನ ಕೈಯನ್ನೂ ಹಿಡಿದೆನು. ಯಾರ ಕೈಯಲ್ಲಿ ನನ್ನ ಆತ್ಮವಿದೆಯೋ ಅವನ ಮೇಲಾಣೆ, ಖಂಡಿತವಾಗಿಯೂ ಶೈತಾನನ ಕೈ ಅವಳ ಕೈಯೊಂದಿಗೆ ನನ್ನ ಕೈಯಲ್ಲಿದೆ. ನಂತರ ಅವರು (ಪ್ರವಾದಿ) ಅಲ್ಲಾಹನ ಹೆಸರನ್ನು ಉಚ್ಚರಿಸಿ ಊಟ ಮಾಡಿದರು.